ಮೀನು ಮಾರುವ ಮಹಿಳೆ ಮಗನೀಗ ಹೆಮ್ಮೆಯ ಇಸ್ರೋ ಸಂಸ್ಥೆ ನೌಕರ

ಮೀನು ಮಾರುವ ಮಹಿಳೆಯ ಮಗನೀಗ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯ ನೌಕರನಾಗಿ ಆಯ್ಕೆಯಾಗಿದ್ದಾರೆ. ಇಸ್ರೋದಲ್ಲಿ ತಂತ್ರಜ್ಞನಾಗಿ ಕೆಲಸಕ್ಕೆ ಸೇರುತ್ತಿದ್ದಾರೆ.

Palghar fishwifes 27 year old son to join ISRO as a technician

ಮುಂಬೈ [ಜು.30] : ಮೀನು ಮಾರಾಟ ಮಾಡುವ ತಾಯಿಯ ಹಲವು ವರ್ಷದ ಪರಿಶ್ರಮದ ಫಲವಾಗಿ ಆಕೆಯ ಪುತ್ರನೀಗ ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯನ್ನು ಸೇರುತ್ತಿದ್ದಾರೆ. 

ಮಹಾರಾಷ್ಟ್ರದ ಪಲ್ಗಾರ್ ನಿವಾಸಿಯಾದ 27 ವರ್ಷದ ವಂದೇಶ್ ಪಾಟೀಲ್ ಭಾರತೀಯ ಬಾಹ್ಯಾಕಾಶ ಸಂಸ್ಥೆ [ISRO] ಟೆಕ್ನಿಶಿಯನ್ ಆಗಿ ಆಯ್ಕೆಯಾಗಿ, ತಾಯಿಯ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ್ದಾರೆ. 

ವಂದೇಶ್ ತಂದೆ ರಾಜೇಶ್ 2009ರಲ್ಲಿ ಅನಾರೋಗ್ಯದಿಂದ ಮೃತರಾದರು. ಅಂದಿನಿಂದ ತಾಯಿ ಸುನಂದ ಮಗನ ಏಳ್ಗೆಗಾಗಿ ಹಗಲು ರಾತ್ರಿ ಶ್ರಮಿಸಿದರು. ಮೀನು ಮಾರಿ ಮಗನ ಶಿಕ್ಷಣ ವೆಚ್ಚ ಭರಿಸಿದ್ದು, ಶ್ರಮದ ಪ್ರತಿಫಲ ಇದೀಗ ದೊರಕಿದೆ. 

ವಂದೇಶ್ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲಮೋ ಪದವೀದರರಾಗಿದ್ದು, ಬಳಿಕ ಎಲೆಕ್ಟ್ರಾನಿಕ್ ಮೈಂಟೇನನ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪೂರೈಸಿದರು. 2018ರಲ್ಲಿ ಇಸ್ರೋದಲ್ಲಿ ಪರೀಕ್ಷೆ ಎದುರಿಸಿ ತೇರ್ಗಡೆಯಾಗದರು. 

ಕೇವಲ 9 ಹುದ್ದೆಗಳಿಗೆ 1200 ಆಕಾಂಕ್ಷಿಗಳಿದ್ದು, ಮಹಾರಾಷ್ಟ್ರದಿಂದ ವಂದೇಶ್ ಓರ್ವರೆ ಪರೀಕ್ಷೆ ತೇರ್ಗಡೆಯಾಗುವಲ್ಲಿ ಯಶಸ್ವಿಯಾದರು. ಆಗಸ್ಟ್ 5 ರಿಂದ ಕೆಲಸಕ್ಕೆ ಹಾಜರಾಗಲಿದ್ದು, ಇವರಿಗೆ All The best ಹೇಳೋಣ.

Latest Videos
Follow Us:
Download App:
  • android
  • ios