ನವದೆಹಲಿ(ನ.29): ಕೆಲಸದ ವೇಳೆ ನಿದ್ದೆ ಮಂಪರು ಬಂದರೆ ಸಿನಿಯರ್'ಗಳಿಂದ ಬೈಯಿಸಿಕೊಳ್ಳೋದು ಗ್ಯಾರಂಟೀ. ಮಧ್ಯಾಹ್ನದ ಊಟದ ನಂತರ ಒಂದು ಜಂಪ್ ನಿದ್ದೆ ಮಾಡಿ ಏಳೋಣ ಅಂದ್ರೆ ಪಕ್ಕದಲ್ಲೇ ಕೂರವ ಮೇಲಾಧಿಕಾರಿ ಮುಖ ಕೆಂಪಾಗಿರುತ್ತದೆ.

ಅಂತದ್ದರಲ್ಲಿ ಏನೂ ಕೆಲಸವಿಲ್ಲದೇ ಕೇವಲ ಮಲಗಿಕೊಳ್ಳಲೆಂದೇ ಕಂಪನಿಯೊಂದು ನಿಮಗೆ 1 ಲಕ್ಷ ರೂ. ಸಂಬಳ ನೀಡುವ ಆಫರ್ ನೀಡಿದರೆ? ಅಚ್ಚರಿಪಡಬೇಡಿ, ಇಂತದ್ದೊಂದು ಆಫರ್ ನಿಜಕ್ಕೂ ಅಸ್ತಿತ್ವದಲ್ಲಿದೆ.

ವೇಕ್‌ಫಿಟ್.ಕೋ ಎಂಬ ಕಂಪನಿ ರಾತ್ರಿ ವೇಳೆ ಬರೋಬ್ಬರಿ 9 ಗಂಟೆ ಮಲಗುವವರಿಗೆ ತಿಂಗಳಿಗೆ 1 ಲಕ್ಷ ರೂ. ಸಂಬಳ ನೀಡುವುದಾಗಿ ಘೋಷಿಸಿದೆ. ದಿನಕ್ಕೆ 9 ಗಂಟೆಯಂತೆ ವಾರದಲ್ಲಿ 100 ಗಂಟೆ ಮಲಗುವುದು ಉದ್ಯೋಗಿಯ ಕೆಲಸ.

ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ, ಕಂಪನಿ ಆರೋಗ್ಯಕರವಾಗಿ ನಿದ್ರಿಸುವ ವ್ಯಕ್ತಿಗಳ ಹುಟುಕಾಟದಲ್ಲಿದ್ದು, ದಿನವೊಂದಕ್ಕೆ ಬರೋಬ್ಬರಿ 9 ಗಂಟೆಗಳ ಕಾಲ ಮಲಗುವ ಹವ್ಯಾಸವಿರುವವರು ಅರ್ಜಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಗಾಂಜಾ ಸೇವಿಸಿದ್ರೆ 2 ಲಕ್ಷ ಸಂಬಳ: ಕಂಪನಿಯ ವಿಚಿತ್ರ ಆಫರ್!

ಅರ್ಹತೆ:

ಮಲಗುವ ವೇಳೆ ಪೈಜಾಮ ಹಾಕಿಕೊಂಡು ಮಲಗಬೇಕು ಎಂಬುದಷ್ಟೇ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಯಾಗಿದೆ.

ಮನುಷ್ಯನ ಮಲಗುವ ಹವ್ಯಾಸ ಮತ್ತು ಅದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ಮಾಡುವುದು ವೇಕ್‌ಫಿಟ್.ಕೋ ಕಂಪನಿಯ ಉದ್ದೇಶ ಎನ್ನಲಾಗಿದೆ.