Asianet Suvarna News Asianet Suvarna News

NIT Karnataka Recruitment 2022: ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ  ಕರ್ನಾಟಕದಲ್ಲಿ  ಖಾಲಿ ಇರುವ  ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ.  ಮೇ.31 ನಡೆಯುವ ವಾಕ್‌ ಇನ್ ನಲ್ಲಿ ಭಾಗವಹಿಸಬಹುದು.

NIT Karnataka Recruitment 2022 notification for SRF and JRF post gow
Author
Bengaluru, First Published May 12, 2022, 11:34 AM IST

ಬೆಂಗಳೂರು (ಮೇ.12): ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (National Institute of Technology - NIT) ಕರ್ನಾಟಕದಲ್ಲಿ  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಹಿರಿಯ ಸಂಶೋಧನಾ ಅಭ್ಯರ್ಥಿ (Senior  Research Fellow) ಮತ್ತು ಕಿರಿಯ ಸಂಶೋಧನಾ ಅಭ್ಯರ್ಥಿ (Junior Research Fellow) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇ 31 ರಂದು ನಡೆಯುವ  ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಧಿಕೃತ ವೆಬ್‌ತಾಣ https://www.nitk.ac.in/ ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್  ಮಾಡಿ

ಒಟ್ಟು 3 ಹುದ್ದೆಗಳು ಇದ್ದು ವಿವರ ಇಂತಿದೆ:
ಹಿರಿಯ ಸಂಶೋಧನಾ ಅಭ್ಯರ್ಥಿ : 1 ಹುದ್ದೆ
ಕಿರಿಯ ಸಂಶೋಧನಾ ಅಭ್ಯರ್ಥಿ : 2 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ:  ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಕಿರಿಯ ಸಂಶೋಧನಾ ಅಭ್ಯರ್ಥಿ ಮತ್ತು  ಹಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್/ಸಂಸ್ಥೆ/ ಯಿಂದ ಹುದ್ದೆಗಳಿಗನುಗುಣವಾಗಿ ME, M.Tech, BE  ವಿದ್ಯಾರ್ಹತೆಯನ್ನು  ಪಡೆದಿರಬೇಕು. 

NIT KARNATAKA RECRUITMENT 2022: ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ನೇಮಕಾತಿ

ವಯೋಮಿತಿ: ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಅಭ್ಯರ್ಥಿ ಮತ್ತು  ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ನೇಮಕಾತಿ ನಿಯಮಾನುಸಾರ 28 ವರ್ಷದ ಒಳಗೆ ವಯೋಮಿತಿಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಅಭ್ಯರ್ಥಿ ಮತ್ತು ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ವೇತನ ವಿವರ: ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹಿರಿಯ ಸಂಶೋಧನಾ ಅಭ್ಯರ್ಥಿ ಮತ್ತು ಕಿರಿಯ ಸಂಶೋಧನಾ ಅಭ್ಯರ್ಥಿ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ ₹ 18,000 ರಿಂದ ₹ 16,000 ಸಿಗಲಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯು ಮಂಗಳೂರಿನ ಸುರತ್ಕಲ್‌ ನಲ್ಲಿದ್ದು, ಆಸಕ್ತರು  ಈ ವಿಳಾಸಕ್ಕೆ ಭೇಟಿ ನೀಡಿ ವಾಕ್‌ ಇನ್ ಇಂಟರ್ವ್ಯೂ ನಲ್ಲಿ ಭಾಗವಹಿಸಬಹುದು.
National Institute Of Technology Karnataka
Surathkal, Mangaluru-575 025, Karnataka, India.

Uttara Kannada Anganwadi Recruitment 2022: ಒಟ್ಟು 76 ಹುದ್ದೆಗಳಿಗೆ ನೇಮಕಾತಿ 

ಹಿರಿಯ ಸಂಶೋಧನಾ ​ ಫೆಲೋ ಸೇರಿ 4 ಹುದ್ದೆಗಳಿಗೆ ನೇಮಕಾತಿ: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಇಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಸೀನಿಯರ್ ರಿಸರ್ಚ್​​ ಫೆಲೋ (Senior Research Fellow) ಮತ್ತು ಪ್ರಾಜೆಕ್ಟ್​ ಅಸೋಸಿಯೇಟ್ (Project Associate) ಸೇರಿ ಒಟ್ಟು 4 ಹುದ್ದೆ ಖಾಲಿ ಇದ್ದು, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ. ಮೇ.21 ಈ ಮೇಲ್  ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು nimhans.ac.in ಗೆ ಭೇಟಿ ನೀಡಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟು 4ಹುದ್ದೆಗಳ ಮಾಹಿತಿ ಇಂತಿದೆ:
ಹಿರಿಯ ಸಂಶೋಧನಾ ​ ಫೆಲೋ: 2 ಹುದ್ದೆಗಳು
ಯೋಜನಾ ಸಹಾಯಕ: 2 ಹುದ್ದೆಗಳು

ಶೈಕ್ಷಣಿಕ ವಿದ್ಯಾರ್ಹತೆ: ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ  ಹಿರಿಯ ಸಂಶೋಧನಾ ​ ಫೆಲೋ ಮತ್ತು  ಯೋಜನಾ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಆಯಾಯ  ಹುದ್ದೆಗೆ ಸಂಬಂಧಿಸಿ   ಸ್ನಾತಕೋತ್ತರ ಪದವಿ ಪಡೆದಿರಬೇಕು. 

ಹಿರಿಯ ಸಂಶೋಧನಾ ​ ಫೆಲೋ ಹುದ್ದೆಗೆ  ಬಿಎಎಂಎಸ್ ಮಾಡಿರಬೇಕು. ಮತ್ತು  ಯೋಜನಾ ಸಹಾಯಕ ಹುದ್ದೆಗಳಿಗೆ (ಲೈಫ್ ಸೈನ್ಸ್ ಮತ್ತು ಯೋಗ) ಬಿ.ಟೆಕ್, ಸ್ನಾತಕೋತ್ತರ ಪದವಿ , BNYS, MBBS, BAMS, ಸ್ನಾತಕೋತ್ತರ ಡಿಪ್ಲೊಮಾ, M.Sc ಮಾಡಿರಬೇಕು.

Follow Us:
Download App:
  • android
  • ios