Asianet Suvarna News Asianet Suvarna News

ಸರ್ಕಾರಿ ನೌಕರಿ ಪಡೆಯುವ ಹಂಬಲದಲ್ಲಿ ರೈಲ್ವೇ ಟ್ರ್ಯಾಕ್‌ಮನ್ ಆದ IIT ಪದವೀಧರ!

ಬಾಂಬೆ ಐಐಟಿ ಪದವೀಧರನಾದರೂ ರೈಲ್ವೇ ಟ್ರ್ಯಾಕ್‌ಮನ್ ಉದ್ಯೋಗ| ಸರ್ಕಾರಿ ನೌಕರಿ ಪಡೆಯುವ ಹಂಬಲ, ಉನ್ನತ ಶಿಕ್ಷಣ ಪಡೆದರೂ ಗ್ರೂಪ್ ಡಿ ನೌಕರಿ| ಟ್ರ್ಯಾಕ್‌ಮನ್ ಏನೆಲ್ಲಾ ಮಾಡ್ಬೇಕಾಗುತ್ತೆ? ಇಲ್ಲಿದೆ ಶ್ರವಣ ಕುಮಾರ್ ಸ್ಟೋರಿ

IITian from Bihar clears RRB Group D exam now works as trackman in Dhanbad
Author
Bangalore, First Published Aug 26, 2019, 5:10 PM IST

ಪಾಟ್ನಾ[ಆ.26]: ಜೀವನದಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕೆಂಬುವುದು ಹಲವರ ಆಸೆ. ಇಂತಹುದೇ ಇಚ್ಛೆ ಹೊಂದಿದ್ದ ಬಿಹಾರದ ಶ್ರವಣ ಕುಮಾರ್ ರೈಲ್ವೇಯಲ್ಲಿ ಟ್ರ್ಯಾಕ್‌ಮೆಂಟೇನರ್[ಟ್ರ್ಯಾಕ್ ಮನ್] ಆಗಿದ್ದಾನೆ. ಆದರೆ ಈತ ಪಡೆದಿರುವ ಶಿಕ್ಷಣ ಮಾತ್ರ ಅದಕ್ಕೂ ಮಿಗಿಲಾದುದು.

ಹೌದು ಶ್ರವಣ ಕುಮಾರ ಬಾಂಬೆ ಐಐಟಿಯ ಬಿ. ಟೆಕ್ ಹಾಗೂ ಎಂ. ಟೆಕ್ ಪದವೀಧರ. ಹಿಗಿದ್ದರೂ ಆತ ರೈಲ್ವೇ ಇಲಾಖೆಯಲ್ಲಿ ಗ್ರೂಪ್ ಡಿ ದರ್ಜೆಯ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಕೆಲವರು ಆತನಿಗೆ ಸರ್ಕಾರಿ ನೌಕರಿ ಪಡೆಯಬೇಕೆಂಬ ಹಂಬಲದ ಫಲವಿದು ಎಂದರೆ, ಮತ್ತೆ ಕೆಲವರು ನಿರುದ್ಯೋಗದಿಂದಾಗಿ ಆತ ಈ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ.

ಶ್ರವಣ ಕುಮಾರ ಪಾಟ್ನಾದ ಪಾಲಿಗಂಜ್ ನಿವಾಸಿ. ತನ್ನ ಕೆಲಸದ ಕುರಿತು ಪ್ರತಿಕ್ರಿಯಿಸಿರುವ ಆತ 'ಯಾವುದೇ ಕೆಲಸ ಮೇಲು, ಕೀಳು ಆಗಿರುವುದಿಲ್ಲ. ಜೀವನದಲ್ಲಿ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು' ಎನ್ನುತ್ತಾರೆ. ಸದ್ಯ ಭಾರತೀಯ ರೈಲ್ವೇಯ ಧನ್ ಬಾದ್ ರೈಲು ವಿಭಾಗದಲ್ಲಿ ಟ್ರ್ಯಾಕ್ ಮೆನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೀನು ಮಾರುವ ಮಹಿಳೆ ಮಗನೀಗ ಹೆಮ್ಮೆಯ ಇಸ್ರೋ ಸಂಸ್ಥೆ ನೌಕರ

ಶ್ರವಣ ಕುಮಾರ್ ಸೇರ್ಪಡೆಯಿಂದ ಅಚ್ಚರಿಗೀಡಾಗಿದ್ದ ಸೀನಿಯರ್ಸ್
ಶ್ರವಣ ಧನ್ ಬಾದ್ ರೈಲು ವಿಭಾಗಕ್ಕೆ ಕೆಸಲಕ್ಕೆ ಸೇರ್ಪಡೆಯಾದಾಗ, ಆತನ ಸೀನಿಯರ್ಸ್ ಅಚ್ಚರಿಗೀಡಾಗಿದ್ದರು. ಯಾಕೆಂದರೆ ಉನ್ನತ ಮಟ್ಟದ ಶಿಕ್ಷಣ ಪಡೆದಿರುವ ವ್ಯಕ್ತಿಯೊಬ್ಬ, ಗ್ರೂಪ್ ಡಿ ನೌಕರಿ ಮಾಡುತ್ತಾನೆಂದು ಅಂದುಕೊಂಡಿರಲಿಲ್ಲವಂತೆ.

2010ರಲ್ಲಿ ಐಐಟಿಗೆ ದಾಖಲು

ಶ್ರವಣ ಕುಮಾರ್ 2010ರಲ್ಲಿ ಐಐಟಿ ಬಾಂಬೆಯಲ್ಲಿ ಇಂಟಿಗ್ರೇಟೆಡ್ ಡ್ಯವಲ್ ಡಿಗ್ರಿ ಕೋರ್ಸ್ ಗೆ ದಾಖಲಾಗಿದ್ದರು. ಈ ಮೂಲಕ 2015ರೊಳಗೆ ಅವರು ಬಿ. ಟೆಕ್ ಹಾಗೂ ಎಂ. ಟೆಕ್ ಪದವಿ ಪಡೆದರು. ಲಭ್ಯವಾದ ಮಾಹಿತಿ ಅನ್ವಯ ಶ್ರವಣ ಕುಮಾರ್ ಚಿಕ್ಕಂದಿನಿಂದಲೂ ಸರ್ಕಾರಿ ನೌಕರಿ ಪಡೆಯಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಮುಂದೆ ತಾನೊಬ್ಬ ಸರ್ಕಾರಿ ಅಧಿಕಾರಿಯಾಗುತ್ತೇನೆಂಬ ವಿಶ್ವಾಸ ಶ್ರವಣ ಕುಮಾರ್ ದ್ದಾಗಿದೆ.

ಸರ್ಕಾರಿ ನೌಕರಿಯಲ್ಲಿದೆ ಜಾಬ್ ಸೆಕ್ಯೂರಿಟಿ

ಸರ್ಕಾರಿ ನೌಕರಿಯಲ್ಲಿರುವಷ್ಟು ಕೆಲಸದ ಭದ್ರತೆ ಖಾಸಗಿ ಉದ್ಯೋಗದಲ್ಲಿಲ್ಲ ಎನ್ನುವುದು ಶ್ರವಣ ಕುಮಾರ್ ಅಭಿಪ್ರಾಯ. ರೈಲ್ವೇ ಇಲಾಖೆಗೆ ಸೇರ್ಪಡೆಯಾಗಿ ಅವರು ಖುಷಿಯಾಗಿದ್ದಾರೆ. ಐಐಟಿಯ್ಲಲಿರುವಾಗ ಹಲವಾರು ಕಂಪೆನಿಗಳು ಕ್ಯಾಂಪಸ್ ಸೆಲೆಕ್ಷನ್ ಗೆ ಬಂದಿದ್ದವು. ಶ್ರವಣ ಕುಮಾರ ಕೂಡಾ ಆಯ್ಕೆಯಾಗಿದ್ದರು. ಆದರೆ ಆ ಉದ್ಯೋಗವನ್ನು ಇಷ್ಟಪಡದ ಶ್ರವಣ ಕುಮಾರ್ ನಿರಾಕರಿಸಿದ್ದರು. 

ಟ್ರ್ಯಾಕ್ ಮನ್ ಕೆಲಸವೇನು?

ರೈಲು ಸಂಚರಿಸುವ ವಿಚಾರದಲ್ಲಿ ಟ್ರ್ಯಾಕ್ ಮನ್ ಶ್ರಮ ಬಹಳಷ್ಟಿದೆ. ಆದರೆ ಯಾರೂ ಇದನ್ನು ನೆನಪಿಟ್ಟುಕೊಳ್ಳುವುದಿಲ್ಲ. ಟ್ರ್ಯಾಕ್ ಮನ್ ಒಬ್ಬ ಟ್ರ್ಯಾಕ್ ಗಳಿಗೆ ಅಳವಡಿಸಿದ ಪ್ರತಿಯೊಂದು ಬೋಲ್ಟ್ ಗಳನ್ನು ಪರಿಶೀಲಿಸಬೇಕಾಗುತ್ತದೆ. ಇಂದಿಗೂ ಚಿಕ್ಕ ನಿಲ್ದಾಣಗಳಲ್ಲಿ ಬೋಲ್ಟ್ ಗಳನ್ನು ಕೈಯ್ಯಲ್ಲೇ ಸರಿಪಡಿಸುತ್ತಾರೆ. ಇವುಗಳನ್ನು ಟ್ರ್ಯಾಕ್ ಮನ್ ನೋಡಿಕೊಳ್ಳುತ್ತಾರೆ. ಅಲ್ಲದೇ ಕೆಲವೊನಮ್ಮೆ ಭಾರವಾದ ರೈಲು ಪಟ್ಟಿಗಳನ್ನು ಖುದ್ದು ಟ್ರ್ಯಾಕ್ ಮನ್ ಹೊತ್ತೊಯ್ಯಬೇಕಾಗುತ್ತದೆ. ಹೀಗಾಗಿ ಬಹಳಷ್ಟು ಹೊತ್ತು ರೈಲು ಹಳಿಗಳ ಮೇಲೆ ಕಳೆಯಬೇಕಾಗುತ್ತದೆ. ಇನ್ನು ಈ ಕೆಲಸ ನಿರ್ವಹಿಸುವಾಗ, ರೈಲುಗಳೂ ಸಂಚರಿಸುತ್ತದೆ ಹೀಗಾಗಿ ಎಚ್ಚರಿಕೆಯಿಂದಿಬೇಕು. ಚಿಕ್ಕ ತಪ್ಪು ಮಾಡಿದರೂ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ.  

Follow Us:
Download App:
  • android
  • ios