Air India ವಿಮಾನದಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿ ಬೆಂಗಳೂರಿನಲ್ಲಿ ಅರೆಸ್ಟ್‌: ಜೈಲುಪಾಲಾದ ಶಂಕರ್‌ ಮಿಶ್ರಾ

ಶಂಕರ್ ಮಿಶ್ರಾ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇರುವಿಕೆಯ ಬಗ್ಗೆ ಸುಳಿವುಗಳನ್ನು ಪಡೆದ ನಂತರ ದೆಹಲಿ ಪೊಲೀಸರು ಆತನನ್ನು ಹಿಡಿಯಲು ಕರ್ನಾಟಕದ ಬೆಂಗಳೂರಿನಲ್ಲಿ ತಂಡವನ್ನು ನಿಯೋಜಿಸಿದ್ದರು ಎಂದು ತಿಳಿದುಬಂದಿದೆ.

mumbai man arrested for peeing on woman on plane 6 weeks later ash

ನವೆಂಬರ್ 2022 ರಲ್ಲಿ ಏರ್ ಇಂಡಿಯಾ ವಿಮಾನದಲ್ಲಿ (Air India Flight) ಕುಡಿದ ಮತ್ತಿನಲ್ಲಿ (Drunk) ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ (Urinated) ಮಾಡಿದ್ದ ಮುಂಬೈ (Mumbai) ಮೂಲದ ಮಾಜಿ ಉದ್ಯಮಿ ಶಂಕರ್ ಮಿಶ್ರಾ (Shankar Mishra) ಅವರನ್ನು ಶುಕ್ರವಾರ ತಡರಾತ್ರಿ ದೆಹಲಿ ಪೊಲೀಸರು (Delhi Police) ಬೆಂಗಳೂರಿನಿಂದ ಬಂಧಿಸಿ ರಾಷ್ಟ್ರ ರಾಜಧಾನಿ ದೆಹಲಿಗೆ (National Capital Delhi) ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತ ಮುಂಬೈನಿಂದ ಪರಾರಿಯಾಗಿದ್ದ ಕಾರಣ ಆತನ ಪತ್ತೆಗೆ ಲುಕ್‌ಔಟ್‌ ನೋಟಿಸ್‌ ಜಾರಿಗಳಿಸಲಾಗಿತ್ತು ಅಥವಾ ಏರ್‌ಪೋರ್ಟ್ ಅಲರ್ಟ್ ಹಾಕಲಾಗಿತ್ತು ಎಂದು ತಿಳಿದುಬಂದಿದೆ. ಶಂಕರ್ ಮಿಶ್ರಾ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇರುವಿಕೆಯ ಬಗ್ಗೆ ಸುಳಿವುಗಳನ್ನು ಪಡೆದ ನಂತರ ದೆಹಲಿ ಪೊಲೀಸರು ಆತನನ್ನು ಹಿಡಿಯಲು ಬೆಂಗಳೂರಿನಲ್ಲಿ ತಂಡವನ್ನು ನಿಯೋಜಿಸಿದ್ದರು ಎಂದು ತಿಳಿದುಬಂದಿದೆ.

ಇನ್ನು, ದೆಹಲಿ ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು, ಹೆಚ್ಚಿನ ತನಿಖೆಗೆ ಯಾವುದೇ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ಹೇಳಿದೆ. ಆರೋಪಿ ಶಂಕರ್ ಮಿಶ್ರಾ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರೂ, ತನ್ನ ಸ್ನೇಹಿತರೊಂದಿಗೆ ಸಂವಹನ ನಡೆಸಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸುತ್ತಿದ್ದರು. ಈ ಹಿನ್ನೆಲೆ ಪೊಲೀಸರು ಅಲರ್ಟ್‌ ಆದರು ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಹಾಗೂ, 34 ವರ್ಷದ ಶಂಕರ್ ಮಿಶ್ರಾ ಅವರು ಕನಿಷ್ಠ ಒಂದು ಸ್ಥಳದಲ್ಲಿ ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ಬಳಸಿದ್ದರು ಎಂದೂ ಮೂಲಗಳು ತಿಳಿಸಿವೆ.

ಇದನ್ನು ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದು ಓರ್ವ ಉದ್ಯಮಿ...!

ನವೆಂಬರ್ 26 ರಂದು ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಶಂಕರ್ ಮಿಶ್ರಾ ಅವರು ತಮ್ಮ ಪ್ಯಾಂಟ್ ಅನ್ನು ಬಿಚ್ಚಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡದಂತೆ ಮಹಿಳೆಯನ್ನು ಬೇಡಿಕೊಂಡಿದ್ದರು ಎಂದೂ ಹೇಳಲಾಗಿದೆ.

ಏರ್ ಇಂಡಿಯಾ ಈ ವಾರವಷ್ಟೇ ಪೊಲೀಸ್ ದೂರು ದಾಖಲಿಸಿತ್ತು ಮತ್ತು ವೃದ್ಧೆಯ ಇಚ್ಛೆಯನ್ನು ಗೌರವಿಸಿ, ವಿಮಾನ ಲ್ಯಾಂಡ್‌ ಆದ ಬಳಿಕ ಕಾನೂನು ಕ್ರಮವನ್ನು ತೆಗೆದುಕೊಳ್ಳದಂತೆ ಸಿಬ್ಬಂದಿ ನಿರ್ಧರಿಸಿದ್ದರು. ಬಳಿಕ, 30 ದಿನಗಳ ಕಾಲ ವಿಮಾನ ಹಾರಾಟ ನಡೆಸದಂತೆ ನಿಷೇಧಿಸಿದ ಬಳಿಕ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ:  Air India Flight: ಕುಡಿದ ಮತ್ತಲ್ಲಿ ವೃದ್ಧೆ ಮೇಲೆ ಮೂತ್ರ ವಿಸರ್ಜಿಸಿದ ಭೂಪ..!

ದೂರುದಾರರು ತನಗೆ ಶಂಕರ್‌ ಮಿಶ್ರಾ ಅವರ ಮುಖ ನೋಡಲು ಇಷ್ಟವಿಲ್ಲ ಎಂದು ಸಿಬ್ಬಂದಿಗೆ ತಿಳಿಸಿದ್ದರು ಮತ್ತು ಅಪರಾಧಿಯನ್ನು ತನ್ನ ಮುಂದೆ ಕರೆತಂದಾಗ ಹಾಗೂ ಆತ ಅಳುತ್ತಾ ಕ್ಷಮೆಯಾಚಿಸಲು ಪ್ರಾರಂಭಿಸಿದಾಗ ವೃದ್ಧೆ ದಿಗ್ಭ್ರಮೆಗೊಂಡರು ಎಂದು ಎಫ್‌ಐಆರ್‌ ಭಾಗವಾಗಿರುವ ಅವರ ದೂರಿನ ಪ್ರಕಾರ ಹೇಳಲಾಗಿತ್ತು. ಅಲ್ಲದೆ, ಏರ್‌ ಇಂಡಿಯಾ ವಿಮಾನದ ಮಹಿಳಾ ಸಿಬ್ಬಂದಿ ಸರಿಯಾದ ವೃತ್ತಿಪರರಲ್ಲ ಹಾಗೂ ಸಿಬ್ಬಂದಿ ಅತ್ಯಂತ ಸೂಕ್ಷ್ಮ ಮತ್ತು ಆಘಾತಕಾರಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸಿದ್ಧರಾಗಿಲ್ಲ ಎಂದೂ ವೃದ್ಧೆ ಆರೋಪಿಸಿದ್ದರು. 

ಈ ನಡುವೆ,  ದೂರು ದಾಖಲಿಸಿದ ಮಹಿಳೆಯೊಂದಿಗೆ ಶಂಕರ್ ಮಿಶ್ರಾ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಮತ್ತು ಅವರಿಗೆ ₹ 15,000 ಪರಿಹಾರವನ್ನು ಪಾವತಿಸಿದ್ದಾರೆ ಹಾಗೂ ಅವರ ಬಟ್ಟೆಗಳನ್ನು ಸ್ವಚ್ಛಗೊಳಿಸಿ ಕೊಡಲಾಗಿದೆ ಎಂದೂ ಆರೋಪಿ ಪರ ವಕೀಲರು ಹೇಳಿದರು. ಅದರೆ, ಹಣ ಸ್ವೀಕರಿಸಲು ಸಾಧ್ಯವಿಲ್ಲ ಎಂದು ವೃದ್ಧೆಯ ಮಗಳು ಒಂದು ತಿಂಗಳ ನಂತರ ಹಣವನ್ನು ಹಿಂದಿರುಗಿಸಿದ್ದರು.

ಇದನ್ನೂ ಓದಿ: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ ಶಂಕರ್‌ನ ವಜಾಗೊಳಿಸಿದ ವೆಲ್ಸ್ ಫಾರ್ಗೋ!

ಇನ್ನೊಂದೆಡೆ, ಅಮೆರಿಕ ಮೂಲದ ಹಣಕಾಸು ಸೇವಾ ಕಂಪನಿ ವೆಲ್ಸ್ ಫಾರ್ಗೋ ತಮ್ಮ ಕಂಪನಿಯ ಶಂಕರ್ ಮಿಶ್ರಾ ಅವರನ್ನು ಶುಕ್ರವಾರ ಸಂಜೆ ವಜಾಗೊಳಿಸಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಸಂಸ್ಥೆಯ ಭಾರತದ ಶಾಖೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಇನ್ನು, ಮಾನಯಾನ ಸಿಬ್ಬಂದಿ ಅಶಿಸ್ತಿನ ಅಥವಾ ಅನುಚಿತವಾಗಿ ವರ್ತಿಸುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ವಿಮಾನಯಾನ ನಿಯಂತ್ರಕ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಕಠಿಣ ಕ್ರಮ ನೀಡುವ ಎಚ್ಚರಿಕೆ ನೀಡಿದೆ. 

Latest Videos
Follow Us:
Download App:
  • android
  • ios