ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ 2020ರ IPL ಫೈನಲ್ ಪಂದ್ಯ?
IPL ಟೂರ್ನಿಗೆ ತಯಾರಿಗಳು ನಡೆಯುತ್ತಿದೆ. ಈಗಾಗಲೇ ಹರಾಜು ಪ್ರಕ್ರಿಯೆ ಮುಗಿದಿದ್ದು, ತರಬೇತಿ ಆರಂಭವಾಗಲಿದೆ. ಅತ್ತ ಬಿಸಿಸಿಐ ಐಪಿಎಲ್ ಪಂದ್ಯ ಆಯೋಜನೆಗೆ ದಿನಾಂಕ ನಿಗದಿಪಡಿಸುತ್ತಿದೆ. ಇದೀಗ ಫೈನಲ್ ಪಂದ್ಯವನ್ನು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ಅಹಮ್ಮದಾಬಾದ್(ಡಿ.25): ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿರುವ ಮೊಟೆರಾ ಕ್ರೀಡಾಂಗಣ ನವೀಕರಣಗೊಂಡಿದ್ದು, ಉದ್ಘಾಟನೆ ಸಜ್ಜಾಗಿದೆ. ಈ ಕ್ರೀಡಾಂಗಣ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. 1.10 ಲಕ್ಷ ಅಭಿಮಾನಿಗಳು ಕುಳಿತು ಪಂದ್ಯ ವೀಕ್ಷಣೆ ಮಾಡುವ ಸಾಮರ್ಥ್ಯವಿದೆ. ಇದೀಗ ಇದೇ ಕ್ರೀಡಾಂಗಣದಲ್ಲಿ 2020ರ ಐಪಿಎಲ್ ಫೈನಲ್ ಪಂದ್ಯ ಆಯೋಜಿಸಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಓದಿ: IPL 2020: ಇಲ್ಲಿದೆ ಕೊಹ್ಲಿ ಸೇರಿದಂತೆ RCB ಕ್ರಿಕೆಟಿಗರ ಸ್ಯಾಲರಿ ಲಿಸ್ಟ್!
2020ರ ಮಾರ್ಚ್ ತಿಂಗಳಲ್ಲಿ ಮೊಟೆರಾ ಕ್ರೀಡಾಂಗಣ ಉದ್ಘಾಟನೆ ಮಾಡಲು ಬಿಸಿಸಿಐ ರೆಡಿಯಾಗಿದೆ. ಮಾರ್ಚ್ ತಿಂಗಳಲ್ಲಿ ಏಷ್ಯಾ ಇಲೆವೆನ್ ಪಂದ್ಯ ಆಡಿಸೋ ಮೂಲಕ ಕ್ರೀಡಾಂಗಣ ಉದ್ಘಾಟನೆ ಮಾಡಲು ಬಿಸಿಸಿಐ ಪ್ಲಾನ್ ಮಾಡಿತ್ತು. ಆದರೆ ಮಾರ್ಚ್ ತಿಂಗಳಲ್ಲಿ ಕ್ರಿಕೆಟಿಗರು ಸತತ ಕ್ರಿಕೆಟ್ ಆಡುವುದರಿಂದ ಹೆಚ್ಚಿನವರು ಲಭ್ಯವಿಲ್ಲ. ಹೀಗಾಗಿ ಐಪಿಎಎಲ್ ಟೂರ್ನಿ ಫೈನಲ್ ಆಯೋಜಿಸಲು ಬಿಸಿಸಿಐ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: IPL ಹರಾಜಿನ ಬೆನ್ನಲ್ಲೇ ಉಳಿದ ತಂಡಗಳಿಗೆ ಎಚ್ಚರಿಕೆ ಕೊಟ್ಟ ಕೊಹ್ಲಿ!
ಮೊಟೆರಾದಲ್ಲಿ ಐಪಿಎಲ್ ಫೈನಲ್ ಪಂದ್ಯ ಆಯೋಜನೆಗೊಂಡರೆ ಇದೇ ಮೊದಲ ಬಾರಿಗೆ ಗುಜರಾತ್ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾದ ಮೆಲ್ಬೊರ್ನ್ ಕ್ರೀಡಾಂಗಣ ಪಾತ್ರವಾಗಿದೆ. ಮೆಲ್ಬೋರ್ನ್ ಸರಿಸುಮಾರು 1 ಲಕ್ಷ ಆಸನ ವ್ಯವಸ್ಥೆ ಹೊಂದಿದೆ.
ಡಿಸೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ