RRB Recruitment 2025: ರೈಲ್ವೆ ನೇಮಕಾತಿ ಮಂಡಳಿ 32,438 ಹುದ್ದೆಗಳಿಗೆ ಅರ್ಜಿಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

RRB Recruitment 2025: ರೈಲ್ವೆ ನೇಮಕಾತಿ ಮಂಡಳಿ (RRB) ಅಸಿಸ್ಟೆಂಟ್ ಸೇರಿದಂತೆ 32,438 ಹುದ್ದೆಗಳಿಗೆ ಅರ್ಜಿಯ ಕೊನೆಯ ದಿನಾಂಕವನ್ನು ಎಕ್ಸ್ಟೆಂಡ್ ಮಾಡಿದೆ. ಈಗ ಅಭ್ಯರ್ಥಿಗಳು ಮಾರ್ಚ್ 1, 2025 (ರಾತ್ರಿ 11:59 ರವರೆಗೆ) ಅಪ್ಲೈ ಮಾಡಬಹುದು. ಮೊದಲು ಅಪ್ಲೈ ಮಾಡೋಕೆ ಲಾಸ್ಟ್ ಡೇಟ್ ಫೆಬ್ರವರಿ 22 ಆಗಿತ್ತು. ಆಸಕ್ತಿ ಇರೋ ಅಭ್ಯರ್ಥಿಗಳು rrbapply.gov.in ಗೆ ಹೋಗಿ ಅಪ್ಲೈ ಮಾಡಬಹುದು.

RRB ನೇಮಕಾತಿ 2025: ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಜನವರಿ 23, 2025
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಮಾರ್ಚ್ 1, 2025
ಶುಲ್ಕ ಪಾವತಿಸಲು ಕೊನೆ ದಿನಾಂಕ: ಮಾರ್ಚ್ 3, 2025
ಫಾರ್ಮ್ ನಲ್ಲಿ ತಿದ್ದುಪಡಿ ಮಾಡೋಕೆ ವಿಂಡೋ: ಮಾರ್ಚ್ 4 ರಿಂದ ಮಾರ್ಚ್ 13, 2025 ರವರೆಗೆ

RRB Recruitment 2025: ಯಾವ ಹುದ್ದೆಗಳಿಗೆ ನೇಮಕಾತಿ ಇರುತ್ತೆ? ಈ ನೇಮಕಾತಿ ಅಭಿಯಾನ ಕೆಳಗಿನ ಹುದ್ದೆಗಳಿಗೆ ಮಾಡಲಾಗ್ತಿದೆ. 
ಅಸಿಸ್ಟೆಂಟ್ TL ಮತ್ತು AC (ವರ್ಕ್‌ಶಾಪ್)-ಎಲೆಕ್ಟ್ರಿಕಲ್-ಜನರಲ್ ಸರ್ವೀಸಸ್
ಅಸಿಸ್ಟೆಂಟ್ TL ಮತ್ತು AC-ಎಲೆಕ್ಟ್ರಿಕಲ್-ಜನರಲ್ ಸರ್ವೀಸಸ್, ಪ್ರೊಡಕ್ಷನ್ ಯುನಿಟ್
ಅಸಿಸ್ಟೆಂಟ್ ಟ್ರ್ಯಾಕ್ ಮೆಷಿನ್-ಇಂಜಿನಿಯರಿಂಗ್-ಟ್ರ್ಯಾಕ್ ಮೆಷಿನ್
ಅಸಿಸ್ಟೆಂಟ್ TRD-ಎಲೆಕ್ಟ್ರಿಕಲ್-TRD
ಪಾಯಿಂಟ್ಸ್‌ಮ್ಯಾನ್ B-ಟ್ರಾಫಿಕ್-ಟ್ರಾಫಿಕ್
ಟ್ರ್ಯಾಕ್‌ಮೆಂಟೇನರ್-IV-ಇಂಜಿನಿಯರಿಂಗ್ ಪಿ-ವೇ

RRB Recruitment 2025: ಶಿಕ್ಷಣ ಅರ್ಹತೆ ಮತ್ತು ವಯೋಮಿತಿ
ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿ 10ನೇ ತರಗತಿ ಪಾಸ್ ಆಗಿರಬೇಕು ಅಥವಾ ITI/ ಈಕ್ವಿವಲೆಂಟ್ ಡಿಗ್ರಿ ಅಥವಾ NCVT ಇಂದ ಕೊಟ್ಟಿರೋ ನ್ಯಾಷನಲ್ ಅಪ್ರೆಂಟಿಸ್‌ಶಿಪ್ ಸರ್ಟಿಫಿಕೇಟ್ ಇರಬೇಕು.

ವಯೋ ಮಿತಿ: ಕನಿಷ್ಠ ವಯಸ್ಸು: 18 ವರ್ಷ, ಗರಿಷ್ಠ ವಯಸ್ಸು: 36 ವರ್ಷ (ಜನವರಿ 1, 2025 ರವರೆಗೆ)

RRB Recruitment 2025: ನಾಲ್ಕು ಹಂತದ ಆಯ್ಕೆ ವಿಧಾನ
ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT): ಇದರಲ್ಲಿ 100 ಪ್ರಶ್ನೆಗಳು ಇರುತ್ತೆ, ತಪ್ಪು ಉತ್ತರಕ್ಕೆ 1/3 ಅಂಕ ನೆಗೆಟಿವ್ ಮಾರ್ಕಿಂಗ್ ಇರುತ್ತೆ. ಪರೀಕ್ಷೆ ಅವಧಿ 90 ನಿಮಿಷ ಇರುತ್ತದೆ.
ಫಿಸಿಕಲ್ ಎಫಿಷಿಯೆನ್ಸಿ ಟೆಸ್ಟ್ (PET): ಇದರಲ್ಲಿ ಫಿಸಿಕಲ್ ಎಕ್ಸಾಮ್ ಇರುತ್ತೆ.
ಡಾಕ್ಯುಮೆಂಟ್ ವೆರಿಫಿಕೇಶನ್ (Document Verification): ಎಲ್ಲ ಪ್ರಮಾಣ ಪತ್ರಗಳ ತಪಾಸಣೆ ಆಗುತ್ತೆ.
ಮೆಡಿಕಲ್ ಟೆಸ್ಟ್ (Medical Examination): ಮೆಡಿಕಲ್ ಫಿಟ್ನೆಸ್ ತಪಾಸಣೆ ಆಗುತ್ತೆ.

RRB Recruitment 2025: ಪಾಸಿಂಗ್ ಮಾರ್ಕ್ಸ್
ಸಾಮಾನ್ಯ (UR) ಮತ್ತು EWS: 40%
OBC (ನಾನ್-ಕ್ರೀಮಿ ಲೇಯರ್), SC, ST: 30%
RRB Recruitment 2025 ಅಪ್ಲೈ ಮಾಡೋಕೆ ಡೈರೆಕ್ಟ್ ಲಿಂಕ್

ಇದನ್ನೂ ಓದಿ: DRDO ಇಂಟರ್ನ್‌ಶಿಪ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒದಗಿಬಂತು ಸುವರ್ಣಾವಕಾಶ

RRB Recruitment 2025: ಅಪ್ಲಿಕೇಶನ್ ಫೀಸ್
SC/ST/ಮಹಿಳಾ/ಟ್ರಾನ್ಸ್‌ಜೆಂಡರ್/ದಿವ್ಯಾಂಗ/ಇಬಿಸಿ/ಅಲ್ಪಸಂಖ್ಯಾತ/ಮಾಜಿ ಸೈನಿಕ: ₹250
ಇತರ ಎಲ್ಲ ಅಭ್ಯರ್ಥಿಗಳು: ₹500
ಫೀಸ್ ರಿಫಂಡ್: SC/ST/ಮಹಿಳಾ/ಟ್ರಾನ್ಸ್‌ಜೆಂಡರ್/ದಿವ್ಯಾಂಗ/ಇಬಿಸಿ/ಅಲ್ಪಸಂಖ್ಯಾತ/ಮಾಜಿ ಸೈನಿಕರಿಗೆ ಬ್ಯಾಂಕ್ ಚಾರ್ಜ್ ಕಟ್ ಮಾಡಿ ಪೂರ್ತಿ ಅಮೌಂಟ್ ವಾಪಸ್ ಸಿಗುತ್ತೆ.
ಇತರ ಅಭ್ಯರ್ಥಿಗಳಿಗೆ CBT ಪರೀಕ್ಷೆ ಕೊಟ್ಟ ಮೇಲೆ ₹400 ವಾಪಸ್ ಸಿಗುತ್ತದೆ.

ಇದನ್ನೂ ಓದಿ: ನೀವು ಟ್ರಾವೆಲ್ ಪ್ರಿಯರಾಗಿದ್ರೆ, ಈ ಟ್ರಾವೆಲ್ ಜಾಬ್ ಗಳು ಬೆಸ್ಟ್… ಊರು ಸುತ್ತುತ್ತಾ ಹಣ ಗಳಿಸಿ!