ನವದೆಹಲಿ(ಜ.19): ಆನ್‌ಲೈನ್ ರಿಟೇಲ್ ದಿಗ್ಗಜ ಎಂದೇ ಗುರುತಿಸಿಕೊಂಡಿರುವ ಅಮೇಜಾನ್ ಭಾರತದಲ್ಲಿ ಹೆಚ್ಚು ಜನ್ರಪೀಯವಾಗಿದೆ. ಫ್ಲಿಪ್ ಕಾರ್ಟ್‌ಗೆ ಪ್ರತಿಸ್ಪರ್ಧಿಯಾಗಿರುವ ಅಮೇಜಾನ್ ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ಅಮೇಜಾನ್ ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಆನ್‌ಲನ್ ಶಾಪಿಂಗ್ ಯಶಸ್ಸಿನಿಂದ ನೇರವಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದೆ.

ಇದನ್ನೂ ಓದಿ: ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!

ಭಾರತದಲ್ಲಿ ಈಗಾಗಲೇ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಕೈನೆಟಿಕ್, ಹೀರೋ ಎಲೆಕ್ಟ್ರಿಕ್ ಕೂಡ ಆಟೋ ರಿಕ್ಷಾ ಬಿಡುಗಡೆ ಮಾಡಿದೆ.  ಬಜಾಜ್ ಕೂಡ ಶೀಘ್ರದಲ್ಲೇ ಎಲೆಕ್ಟ್ರಿಕ್ ಆಟೋ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದೀಗ ಅಮೇಜಾನ್ ಸಿಇಒ ಜೆಫ್ ಬೆಝೋಸ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ನಮ್ಮ ಮುಂದಿನ ಗುರಿ ಎಂದಿದ್ದಾರೆ.

ಇದನ್ನೂ ಓದಿ: ಪಿಯಾಜಿಯೊ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ!

ಭಾರತದಲ್ಲಿ ಆಟೋ ರಿಕ್ಷಾ ಕೂಡ ಪ್ರಮುಖ ಸಾರಿಗೆಯಾಗಿ ಗುರುತಿಸಿಕೊಂಡಿದೆ. ಆದರೆ ಎಲೆಕ್ಟ್ರಿಕ್ ಆಟೋ ರಿಕ್ಷಾ ಹೆಚ್ಚು ಬಳಕೆಯಾಗುತ್ತಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳಲ್ಲಿ ಆಯ್ಕೆಗಳಿಲ್ಲ. ಅಮೇಜಾನ್ ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದೆ. ಭಾರತದ ಬೇಡಿಕೆಗೆ ಅನುಗುಣವಾಗಿ ಎಲೆಕ್ಟ್ರಿಕ್ ಅಟೋ ರೀಕ್ಷಾ ಬಿಡುಗಡೆ ಮಾಡಲಿದೆ ಎಂದು ಜೆಫ್ ಹೇಳಿದ್ದಾರೆ.