ಭಾರತದ ರಕ್ಚಣಾ ಇಲಾಖೆಯ ಅಧೀನದಲ್ಲಿ ಬರುವ ಬಾರ್ಡರ್ ರೋಡ್ ಆರ್ಗನೈಜೇಶನ್ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.

ಚಾಲಕರು, ವಿವಿಧ ಕೌಶಲ್ಯವಿರುವ ಕೆಲಸಗಾರರು, ಆಪರೇಟರ್ ಸೇರಿದಂತೆ 778 ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಜುಲೈ 15 ರೊಳಗೆ ಆಸಕ್ತರು ಅರ್ಜಿ ಹಾಕಬಹುದಾಗಿದೆ. 

ವಾಹನಾ ಚಾಲನಾ ಲೈಸನ್ಸ್ ಹೊಂದಿರಬೇಕಾದ್ದು ಕಡ್ಡಾಯ. ಮೆಕಾನಿಕಲ್ ಮತ್ತು ಎಲೆಕ್ಟ್ರಿಶಿಯನ್ ಸರ್ಟಿಫಿಕೇಟ್ ಗಳು ವಿವಿಧ ಹುದ್ದೆಗೆ ಅಗತ್ಯ. ಅಭ್ಯರ್ಥಿಗಳು 18 ರಿಂದ 27 ವರ್ಷದೊಳಗಿನವರಾಗಿರಬೇಕು.

ಸುವರ್ಣಾವಕಾಶ, ಕರ್ಣಾಟಕ ಬ್ಯಾಂಕ್‌ನಿಂದ ಹುದ್ದೆ ಭರ್ತಿಗೆ ಅರ್ಜಿ

ವಿವರಗಳು

ಅರ್ಜಿ ಸಲ್ಲಿಸಲು ಕೊನೆ ದಿನ: ಜುಲೈ 15, 2019

ಒಟ್ಟು ಹುದ್ದೆಗಳು : 778

DVRMT (OG)-388 ಹುದ್ದೆ

ಎಲೆಕ್ಟ್ರಿಶಿಯನ್: 101 ಹುದ್ದೆ

ವೆಹಿಕಲ್ ಮೆಕ್ಯಾನಿಕ್: 92 ಹುದ್ದೆ

ವಿವಿಧ ಕೌಶಲ್ಯ  ಕೆಲಸಗಾರರು: 197 ಹುದ್ದೆ

ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾಹಿತಿಗಳನ್ನು http://www.bro.gov.in/ ಭೇಟಿ ನೀಡಿ ಪಡೆದುಕೊಳ್ಳಬಹುದು.