Asianet Suvarna News Asianet Suvarna News

2064 ಪೌರ ಕಾರ್ಮಿಕರ ನೇರ ನೇಮಕಾತಿಗೆ ಸರಕಾರ ಗ್ರೀನ್ ಸಿಗ್ನಲ್

* ಪೌರ ಕಾರ್ಮಿಕರ ನೇರ ನೇಮಕಾತಿಗೆ ಸರಕಾರ ಗ್ರೀನ್ ಸಿಗ್ನಲ್
* 2064 ಪೌರ ಕಾರ್ಮಿಕರ ನೇರ ನೇಮಕಾತಿಗೆ ಒಪ್ಪಿಗೆ 
* ಅಧಿವೇಶನದಲ್ಲಿ ನಗರಾಭಿಚೃದ್ಧಿ ಸಚಿವ ಎಂಟಿಬಿ ನಾಗರಾಜ್ ಹೇಳಿಕೆ 

Karnataka Govt Green Signal To appointment 2064  poura karmika Post Says Minister MTB Nagaraj rbj
Author
Bengaluru, First Published Dec 21, 2021, 10:37 PM IST
  • Facebook
  • Twitter
  • Whatsapp

ಬೆಳಗಾವಿ, (ಡಿ.21) : ನಗರ ಸ್ಥಳೀಯ ಸಂಸ್ಥೆಗಳಲ್ಲಿ 2064 ಪೌರ ಕಾರ್ಮಿಕರ (Poura Karmika) ನೇರ ನೇಮಕಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 

ಜಿಲ್ಲಾಧಿಕಾರಿಗಳು ಈ ನೇಮಕಾತಿಗಳನ್ನು ಮಾಡುವರು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ. ನಾಗರಾಜ್(MTB Nagaraj) ತಿಳಿಸಿದ್ದಾರೆ.

ಬೆಳಗಾವಿಯ(Belagavi) ಸುವರ್ಣ ಸೌಧದ ಬಳಿ ಸೇವಾ ಖಾಯಮಾತಿಗೆ ಅಗ್ರಹಿಸಿ ಧರಣಿ ನಡೆಸುತ್ತಿದ್ದ ಪೌರಾಡಳಿತ ಇಲಾಖೆಯ ಪೌರ ಕಾರ್ಮಿಕರು, ಲೋಡರ್‌ಗಳು, ವಾಟರ್‌ಮ್ಯಾನ್‌ಗಳು, ಕಸದ ಆಟೋ ಚಾಲಕರು, ಕಂಪ್ಯೂಟರ್ ಅಪರೇಟರ್‌ಗಳು, ಯು.ಜಿ.ಡಿ. ಕಾರ್ಮಿಕರು ಮತ್ತು ಕಛೇರಿ ಸಹಾಯಕರ ಅಹವಾಲನ್ನು ಆಲಿಸಿದ ನಂತರ ಸಚಿವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಖಾಸಗಿ, ಸರ್ಕಾರಿ ಹುದ್ದೆಗಳ ನೇಮಕಾತಿ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕೆಳಹಂತದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಲೋಡರ್, ಕ್ಲೀನರ್ ಮತ್ತು ಗ್ಯಾಂಗ್‌ಮನ್‌ಗಳಿಗೆ ವೇತನವನ್ನು ನೇರ ಪಾವತಿ ಮೂಲಕ ನೀಡುವ ಬಗ್ಗೆ ರಾಜ್ಯ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಸಚಿವರು ತಿಳಿಸಿದರು.

ಕಾರ್ಮಿಕರಿಗೆ ವಾರದಲ್ಲಿ 4 ದಿನ ಕೆಲಸ
ಮುಂದಿನ ಆರ್ಥಿಕ ವರ್ಷದಿಂದ ಉದ್ಯೋಗಿಗಳಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸ ಸೇರಿದಂತೆ ವೇತನ(Salary), ಕೆಲಸದ ಅವಧಿ (Working hours) ಹಾಗೂ ಪಿಎಫ್ ಗೆ(PF)ಸಂಬಂಧಿಸಿ ಮಹತ್ವದ ಬದಲಾವಣೆಗಳಾಗೋ ಸಾಧ್ಯತೆಯಿದೆ. ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳನ್ನು(labour codes ) ಅನುಷ್ಠಾನಗೊಳಿಸೋ ಸಾಧ್ಯತೆಯಿದೆ. ವೇತನ(Salary), ಸಾಮಾಜಿಕ ಭದ್ರತೆ(Social security), ಕೈಗಾರಿಕಾ ಸಂಬಂಧ (industrial relations) ಹಾಗೂ ವೃತ್ತಿ ಸುರಕ್ಷತೆ(occupation safety), ಆರೋಗ್ಯ ಹಾಗೂ ಕಾರ್ಯನಿರ್ವಹಣೆ ಪರಿಸ್ಥಿತಿಗಳಿಗೆ (health and working conditions )ಸಂಬಂಧಿಸಿ ನಾಲ್ಕು ಹೊಸ ಕಾರ್ಮಿಕ ನೀತಿ ಸಂಹಿತೆಗಳನ್ನು(labour codes) ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಪಿಟಿಐ ವರದಿ ಮಾಡಿದೆ.

ಕೇಂದ್ರ ಸರ್ಕಾರ 2021ರ ಏಪ್ರಿಲ್ ನಿಂದಲೇ ಹೊಸ ಕಾರ್ಮಿಕ ನೀತಿ ಸಂಹಿತೆಯನ್ನು (labour codes) ಅನುಷ್ಠಾನಗೊಳಿಸೋ ಉದ್ದೇಶ ಹೊಂದಿತ್ತು. ಆದ್ರೆ ಕಾರ್ಮಿಕರು ಸಹವರ್ತಿ ಪಟ್ಟಿಯಲ್ಲಿ ಬರೋ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಈ ನಾಲ್ಕು ನೀತಿ ಸಂಹಿತೆಗಳ ಅಡಿಯಲ್ಲಿ ರೂಪಿಸಿರೋ ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಬೇಕಿತ್ತು.ಅನೇಕ ರಾಜ್ಯಗಳು ಹೊಸ ಕಾರ್ಮಿಕ ನೀತಿ ಸಂಹಿತೆಯಡಿಯಲ್ಲಿ  ನಯಮಗಳನ್ನು ಅಂತಿಮಗೊಳಿಸದ ಕಾರಣ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮುಂದೂಡಿತ್ತು.

ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿತ ನೇಮಕಾತಿ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿತ ನೇಮಕಾತಿ ಪ್ರಕ್ರಿಯೆ ಶುರುವಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಯ 206 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ ಎಂದು ರಾಜ್ಯ ಪೋಲಿಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಇನ್ನೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ ಡಿ.17ರಿಂದ ಜ. 15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಪೊಲೀಸ್ ಇಲಾಖೆ ನೇಮಕಾತಿಯು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದ್ದು, www. Recruitment. ksp. gov. in ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ
ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತದಲ್ಲಿ(Bihar Postal Circle Recruitment 2021) ಖಾಲಿ ಇರುವ ವಿವಿಧ 60 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

'ಸ್ಪೋರ್ಟ್ಸ್ ಕೋಟಾ' (Sports Quota)ಅಡಿಯಲ್ಲಿ  ನೇರ ನೇಮಕಾತಿಗಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಅಂಚೆ ಇಲಾಖೆ, ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಕಚೇರಿ, ಬಿಹಾರ ವೃತ್ತ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಅಂಚೆ ಸಹಾಯಕ(Postal Assistant (PA)) - 31, ವಿಂಗಡಣೆ ಸಹಾಯಕ (Sorting Assistant (SA)) - 11, ಪೋಸ್ಟ್‌ಮ್ಯಾನ್(Postman)-o5,  ಎಂಟಿಎಸ್(ಮಲ್ಟಿ-ಟಾಸ್ಕಿಂಗ್ ಸ್ಟಾಫ್)೯MTS    )-13 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದ್ದು 31.12.2021ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Follow Us:
Download App:
  • android
  • ios