ನವದೆಹಲಿ(ಮೇ.23): ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ವ್ಯಾಪಾರ, ವಹಿವಾಟು ಬಂದ್ ಆಗಿತ್ತು. ಇದೀಗ ಲಾಕ್‌ಡೌನ್ ಸಡಿಲಿಕೆಯಾಗಿದ್ದರೂ ಮೊದಲಿನ ರೀತಿಯಲ್ಲಿ ವಹಿವಾಟು ಸಾಧ್ಯವಾಗುತ್ತಿಲ್ಲ. ಮುಚ್ಚಿರುವ ಕಂಪನಿಗಳು ಬಾಗಿಲು ತೆರೆದಿದ್ದರೂ, ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಸುದೀರ್ಘ ದಿನಗಳೇ ಹಿಡಿಯಲಿದೆ. ಹೀಗಾಗಿ ಕಂಪನಿಗಳು ವೇತನ ಕಡಿತ, ಉದ್ಯೋಗ ಕಡಿತ ಮುಂದುವರಿಸಿದೆ. ಉದ್ಯೋಗದ ಆತಂಕದಲ್ಲಿ ಜನ ದಿನ ಮುಂದೂಡುತ್ತಿರುವಾಗ ಅಮೇಜಾನ್ 50,000 ಮಂದಿಯನ್ನು ತಾತ್ಕಾಲಿಕ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಅಟೋಮೊಬೈಲ್ ಕ್ಷೇತ್ರಕ್ಕೆ ಅಮೇಜಾನ್; ಭಾರತದಲ್ಲಿ ಆಟೋ ರಿಕ್ಷಾ EV ಬಿಡುಗಡೆಗೆ ತಯಾರಿ!.

ಲಾಕ್‌ಡೌನ್ ಆರಂಭವಾದ ಸಮಯದಿಂದ ಆನ್‌ಲೈನ್ ಸರ್ವೀಸ್ ಹೆಚ್ಚು ಪರಿಣಾಮಕಾರಿಯಾಗಿದೆ.  ಇದೀಗ ಎಲ್ಲರೂ ಆನ್‌ಲೈನ್ ಆರ್ಡರ್ ಮೊರೆ ಹೋಗುತ್ತಿದ್ದಾರೆ. ಇ ಕಾಮರ್ಸ್ ದಿಗ್ಗಜನಾಗಿ ಗುರುತಿಸಿಕೊಂಡಿರುವ ಅಮೇಜಾನ್, ಅಗತ್ಯ ವಸ್ತು, ದಿನಸಿ ವಸ್ತುಗಳ ಸೇವೆ ವಿಭಾಗ ನಿರಂತರವಾಗಿ ಕಾರ್ಯನಿರ್ವಹಿಸಿತ್ತು. ಜನರ ಬೇಡಿಕೆ ಹೆಚ್ಚಾದಂತೆ ಅಮೇಜಾನ್ ಕೂಡ ಹೆಚ್ಚುವರಿ ಕೆಲಸ ಮಾಡಿ ಅಗತ್ಯ ವಸ್ತುಗಳ ಪೂರೈಕೆ ಮಾಡಿತ್ತು. ಲಾಕ್‌ಡೌನ್ ಸಡಿಲಿಕೆಯಾದರೂ ಜನರು ಹೆಚ್ಚಾಗಿ ಆನ್‌ಲೈನ್ ಸರ್ವೀಸ್ ನೆಚ್ಚಿಕೊಂಡಿದ್ದಾರೆ. ಇದರ ನಡುವೆ ಅಮೇಜಾನ್ 50,000 ಉದ್ಯೋಗವಕಾಶ ಸೃಷ್ಟಿಸುತ್ತಿದೆ.

ಒಂದೇ ದಿನದಲ್ಲಿ ಪುಟಿದೆದ್ದ ಜೆಫ್: ಗೇಟ್ಸ್‌ನಿಂದ ಶ್ರೀಮಂತ ಪಟ್ಟ ಕಸಿದ ಬೆಜೋಸ್!

ಕೊರೋನಾ ವೈರಸ್ ಇರುವ ವರೆಗೆ ನಿರ್ಬಂಧಗಳು ಸಾಮಾನ್ಯ. ಹೀಗಾಗಿ ಕಂಪನಿಯಲ್ಲಿ ಸಾಮಾಜಿಕ ಅಂತರ, ಗ್ರಾಹಕರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ವಸ್ತುಗಳ ಪೂರೈಕೆಗೆ ಕಂಪನಿ 50,000 ಉದ್ಯೋಗ ನೇಮಕ ಮಾಡುತ್ತಿದೆ ಎಂದು ಅಮೇಜಾನ್ ಸೀನಿಯರ್ ಎಕ್ಸ್‌ಕ್ಯೂಟೀವ್ ಅಖಿಲ್ ಸಕ್ಸೇನಾ ಹೇಳಿದ್ದಾರೆ.

ಇತರ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಆದರೆ ಅಮೇಜಾನ್ ಉದ್ಯೋಗಿಗಳ ನೇಮಕ ಮಾಡುತ್ತಿದೆ. ತಾತ್ಕಾಲಿಕ ಕೆಲಸಕ್ಕೆ ನೇಮಕ ನಡೆಯಲಿದೆ. ಡಿಲೆವರಿ, ಆಫೀಸ್, ಸ್ಟಾಕ್, ಸೇರಿದಂತೆ ಹಲವು ವಿಭಾಗಗಳಿಗೆ ನೇಮಕ ನಡೆಯಲಿದೆ. 2025ರ ವೇಳೆಗೆ ಅಮೇಜಾನ್ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲಿದೆ. ಎಂದು ಅಖಿಲ್ ಸಕ್ಸೇನಾ ಹೇಳಿದ್ದಾರೆ.