ಬೆಂಗಳೂರು[ಜು. 09] ಕರ್ನಾಟಕ ಬ್ಯಾಂಕ್ ಕ್ಲರ್ಕ್ ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿ ಯಾವೆಲ್ಲ ಕ್ಯಾಲಿಫಿಕೇಶನ್ ಹೊಂದಿರಬೇಕು ಎಂಬುದನ್ನು ತಿಳಿಸಿದೆ.

ವಿವರಗಳು

1. ಯುಜಿಸಿ ಮಾನ್ಯ ಮಾಡಿರುವ ವಿಶ್ವವಿದ್ಯಾಲಯದಿಂದ ಪದವಿ[ ಕನಿಷ್ಠ . 60]

2. 01-07-2019 ಅಂದರೆ ಜುಲೈ 01 ರೊಳಗಾಗಿ ಪದವಿ ಮುಗಿಸಿರಬೇಕು. ಪದವಿ ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

3. ವಯೋಮಿತಿ: 01-07-2019 ಕೊನೆಗೊಂಡಂತೆ ಗರಿಷ್ಠ 26 ವರ್ಷದವರಿಗೆ ಮಾತ್ರ ಅವಕಾಶ. ಎಸ್ ಸಿ ಮತ್ತು ಎಸ್ ಟಿ ಕ್ಯಾಂಡಿಡೇಟ್ ಗಳಿಗೆ 5 ವರ್ಷ ವಿನಾಯಿತಿ ಇದೆ.

4. ಎಸ್ ಸಿ ಮತ್ತು ಎಸ್ ಟಿ ಕ್ಯಾಂಡಿಡೇಟ್ ಗಳಿಗೆ ಅರ್ಜಿ ಶುಲ್ಕ 500ರೂ. ಉಳಿದವರಿಗೆ 600 ರೂ.

ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?

5. ಆಗಸ್ಟ್ 8, 2019ರಂದು ಆನ್ ಲೈನ್ ನಲ್ಲಿ ಪರೀಕ್ಷೆ ನಡೆಯಲಿದೆ. ಏಕಕಾಲದಲ್ಲಿ ಬೆಂಗಳೂರು, ದೆಹಲಿ, ಹುಬ್ಬಳ್ಳಿ-ಧಾರವಾಡ, ಮಂಗಳುರು, ಮುಂಬೈ, ಮೈಸೂರಿನಿಂದ ಪರೀಕ್ಷೆ ನಡೆಯಲಿದೆ.

6. ಆಯ್ಕೆಯಾಗುವ ಅಭ್ಯರ್ಥಿಗಳು 3 ವರ್ಷದ ಬಾಂಡ್ ನೀಡಬೇಕಾಗುತ್ತದೆ.

7. 37 ಸಾವಿರ ರೂ. ವೇತನ ಶ್ರೇಣಿ ನಿಗದಿ ಮಾಡಲಾಗಿದೆ.

8. ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು 10-7-2019 ಅಂದರೆ ಜುಲೈ 10 ರಿಂದ 20-07-2019 ಅಂದರೆ ಜುಲೈ 20ರವರೆಗೆ ಅವಕಾಶ ಇದೆ.

9. ಹೆಚ್ಚಿನ ಮಾಹಿತಿಗೆ ಬ್ಯಾಂಕ್ ವೆಬ್ ಣ https://karnatakabank.com/ ಗೆ ಭೇಟಿ ನೀಡಬಹುದು.