ರಾಪಿಡೋ ಡ್ರೈವರ್ ಆಗಿ ಕೆಲ್ಸ ಮಾಡ್ತಿದ್ದ ಜಾವಾ ಡೆವಲಪರ್‌: ಕೆಲಸ ಹುಡುಕಲು ನೆರವಾದ ಟ್ವಿಟ್ಟಿಗರು

ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ ದುಡಿಮೆ ಇಲ್ಲದೇ ಜೀವನ ನಡೆಯಲು ಸಾಧ್ಯವಿಲ್ಲ, ಹೀಗಾಗಿ ಆತ ರಾಪಿಡೋದಲ್ಲಿ ಕೆಲಸಕ್ಕೆ ಸೇರಿದ, ಹೀಗೆ ಕೆಲಸಕ್ಕೆ ಸೇರಿದವನಿಗೀಗ  ಅದೃಷ್ಟ ಖುಲಾಯಿಸಿದೆ.

Jobless Java developer who was working as a Rapido driver Twitter user who helped him get a job akb

ಬೆಂಗಳೂರು: ಬೈಜೂಸ್‌ನಲ್ಲಿ ಉದ್ಯೋಗ ಕಳೆದುಕೊಂಡು ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಗ್ರಾಹಕರೊಬ್ಬರು ಕೆಲಸ ಗಿಟ್ಟಿಸಿಕೊಳ್ಳಲು ಸಹಾಯ ಮಾಡಿದ ವಿಚಾರ ಕೆಲ ದಿನಗಳ ಹಿಂದೆ ಸಾಕಷ್ಟು ವೈರಲ್ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಮತ್ತೊಂದು ಅಂತಹದ್ದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದ, ಕೆಲಸವಿದ್ದರೂ ಇಲ್ಲದಿದ್ದರೂ ಜೀವನ ನಡೆಯಲೇಬೇಕು, ಹಣವಿಲ್ಲದೇ ದುಡಿಮೆ ಇಲ್ಲದೇ ಜೀವನ ನಡೆಯಲು ಸಾಧ್ಯವಿಲ್ಲ, ಹೀಗಾಗಿ ಆತ ರಾಪಿಡೋದಲ್ಲಿ ಕೆಲಸಕ್ಕೆ ಸೇರಿದ, ಹೀಗೆ ಕೆಲಸಕ್ಕೆ ಸೇರಿದವನಿಗೀಗ ಅದೃಷ್ಟ ಖುಲಾಯಿಸಿದ್ದು, ತಾನು ಕಲಿತ ಹಾಗೂ ಆಸಕ್ತಿಯಿಂದ ಮಾಡುತ್ತಿದ್ದ ವೃತ್ತಿಯೇ ಆತನನ್ನು ಮತ್ತೆ ಕೈ ಬೀಸಿ ಕರೆಯುವ ಹಾದಿಯಲ್ಲಿದೆ.

ಡ್ರೈವಿಂಗ್ ಲೈಸೆನ್ಸ್ (Driving License) ಇದ್ರೆ ಚಾಲನೆ ಗೊತ್ತಿದ್ದರೆ ಬೈಕೊಂದಿದ್ದರೆ ಸಾಕು ನಿಮಗೆ ಮಹಾನಗರಗಳಲ್ಲಿ ಕೆಲಸ ನೀಡುತ್ತೆ ರಾಪಿಡೋ. ಹೀಗಾಗಿ ದಿಢೀರ್ ಕೆಲಸ ಕಳೆದುಕೊಂಡ ಈ ಯುವಕನೂ ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದ. ಹೀಗೆ ಕೆಲಸಕ್ಕೆ ಸೇರಿದ್ದ ಯುವಕನಿಗೆ ತನ್ನ ಕೆಲಸದ ವೇಳೆ ತನ್ನದೇ ವೃತ್ತಿ ಮಾಡುತ್ತಿದ್ದ ಯುವಕನೋರ್ವ ನೆರವಾಗಿದ್ದಾನೆ. ಇವರ ಸ್ಟೋರಿ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ.   ಹಿಂದೂಸ್ತಾನ್ ಕಂಪ್ಯೂಟರ್ಸ್ ಲಿಮಿಟೆಡ್ (HCL)ನಲ್ಲಿ ಉದ್ಯೋಗಿಯಾಗಿದ್ದ ಹೈದರಾಬಾದ್ (Hyderabad) ಮೂಲದ ಶ್ರೀನಿವಾಸ್ ರಾಪೊಲ್ (Srinivas Rapole) ಎಂಬುವವರೇ ಹೀಗೆ ರಾಪಿಡೋ ಓಡಿಸುತ್ತಿದ್ದ ಯುವಕ. ಅವರು  ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದರು. ಜಾವಾ ಡೆವಲಪರ್ (Java developer) ಆಗಿ ಕೆಲಸ ಮಾಡ್ತಿದ್ದ ಅವರು ಅದೇ ಹುದ್ದೆಗಾಗಿ ಹುಡುಕಾಡುತ್ತಿದ್ದರು. 

ಹುಡುಗಿಗೆ ಐಸ್‌ಕ್ರೀಂ ನೀಡಲು 3 ಕಿಲೋ ಮೀಟರ್ ನಡೆದ ಡೆಲಿವರಿ ಬಾಯ್‌ಗೆ ಸಿಕ್ತು ಬೆಸ್ಟ್ ಗಿಫ್ಟ್‌

ಆದರೆ ಬೆಂಗಳೂರು ಮಹಾನಗರದಲ್ಲಿ (Metro cities) ಉದ್ಯೋಗವಿಲ್ಲದೇ ಬದುಕುವುದೂ ಅಸಾಧ್ಯ. ಹೀಗಾಗಿ  ಜೀವನೋಪಾಯಕ್ಕಾಗಿ ರಾಪಿಡೋದಲ್ಲಿ ಚಾಲಕನಾಗಿ ಅವರು ಕೆಲಸ ಮಾಡುತ್ತಿದ್ದರು. ಹೀಗೆ ಕೆಲಸ ಮಾಡುತ್ತಿದ್ದ ಅವರಿಗೆ ಇತ್ತೀಚೆಗೆ ಡ್ರಾಪ್ ನೀಡುವುದಕ್ಕಾಗಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಸಿಕ್ಕಿದ್ದು, ಅವರ ಜೊತೆ ಈ ಯುವಕ ತನ್ನ ಉದ್ಯೋಗದ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. ಅದಕ್ಕೆ ಆ ಸಾಫ್ಟ್‌ವೇರ್ ಉದ್ಯೋಗಿ ನೆರವಾಗಿದ್ದಾರೆ. ಅವರೇ ಸ್ವತಃ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗಿದೆ. 

ಲವನೀಶ್ ಧೀರ್ (Lavanish Dhir) ಎಂಬುವವರು ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ನನ್ನ ರಾಪಿಡೋ ಚಾಲಕ ಓರ್ವ ಜಾವಾ ಡೆವಲಪರ್, ಹೆಚ್‌ಸಿಎಲ್‌ನಲ್ಲಿ ಉದ್ಯೋಗಿಯಾಗಿದ್ದ ಅವರು ಇತ್ತೀಚೆಗೆ ಉದ್ಯೋಗ ಕಳೆದುಕೊಂಡರು. ಅವರು ಯಾವುದಾದರೂ ಡೆವಲಪರ್ ಹುದ್ದೆಗಳ ಮಾಹಿತಿ ಪಡೆಯುವುದಕ್ಕಾಗಿ ರಾಪಿಡೋ ಡ್ರೈವ್ ಮಾಡ್ತಿದ್ದಾರೆ. ನಾನು ಅವರ ಸಿವಿಯನ್ನು ಹೊಂದಿದ್ದೇನೆ.ಆತನಿಗೆ ಸಂಬಂಧಿಸಿದ ಉದ್ಯೋಗ ನೇಮಕಾತಿ ಇದ್ದಲ್ಲಿ ನನಗೆ ಸಂಪರ್ಕಿಸಿ ಎಂದು ಅವರು ಬರೆದುಕೊಂಡಿದ್ದಾರೆ.  ಈ ಟ್ವಿಟ್‌ಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದು, ಒಬ್ಬರು ನಮ್ಮ ಸಂಸ್ಥೆಯಲ್ಲಿ ಆತನನ್ನು ರೆಫರ್ ಮಾಡಿದ್ದೇನೆ. ಕೆಲ ದಿನಗಳಲ್ಲಿ ಆತನಿಗೆ ಕರೆ ಬರಬಹುದು ಎಂದು ಟ್ವಿಟ್ ಮಾಡಿದ್ದಾರೆ. ಆ ಹುಡುಗನಿಗೆ ದೊಡ್ಡ ಗೌರವ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Earn Money: ಈ ಸೈಟಿಗೆ ವಾಯ್ಸ್ ಓವರ್ ಕೊಟ್ಟು, ಕೈ ತುಂಬಾ ಹಣ ಗಳಿಸಿ

ಒಟ್ಟಿನಲ್ಲಿ ಆತ ಉದ್ಯೋಗ ಗಳಿಸಲು ಅನೇಕರು ನೆರವಾಗಿದ್ದಾರೆ. 

 

Latest Videos
Follow Us:
Download App:
  • android
  • ios