ನ್ಯೂಯಾರ್ಕ್(ಜು.26): ಕೊರೋನಾ ಸೋಂಕಿನಿಂದಾಗಿ ಅತಿಹೆಚ್ಚು ತೊಂದರೆ ಸಿಕ್ಕ ಕ್ಷೇತ್ರಗಳಲ್ಲಿ ಒಂದಾದ ವಿಮಾನಯಾನ ವಲಯದಲ್ಲಿ ಈವರೆಗೆ ಅಂದಾಜು 4 ಲಕ್ಷ ಸಿಬ್ಬಂದಿಗಳನ್ನು ತೆಗೆದು ಹಾಕಲಾಗಿದೆ ಅಥವಾ ಶೀಘ್ರವೇ ಕೆಲಸ ಕಳೆದುಕೊಂಡವರ ಪ್ರಮಾಣ ಈ ಆಘಾತಕಾರಿ ಮಟ್ಟವನ್ನು ಮುಟ್ಟಲಿದೆ ಎಂದು ವರದಿಯೊಂದು ಹೇಳಿದೆ.

ಬ್ಲೂಮ್‌ಬರ್ಗ್‌ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ ಪ್ರತಿಷ್ಠಿತ ಕಂಪನಿಗಳಾದ ಬ್ರಿಟಿಷ್‌ ಏರ್ವೇಸ್‌, ಡೆಯ್ಚೆ ಲುಫ್ತಾನ್ಸಾ ಎಜಿ, ಎಮಿರೇಟ್ಸ್‌ ಏರ್‌ಲೈನ್ಸ್‌, ಕಾಂಟಸ್‌ ಏರ್ವೇಸ್‌ ಲಿ. ಈಗಾಗಲೇ ಒಂದಿಷ್ಟುಉದ್ಯೋಗಿಗಳನ್ನು ತೆಗೆದಿದೆ. ಇನ್ನೊಂದಿಷ್ಟುಉದ್ಯೋಗಿಗಳನ್ನು ಸಂಬಳ ರಹಿತ ರಜಾ ಘೋಷಿಸಿ ಮನೆಗೆ ಕಳುಹಿಸಿದೆ. ಡೆಲ್ಟಾಏರ್‌ಲೈನ್ಸ್‌, ಯುನೈಟೆಡ್‌ ಏರ್‌ಲೈನ್ಸ್‌ ಹೋಲ್ಡಿಂಗ್ಸ್‌, ಅಮೆರಿಕನ್‌ ಏರ್‌ಲೈನ್ಸ್‌ ಗ್ರೂಪ್‌ ಕಂಪನಿಗಳು 35,000 ಮಂದಿ ಉದ್ಯೋಗಿಗಳಿಗೆ ಈಗಾಗಲೇ ಕೆಲಸ ಕಳೆದುಕೊಳ್ಳುವ ಕುರಿತು ಮಾಹಿತಿ ನೀಡಿದೆ.

ಇದಲ್ಲದೆ ಬಹುತೇಕ ಕಂಪನಿಗಳು ಈಗಾಗಲೇ ಪೈಲಟ್‌ಗಳು ಮತ್ತು ವಿಮಾನಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಸಂಬಳವನ್ನೂ ಕಡಿತಗೊಳಿಸಿದೆ.