Zepto delivery partner salary: ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಎಷ್ಟೋ ಜನರಿಗೆ ಕೆಲಸವೇ ಇಲ್ಲ. ಐಟಿ ಉದ್ಯಮ ಕೂಡ ಕುಸಿಯುತ್ತಿದೆ. ಹೀಗಾಗಿ ಡೆಲಿವರಿ ಮಾಡ್ಕೊಂಡು ಅನೇಕರು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಈಗ ಜೆಪ್ಟೋ (Zepto) ಡೆಲಿವರಿ ಪಾರ್ಟ್ನರ ವಾರದ ಆದಾಯ ಅನೇಕರ ನಿದ್ದೆ ಹಾಳು ಮಾಡಿದೆ.

ಎಲ್ಲರಿಗೂ ಇಂದು ಗಡಿಬಿಡಿಯ ಜೀವನ. ಈಗ ಅವಶ್ಯಕತೆ ಇರುವ ವಸ್ತು ಈಗಲೇ ಬೇಕು. ಈಗ ಪ್ರತಿಯೊಂದು ರೆಡಿಮೇಡ್‌ ಸಿಗುತ್ತದೆ. ಯಾರಿಗೂ ಮನೆಯಿಂದ ಹೊರಗಡೆ ಹೋಗಿ ವಸ್ತುಗಳನ್ನು ತಂದುಕೊಳ್ಳುವಷ್ಟು ಸಂಯಮ, ಸಮಯ ಇಲ್ಲ. ಹೀಗಾಗಿ ಡೆಲಿವರಿ ಬಾಯ್‌ಗಳ ಬೇಡಿಕೆ ಜಾಸ್ತಿ ಆಗಿದೆ. ಸಿಟಿಗಳಲ್ಲಿ Zepto ಮುಂತಾದ ಡೆಲಿವರಿ ಕಂಪೆನಿಗಳು ಇವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾರಕ್ಕೆ 14 ಸಾವಿರ ರೂಪಾಯಿ ಆದಾಯ

Zepto Delivary partner ಒಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಾರೆ. ಈ ವಾರ ಅವರು ₹14,000 ಕ್ಕೂ ಹೆಚ್ಚು ಗಳಿಸಿರುವುದನ್ನು ಅವರು ರೀಲ್ಸ್‌ ಮಾಡಿದ್ದಾರೆ. ಇದು ಈಗ ಭಾರೀ ಚರ್ಚೆ ಆಗಿದೆ. ಭಾರತದ ಡೆಲಿವರಿ ಮಾರುಕಟ್ಟೆಯಲ್ಲಿ ಸ್ವತಂತ್ರ ಉದ್ಯೋಗಗಳು ಹೇಗೆ ಒಳ್ಳೆಯ ಗಳಿಕೆಯ ಅವಕಾಶಗಳನ್ನು ಕೊಡುತ್ತವೆ ಎಂದು ತೋರಿಸುತ್ತದೆ.

ಅಸಲಿ ಸತ್ಯ ಏನು?

ಇದನ್ನು ಸಂಪೂರ್ಣವಾಗಿ ನಂಬಲಾಗದು. ಒಂದು ವಾರದ ಆದಾಯ ನಿಜಕ್ಕೂ ಸಂಪೂರ್ಣ ಸತ್ಯವನ್ನು ಹೇಳುವುದಿಲ್ಲ. ಕೆಲಸದ ಅವಧಿ, ಸಿಟಿಯಲ್ಲಿ ಡೆಲಿವರಿ, ಪ್ರೋತ್ಸಾಹಕ ಧನ (incentives), ಪೆಟ್ರೋಲ್ ವೆಚ್ಚ, ವಾಹನ ನಿರ್ವಹಣೆ, ಆರ್ಡರ್‌ಗಳ ಪ್ರಮಾಣ‌, ಪ್ಲಾಟ್‌ಫಾರ್ಮ್‌ನ ನೀತಿಗಳನ್ನು ಅವಲಂಬಿಸಿ ಬದಲಾಗಬಹುದು. ಇದು ಎಲ್ಲ ಡೆಲಿವರಿ ಬಾಯ್‌ಗೂ ಒಂದೇ ತರ ಆಗಿರೋದಿಲ್ಲ.

ದೊಡ್ಡ ಚರ್ಚೆ ಶುರು ಆಗಿದೆ

ಈ ವಿಡಿಯೋವು ಜೆಪ್ಟೋ, ಡೆಲಿವರಿ ಉದ್ಯೋಗಗಳು, ಗಿಗ್ ಕಾರ್ಮಿಕರ ವೇತನ, ಆದಾಯದ ಪಾರದರ್ಶಕತೆ, ಇಂತಹ ಪ್ಲಾಟ್‌ಫಾರ್ಮ್ ಕೆಲಸಗಳು ದೀರ್ಘಾವಧಿಯ ಸ್ಥಿರ ಆದಾಯದ ಮೂಲವಾಗಬಲ್ಲವೇ ಎಂಬ ಬಗ್ಗೆ ಒಂದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.