Asianet Suvarna News Asianet Suvarna News

ಉದ್ಯೋಗ ನೇಮಕದಲ್ಲಿ ಬೆಂಗಳೂರು ಮುಂಚೂಣಿ

ಉದ್ಯೋಗ ನೇಮಕದಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ|ಕೊರೋನಾ ನಡುವೆಯೂ ಐಟಿ ಕ್ಷೇತ್ರದಲ್ಲಿ ನೇಮಕಾತಿ| ಒಎಲ್‌ಎಕ್ಸ್‌ ಪೀಪಲ್‌ ಸಮೀಕ್ಷೆ| ಮುಂಬೈ ಹಾಗೂ ದೆಹಲಿ ಮೂಂಚೂಣಿಗೆ ಏರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ|
 

Bengaluru is the Frontline in job placement
Author
Bengaluru, First Published Jul 31, 2020, 9:21 AM IST

ಬೆಂಗಳೂರು(ಜು.31): ಕೊರೋನಾ ವೈರಸ್‌ನಿಂದ ಆರ್ಥಿಕತೆಗೆ ಹೊಡೆತ ಬಿದ್ದಿರುವ ಹೊರತಾಗಿಯೂ ಮಾಹಿತಿ ತಂತ್ರಜ್ಞಾನ ಆಧಾರಿತ ಕ್ಷೇತ್ರದಲ್ಲಿ ಉದ್ಯೋಗಿಗಳ ನೇಮಕದಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಅಲ್ಲದೇ ಕೌಶಲ್ಯ ಕಾರ್ಮಿಕರ (ಬ್ಲೂಕಾಲರ್‌) ನೇಮಕದಲ್ಲೂ ಚೇತರಿಕೆ ಕಂಡುಬಂದಿದೆ ಎಂಬ ಸಂಗತಿ ಮಾನವ ಸಂಪನ್ಮೂಲ ವೇದಿಕೆ ‘ಒಎಲ್‌ಎಕ್ಸ್‌ ಪೀಪಲ್‌’ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಕಳೆದ ಎರಡು ತಿಂಗಳಿನಿಂದ ಉದ್ಯೋಗ ನೇಮಕಗಳು ಹೆಚ್ಚಳಗೊಂಡಿರುವುದು ಆಶಾವಾದ ಮೂಡಿಸಿದೆ ಎಂದು ಸಮೀಕ್ಷೆ ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿದ್ದರು. ಆದರೆ, ಲಾಕ್‌ಡೌನ್‌ ಬಳಿಕ ಆರ್ಥಿಕ ಚಟುವಟಿಕೆ ಗರಿಗೆದರಿದ್ದು, ಪುನಃ ನೇಮಕಾತಿಯ ಪ್ರಕ್ರಿಯೆಗಳು ಆಂಭಗೊಂಡಿವೆ. ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆ (ಐಟಿಇಎಸ್‌), ಸರಕು ಸಾಗಣೆ ಕ್ಷೇತ್ರದಲ್ಲಿ ಕಂಪನಿಗಳು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿರುವ ಪ್ರಮಾಣ ಬೆಂಗಳೂರಿನಲ್ಲಿ ಶೇ.90 ರಷ್ಟಿದ್ದರೆ, ಮುಂಬೈನಲ್ಲಿ ಶೇ.86ರಷ್ಟಿದೆ. ದೆಹಲಿಯ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಶೇ.76 ರಷ್ಟಿದೆ ಎಂದು ಒಎಲ್‌ಎಕ್ಸ್‌ ಪೀಪಲ್‌ ಸಂಸ್ಥೆ ಮುಖ್ಯಸ್ಥ ತರುಣ್‌ ಸಿನ್ಹಾ ತಿಳಿಸಿದ್ದಾರೆ.

ವಿಮಾನಯಾನ ಕ್ಷೇತ್ರದಲ್ಲಿ 4 ಲಕ್ಷ ಜನರ ಉದ್ಯೋಗ ಡೋಲಾಯಮಾನ!

ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಯಲ್ಲಿನ ನೇಮಕಾತಿಯಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆಯುವ ನಿರೀಕ್ಷೆ ಇದ್ದರೆ, ಸರಕು ಸಾಗಣೆಗೆ ಸಂಬಂಧಿಸಿದ ಉದ್ಯೋಗದಲ್ಲಿ ಮುಂಬೈ ಹಾಗೂ ದೆಹಲಿ ಮೂಂಚೂಣಿಗೆ ಏರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
 

Follow Us:
Download App:
  • android
  • ios