ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಜೂನಿಯರ್ ಟೆಕ್ನಿಕಲ್ ಆಫೀಸರ್ ಮತ್ತು ಕಾನೂನು ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 13 ಹುದ್ದೆಗಳಿದ್ದು, ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಅಕ್ಟೋಬರ್ 16, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಪುರುಷರಿಗೆ 25 ರೂ. ಶುಲ್ಕವಿದ್ದು, ಮಹಿಳೆಯರು ಮತ್ತು ಮೀಸಲಾತಿ ವರ್ಗಗಳಿಗೆ ಉಚಿತ.
ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಅಧಿಕೃತ ಅಧಿಸೂಚನೆಯ ಮೂಲಕ ಜೂನಿಯರ್ ಟೆಕ್ನಿಕಲ್ ಆಫೀಸರ್, ಕಾನೂನು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
ಸಂಸ್ಥೆಯ ಹೆಸರು: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ( UPSC )
ಹುದ್ದೆಗಳ ಸಂಖ್ಯೆ: 13
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಜೂನಿಯರ್ ಟೆಕ್ನಿಕಲ್ ಆಫೀಸರ್, ಕಾನೂನು ಅಧಿಕಾರಿ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ, ಎಲ್‌ಎಲ್‌ಬಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ:
ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 48 ವರ್ಷಗಳು.
ಅರ್ಜಿ ಶುಲ್ಕ:
ಮೀಸಲಾತಿ ರಹಿತ/ ಒಬಿಸಿ/ ಇಡಬ್ಲ್ಯೂಎಸ್ (ಪುರುಷ) ಅಭ್ಯರ್ಥಿಗಳು: 25ರು.
ಮಹಿಳೆಯರು (ಎಲ್ಲಾ ವರ್ಗಗಳು)/ SC/ ST/ PwBD ಅಭ್ಯರ್ಥಿಗಳು: ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಸಂದರ್ಶನ
ನೇಮಕಾತಿ ಪರೀಕ್ಷೆ (RT)
ಕಂಬೈನ್ಡ್ ನೇಮಕಾತಿ ಪರೀಕ್ಷೆ (CRT)\B
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: ಸೆಪ್ಟೆಂಬರ್ 26-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್-16-2026


