'ಫೇಕ್ ವರ್ಕ್' ಮಾಡ್ತಿದ್ದ ಆಲಸಿ ಉದ್ಯೋಗಿಗಳ ವಿರುದ್ಧ ಕ್ರಮ ತೆಗೆದುಕೊಂಡ ಇನ್ವೆಸ್ಟ್‌ಮೆಂಟ್ ಬ್ಯಾಂಕ್!
Wells Fargo Fake Work employees ಸಿಮ್ಯುಲೇಟೆಡ್ ಕೀಬೋರ್ಡ್ ಮೂಲಕ ಫೇಕ್ ವರ್ಕ್ ಮಾಡ್ತಿದ್ದ 12 ಉದ್ಯೋಗಿಗಳನ್ನು ಇನ್ವೆಸ್ಟ್‌ಮೆಂಟ್ ಬ್ಯಾಂಕ್ ವೆಲ್ಸ್ ಫಾರ್ಗೋ ವಜಾ ಮಾಡಿದೆ.
ನವದೆಹಲಿ (ಜೂ.14): ತಾವು ಕೆಲಸ ಮಾಡುತ್ತಿದ್ದೇವೆ ಎನ್ನುವುದನ್ನು ತಿಳಿಸಲು ಸಿಮ್ಯುಲೇಟೆಡ್ ಕೀಬೋರ್ಡ್ ಮೂಲಕ ಫೇಕ್ ವರ್ಕ್ ಮಾಡ್ತಿದ್ದ 12 ಉದ್ಯೋಗಿಗಳನ್ನು ಇನ್ವೆಸ್ಟ್‌ಮೆಂಟ್ ಬ್ಯಾಂಕ್ ವೆಲ್ಸ್ ಫಾರ್ಗೋ ವಜಾ ಮಾಡಿದೆ. ಗುರುವಾರ ಪ್ರಕಟವಾದ ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಬ್ಯಾಂಕ್ ವಜಾ ಮಾಡಿದ ಎಲ್ಲಾ ಉದ್ಯೋಗಿಗಳು ಸಂಸ್ಥೆಯ ಸಂಪತ್ತು ಮತ್ತು ಹೂಡಿಕೆ ನಿರ್ವಹಣಾ ಘಟಕದವರಾಗಿದ್ದಾರೆ. ಫೈನಾನ್ಷಿಯಲ್ ಇಂಡಸ್ಟ್ರಿ ರೆಗ್ಯುಲೇಟರಿ ಅಥಾರಿಟಿಗೆ ನೀಡಿರುವ ಮಾಹಿತಿಯಲ್ಲಿ, ಅಮೆರಿಕಾದ ಮೂರನೇ ಅತಿದೊಡ್ಡ ಬ್ಯಾಂಕ್ "ಸಕ್ರಿಯ ಕೆಲಸದ ಪ್ರಭಾವವನ್ನು ಉಂಟುಮಾಡುವ ಕೀಬೋರ್ಡ್ ಚಟುವಟಿಕೆಯ ಸಿಮ್ಯುಲೇಶನ್ ಅನ್ನು ಒಳಗೊಂಡಿರುವ ಆರೋಪಗಳನ್ನು ಪರಿಶೀಲಿಸಿದ ನಂತರ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ' ಎಂದು ತಿಳಿಸಿದೆ. "ವೆಲ್ಸ್ ಫಾರ್ಗೋ ಉದ್ಯೋಗಿಗಳನ್ನು ಅತ್ಯುನ್ನತ ಗುಣಮಟ್ಟದವಾಗಿರಬೇಕು ಎಂದು ಬಯಸುತ್ತದೆ, ಅನೈತಿಕ ನಡವಳಿಕೆಯನ್ನು ಸಹಿಸುವುದಿಲ್ಲ" ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಸಿಮ್ಯುಲೇಟೆಡ್ ಕೀಬೋರ್ಡ್ ಮೂಲಕ ಅವರ ಕೆಲಸ ಮಾಡ್ತಿದ್ದಾರೆ ಅನ್ನೋದನ್ನು ಬ್ಯಾಂಕ್ ಹೇಗೆ ಕಂಡುಹಿಡಿಯಿತು ಅನ್ನೋದನ್ನ ವೇಲ್ಸ್ ಫಾರ್ಗೋ ತಿಳಿಸಿಲ್ಲ. ಇದು ವರ್ಕ್ ಫ್ರಮ್ ಹೋಮ್ ಉದ್ಯೋಗಿಗಳಿಗೆ ಸಂಬಂಧಪಟ್ಟ ವಿಚಾರವೇ ಅನ್ನೋದನ್ನೂ ಕೂಡ ತಿಳಿಸಿಲ್ಲ.
ಬಿಬಿಸಿ ವರದಿಯ ಪ್ರಕಾರ, ಅನೇಕ ಕಂಪನಿಗಳು ಅತ್ಯಾಧುನಿಕ ಸಾಧನಗಳ ಮೂಲಕ ತಮ್ಮ ಉದ್ಯೋಗಿಗಳನ್ನು ಮೇಲ್ವಿಚಾರಣೆ ಮಾಡುತ್ತಿವೆ. ಇವುಗಳ ಮೂಲಕ ಉದ್ಯೋಗಿಗಳ ಕಣ್ಣಿನ ಚಲನೆ, ಕೀಬೋರ್ಡ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವುದು ಹಾಗೂ ಅವರು ಭೇಟಿ ನೀಡುವ ವೆಬ್ ಪುಟಗಳ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುವುದನ್ನು ಮಾಡುತ್ತಿವೆ. ಕೋವಿಡ್-19 ಸಮಯದಲ್ಲಿ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಮ್‌ಹೋಮ್ ಮೋಡ್‌ಗೆ ಹೋದಾಗ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಟ್ರ್ಯಾಕ್ ಮಾಡಲು ಈ ಟೂಲ್‌ಗಳನ್ನು ಬಳಸಿಕೊಂಡಿದ್ದವು.
ಇನ್ನೊಂದೆಡೆ ಉದ್ಯೋಗಿಗಳು ಈ ಟ್ರ್ಯಾಕಿಂಗ್ ಟೂಲ್‌ನಿಂದ ತಪ್ಪಿಸಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡಿದ್ದರು. ಇದರಲ್ಲಿ ಸಿಮ್ಯುಲೇಟೆಡ್ ಕೀಬೋರ್ಡ್ ಫೇಕ್ ಟೂಲ್ ಕೂಡ ಒಂದಾಗಿತ್ತು. ಈ ಟೂಲ್‌ನಿಂದ ಉದ್ಯೋಗಿಗಳು ತಾವು ಕೆಲಸ ಮಾಡುತ್ತಿದ್ದೇವೆ ಎಂದು ಕಂಪನಿಗೆ ನಂಬಿಸುವ ಪ್ರಯತ್ನ ಮಾಡುತ್ತಿದ್ದರು. ಇದೇ ಕಾರಣಕ್ಕಾಗಿ ವೇಲ್ಸ್ ಫಾರ್ಗೋ ಬ್ಯಾಂಕ್ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
"ಮೌಸ್ ಮೂವರ್ಸ್" ಅಥವಾ "ಮೌಸ್ ಜಿಗ್ಲರ್ಸ್" ಎಂದು ಕರೆಯಲ್ಪಡುವ ಸಾಧನಗಳು ಮತ್ತು ಸಾಫ್ಟ್‌ವೇರ್ ಸಾಂಕ್ರಾಮಿಕ ಸಮಯದಲ್ಲಿ ಜನಪ್ರಿಯತೆಯನ್ನು ಗಳಿಸಿತು ಏಕೆಂದರೆ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅನುವು ಮಾಡಿಕೊಟ್ಟಿತು. ಒಬ್ಬ ವ್ಯಕ್ತಿಯು ತನ್ನ ಕೀಬೋರ್ಡ್‌ಗಳಿಂದ ದೂರವಿದ್ದರೂ ಸಹ ಕೆಲಸ ಮಾಡುತ್ತಿದ್ದಾನೆ ಎಂದು ಯೋಚಿಸುವಂತೆ ಸಿಸ್ಟಮ್ ಅನ್ನು ಮೋಸಗೊಳಿಸಲು ಅವರು ಕೀಬೋರ್ಡ್ ಚಟುವಟಿಕೆಯನ್ನು ಅನುಕರಿಸುತ್ತಾರೆ. ಅಂತಹ ಅನೇಕ ಸಾಧನಗಳು ಅಮೆಜಾನ್‌ನಲ್ಲಿ $10 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ ಎಂದು BBC ವರದಿ ಮಾಡಿದೆ. 2022 ರ ಆರಂಭದಲ್ಲಿ ವೆಲ್ಸ್ ಫಾರ್ಗೋ ತನ್ನ ಹೆಚ್ಚಿನ ಉದ್ಯೋಗಿಗಳನ್ನು ಕಚೇರಿಗೆ ಮರಳಲು ಮತ್ತು ಹೈಬ್ರಿಡ್ ಮಾದರಿಯ ಅಡಿಯಲ್ಲಿ ಕೆಲಸ ಮಾಡುವಂತೆ ತಿಳಿಸಿತ್ತು.
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ ಶಂಕರ್‌ನ ವಜಾಗೊಳಿಸಿದ ವೆಲ್ಸ್ ಫಾರ್ಗೋ!