Asianet Suvarna News Asianet Suvarna News

ಡೆಸ್ಕ್ ಮೇಲೆ ಪಾಟ್ ಇಟ್ಟು ವರ್ಕ್‍ಪ್ರೆಷರ್ಗೆ ಗೋಲಿ ಹೊಡೀರಿ

ಆಫೀಸ್‍ನಲ್ಲಿ ಕೆಲಸ ಹೆಚ್ಚಿದಾಗ ಒತ್ತಡ ಕಾಡುವುದು ಸಹಜ. ಕೆಲವೊಮ್ಮೆ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಹೋಗಿಬಿಡೋಣ ಎಂಬಷ್ಟು ಬೇಸರ ಮೂಡುತ್ತದೆ. ಕೆಲಸದೊತ್ತಡವನ್ನು ಹೇಗಪ್ಪ ನಿಭಾಯಿಸುವುದು ಎಂದು
ಯೋಚಿಸುತ್ತಿದ್ದೀರಾ? ವೆರಿ ಸಿಂಪಲ್ ಆಫೀಸ್‍ನಲ್ಲಿ ನಿಮ್ಮ ಡೆಸ್ಕ್ ಮೇಲೆ ಗಿಡವಿರುವ ಪಾಟ್‍ವೊಂದನ್ನು ಇಡಿ ಅಷ್ಟೇ, ಒತ್ತಡ ಅದರಷ್ಟಕ್ಕೆ ಕಡಿಮೆಯಾಗುತ್ತದೆ.

Keeping a plant at your work desk may reduce stress
Author
Bangalore, First Published Jan 10, 2020, 3:38 PM IST
  • Facebook
  • Twitter
  • Whatsapp

ಉದ್ಯೋಗ ಎಂದ ಮೇಲೆ ಅಲ್ಲಿ ಟೆನ್ಷನ್ ಇದ್ದೇ ಇರುತ್ತದೆ. ಐಟಿ ಕಂಪೆನಿಯಿಂದ ಹಿಡಿದು ಗಾರ್ಮೆಂಟ್ಸ್ ತನಕ ಎಲ್ಲ ಉದ್ಯೋಗ ವಲಯದಲ್ಲೂ ಅಲ್ಲಿನ ನೀತಿನಿಯಮಗಳು, ಡೆಡ್‍ಲೈನ್‍ಗಳು ಉದ್ಯೋಗಿಗಳನ್ನು ಒಂದಲ್ಲೊಂದು
ಸಂದರ್ಭದಲ್ಲಿ ಒತ್ತಡಕ್ಕೆ ನೂಕುತ್ತವೆ. ಕೆಲವೊಮ್ಮೆ ಆಫೀಸ್‍ನಲ್ಲಿ ದಿನಕ್ಕೆ 8-10 ಗಂಟೆ ದುಡಿದರೂ ಕೆಲಸದ ಹೊರೆ ತಗ್ಗುವುದಿಲ್ಲ, ಜೊತೆಗೆ ಪ್ರತಿದಿನ ಎದುರಾಗುವ ಹೊಸ ಹೊಸ ಸವಾಲುಗಳು ಒತ್ತಡವನ್ನು ಹೆಚ್ಚಿಸುತ್ತವೆ. ನಿಮಗೂ
ಕೂಡ ಆಫೀಸ್‍ನಲ್ಲಿ ಕೆಲಸದ ಒತ್ತಡ ಹೆಚ್ಚಿದ್ದು, ಅದರಿಂದ ಹೊರಬರುವುದು ಹೇಗಪ್ಪಾ? ಎಂಬ ಚಿಂತೆಯಲ್ಲಿದ್ದರೆ, ಇಲ್ಲೊಂದು ಸರಳ ಉಪಾಯವಿದೆ. ಅದೇನು ಅಂತೀರಾ? ಹಸಿರು ಗಿಡವಿರುವ ಪಾಟ್‍ವೊಂದನ್ನು ನಿಮ್ಮ ಟೇಬಲ್
ಮೇಲಿಡಿ ಅಷ್ಟೇ. ಒತ್ತಡ ದೂರವಾಗುವುದಕ್ಕೂ ಗಿಡಕ್ಕೂ ಎತ್ತಣ ಸಂಬಂಧ ಅಂತೀರಾ? ಆಫೀಸ್‍ನಲ್ಲಿ ಉದ್ಯೋಗಿಗಳು ತಮ್ಮ ಡೆಸ್ಕ್ ಮೇಲೆ ಹಸಿರು ಗಿಡವಿರುವ ಪಾಟ್ ಇಟ್ಟುಕೊಳ್ಳುವುದರಿಂದ ಒತ್ತಡ ತಗ್ಗುತ್ತದೆ ಎಂದು ಇತ್ತೀಚೆಗೆ
ನಡೆದ ಅಧ್ಯಯನವೊಂದು ಹೇಳಿದೆ. 

ಏನಿದು ಅಧ್ಯಯನ?: ಜಪಾನ್‍ನ ಯುನಿವರ್ಸಿಟಿ ಆಫ್ ಹೈಯೋಗೊ ನಡೆಸಿದ ಅಧ್ಯಯನದಲ್ಲಿ ಆಫೀಸ್‍ಗಳಲ್ಲಿ ಉದ್ಯೋಗಿಗಳ ಡೆಸ್ಕ್ ಮೇಲೆ ಗಿಡವಿರುವ ಪಾಟ್ ಇಡುವುದರಿಂದ ಅವರಲ್ಲಿ ಕೆಲಸಕ್ಕೆ ಸಂಬಂಧಿಸಿದ ಒತ್ತಡ ತಗ್ಗುತ್ತದೆ
ಎಂಬುದು ದೃಢಪಟ್ಟಿದೆ. ಜಪಾನ್‍ನಲ್ಲಿ 63 ಉದ್ಯೋಗಿಗಳನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಡೆಸ್ಕ್ ಮೇಲೆ ಗಿಡವಿಡುವ ಮೊದಲು ಹಾಗೂ ನಂತರ ಅವರಲ್ಲಾದ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳನ್ನು
ದಾಖಲೀಕರಿಸಲಾಯಿತು. ಈ ಉದ್ಯೋಗಿಗಳಿಗೆ ಕೆಲಸದ ನಡುವೆ 3 ನಿಮಿಷ ಬಿಡುವು ನೀಡಿ ಗಿಡಗಳೊಂದಿಗೆ ಸಂಭಾಷಣೆ ನಡೆಸುವಂತೆ ತಿಳಿಸಲಾಯಿತು. ಇದಾದ ಬಳಿಕ ಅವರ ಪಲ್ಸ್ ರೇಟ್ ಮೊದಲಿಗಿಂತ ಕಡಿಮೆಯಾಗಿರುವುದು
ಕಂಡುಬಂತು. ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಒತ್ತಡದ ಕಾರಣಕ್ಕೆ ಇವರಲ್ಲಿ ಪಲ್ಸ್ ರೇಟ್ ಹೆಚ್ಚಿತ್ತು.

ಅಪ್ಪನಂತಹ ಬಾಸ್ ಇದ್ರೆ ಉದ್ಯೋಗಿಗಳು ಫುಲ್ ಖುಷ್!

ಮಾನಸಿಕ ಆರೋಗ್ಯವೃದ್ಧಿ: ಸಸ್ಯಗಳು ಮನಸ್ಸಿಗೆ ನೆಮ್ಮದಿ ಒದಗಿಸುವ ಮೂಲಕ ಮಾನಸಿಕ ಆರೋಗ್ಯ ವೃದ್ಧಿಗೆ ನೆರವು ನೀಡುತ್ತವೆ. ಹತಾಶ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲು, ಮರಳಿ ಪ್ರಯತ್ನದಲ್ಲಿ ತೊಡಗಿಕೊಳ್ಳಲು ಇವು ನೆರವು
ನೀಡುತ್ತವೆ. ಕೆಲವೊಮ್ಮೆ ಕೆಲಸದ ಒತ್ತಡ ಎಷ್ಟಿರುತ್ತದೆ ಎಂದರೆ ಅಕ್ಕಪಕ್ಕದಲ್ಲಿ ಕುಳಿತಿರುವವರ ಬಳಿ ಮಾತನಾಡಲು ಕೂಡ ಸಮಯವಿರುವುದಿಲ್ಲ. ಎಲ್ಲರ ಕೈಗಳು ಕೀ ಬೋರ್ಡ್‍ನೊಂದಿಗೆ ಸಂರ್ಘಷಕ್ಕಿಳಿದಿದ್ದರೆ  ಕಣ್ಣು ಡೆಸ್ಕ್ಟಾಪ್
ಮೇಲಿಂದ ಕದಲುವುದಿಲ್ಲ. ಕಂಪ್ಯೂಟರ್ ಎದುರು ಕುಳಿತಿರುವ ಉದ್ಯೋಗಿಗಳ ಮಿದುಳು ಅದಕ್ಕಿಂತಲೂ ಫಾಸ್ಟ್ ಆಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿರುತ್ತದೆ. ಇಂಥ ಸಮಯದಲ್ಲಿ ಸಹಜವಾಗಿಯೇ ಒತ್ತಡ, ಉದ್ವೇಗ ಎಲ್ಲವೂ
ಕಾಣಿಸಿಕೊಳ್ಳುತ್ತವೆ. ಇವನ್ನು ಹತ್ತಿಕ್ಕಲು ಒಂದೆರಡು ನಿಮಿಷ ಕಣ್ಣನ್ನು ಡೆಸ್ಕ್ಟಾಪ್ ಮೇಲಿಂದ ಕದಲಿಸಿ ಪಕ್ಕದಲ್ಲೇ ಇರುವ ಗಿಡದ ಮೇಲೆ ನೆಡಿ. ಆ ಕ್ಷಣಕ್ಕೆ ಮನಸ್ಸಿನಲ್ಲಿ ಓಡುತ್ತಿರುವ ಆಲೋಚನೆಗಳನ್ನು ಗಿಡದೊಂದಿಗೆ ಹಂಚಿಕೊಳ್ಳಿ.
ಆಮೇಲೆ ನೋಡಿ ಮನಸ್ಸು ಹಕ್ಕಿಯಂತೆ ಹಗುರವಾಗುವ ಜೊತೆಗೆ ಮರಳಿ ಕೆಲಸಕ್ಕೆ ಮರಳಲು ಹೊಸ ಚೈತನ್ಯ ಒದಗಿಸುತ್ತದೆ.

ಉತ್ಪಾದಕತೆ ಹೆಚ್ಚಳ: ಈ ಹಿಂದೆ ನಡೆದ ಅನೇಕ ಅಧ್ಯಯನಗಳು ಆಫೀಸ್‍ನಲ್ಲಿ ಹಸಿರು ಗಿಡಗಳ ಪಾಟ್ ಇಡುವುದರಿಂದ ಉದ್ಯೋಗಿಗಳ ಉತ್ಪಾದಕತೆ ಹೆಚ್ಚಿಸಬಹುದೆಂದು ಹೇಳಿವೆ. ಹಸಿರು ಗಿಡ ಒತ್ತಡವನ್ನು ತಗ್ಗಿಸಿ ಮನಸ್ಸಿಗೆ
ಚೈತನ್ಯ ನೀಡುವ ಕಾರಣ ಉದ್ಯೋಗಿಗಳು ಗುಣಮಟ್ಟದ ಕೆಲಸವನ್ನು ನೀಡಲು ಸಾಧ್ಯವಾಗುತ್ತದೆ. ಹಸಿರು ಗಿಡ ಉದ್ಯೋಗಿಗಳ ಏಕಾಗ್ರತೆಯನ್ನು ಹೆಚ್ಚಿಸುವ ಜೊತೆಗೆ ನಕಾರಾತ್ಮಕ ಭಾವನೆಗಳನ್ನು ತಗ್ಗಿಸುವ ಮೂಲಕ ಸಮಯಕ್ಕೆ
ಸರಿಯಾಗಿ ಕೆಲಸವನ್ನು ಪೂರ್ಣಗೊಳಿಸಲು ನೆರವು ನೀಡುತ್ತದೆ. ಇದರಿಂದ ಸಹಜವಾಗಿ ಉತ್ಪಾದಕತೆ ಹೆಚ್ಚಳವಾಗುತ್ತದೆ.

ಟ್ಯಾಲೆಂಟ್ ಸೆಳೆಯಲು ಕಂಪೆನಿಗಳು ಪ್ರಯೋಗಿಸಲಿವೆ ಮಾರ್ಕೆಟಿಂಗ್ ಅಸ್ತ್ರ!

ಕ್ರಿಯೇಟಿವ್ ಥಿಂಕಿಂಗ್: ಮನಸ್ಸು ನಿರಾಳವಾಗಿರುವಾಗ, ಒತ್ತಡರಹಿತವಾಗಿರುವಾಗ ಮಿದುಳು ಕ್ರಿಯಾತ್ಮಕವಾಗಿ ಯೋಚಿಸುತ್ತದೆ. ಗಿಡ ಈ ಎಲ್ಲ ಕಾರ್ಯವನ್ನು ಮಾಡುವುದರಿಂದ ಸಂಸ್ಥೆಯಲ್ಲಿ ಕ್ರಿಯೇಟಿವ್ ಉದ್ಯೋಗಿಗಳ ಸಂಖ್ಯೆ
ಹೆಚ್ಚುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಕ್ರಿಯೇಟಿವಿಟಿ ಅತ್ಯಗತ್ಯ. ಔಟ್ ಆಫ್ ದಿ ಬಾಕ್ಸ್ ಥಿಂಕ್ ಮಾಡುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದಷ್ಟು ಕಂಪೆನಿಗೂ ಲಾಭ. 

ಕಣ್ಣಿಗೆ ತಂಪು ತಂಪು: ಸದಾ ಕಂಪ್ಯೂಟರ್ ಮುಂದೆಯೇ ಕುಳಿತು ಕಾರ್ಯನಿರ್ವಹಿಸುವ ಉದ್ಯೋಗಿಗಳು ಆಗಾಗ ಗಿಡವನ್ನು ನೋಡುವುದರಿಂದ ಕಣ್ಣಿಗೂ ಹಿತವೆನಿಸುತ್ತದೆ. ಹಸಿರು ಕಣ್ಣಿನ ನರಗಳ ಮೇಲಿನ ಒತ್ತಡವನ್ನು ತಗ್ಗಿಸುವ
ಮೂಲಕ ಆರಾಮ ಒದಗಿಸುತ್ತದೆ. 

Follow Us:
Download App:
  • android
  • ios