ಐಪಿಎಲ್ ಹರಾಜಿನ ಬಳಿಕ ಇದೀಗ ಯಾವ ತಂಡ ಬಲಿಷ್ಠವಾಗಿದೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇದರ ಜೊತೆಗೆ ತಂಡದ ಆಟಗಾರರು ಪಡೆಯುವ ಸ್ಯಾಲರಿ ಕುರಿತು ಚರ್ಚೆಯಾಗುತ್ತಿದೆ. ಮೊದಲ ಆವೃತ್ತಿಯಿಂದಲೂ rcb ಪರ ಆಡುತ್ತಿರುವ ವಿರಾಟ್ ಕೊಹ್ಲಿ ಪಡೆಯುತ್ತಿರುವ ಸ್ಯಾಲರಿ ಎಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ವಿರಾಟ್ ಮಾತ್ರವಲ್ಲ ಸಂಪೂರ್ಣ ಬೆಂಗಳೂರು ತಂಡದ ಕ್ರಿಕೆಟಿಗರ ಸ್ಯಾಲರಿ ವಿವರ ಇಲ್ಲಿದೆ.

ಬೆಂಗಳೂರು(ಡಿ.22): ಐಪಿಎಲ್ ಹರಾಜಿನಲ್ಲಿ 8 ಫ್ರಾಂಚೈಸಿಗಳು ಉತ್ತಮ ಆಟಗಾರರನ್ನೇ ಖರೀದಿಸಿದೆ. ಈ ಮೂಲಕ 2020ರ ಐಪಿಎಲ್ ಟೂರ್ನಿಗೆ ಮೊದಲ ತಯಾರಿ ಮಾಡಿಕೊಂಡಿದೆ. ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ಕ್ರಿಕೆಟಿಗರನ್ನು ಖರೀದಿಸಿದೆ. ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್‌ಗೆ 10 ಕೋಟಿ ರೂಪಾಯಿ ಗರಿಷ್ಠ ಮೊತ್ತ ನೀಡಿ ಖರೀದಿಸಿದೆ. 

Add Asianetnews Kannada as a Preferred SourcegooglePreferred

ಇದನ್ನೂ ಓದಿ: IPL ಹರಾಜು: ಕೊನೆಗೂ ಕನ್ನಡಿಗನ ಖರೀದಿಸಿದ RCB

ಈ ಬಾರಿಯ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಂಡ 8 ಕ್ರಿಕೆಟಿಗರು ಹಾಗೂ ತಂಡ ಉಳಿಸಿಕೊಂಡ ಆಟಗಾರರು ಪಡೆಯುವ ಸಂಭಾವನೆ ಎಷ್ಟು ಅನ್ನೋ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದೆ. 2020ರ ಐಪಿಎಲ್ ಟೂರ್ನಿಗೆ ವಿರಾಟ್ ಕೊಹ್ಲಿ , ಎಬಿಡಿವಿಲಿಯರ್ಸ್ ಸೇರಿದಂತೆ ತಂಡದಲ್ಲಿರುವ 21 ಕ್ರಿಕೆಟಿಗರು ಪಡೆಯುವ ಸ್ಯಾಲರಿ ವಿವರ ಇಲ್ಲಿದೆ.

2020ರ ಐಪಿಎಲ್ ಟೂರ್ನಿಗೆ RCB ಕ್ರಿಕೆಟಿಗರು ಪಡೆಯುವ ಸಂಭಾವನೆ!
1. ವಿರಾಟ್ ಕೊಹ್ಲಿ = 17 ಕೋಟಿ ರೂ
2 ಎಬಿ ಡಿವಿಲಿಯರ್ಸ್ 11 ಕೋಟಿ ರೂ
3. ಮೊಯಿನ್ ಅಲಿ = 1.7 ಕೋಟಿ ರೂ
4. ಯುಜುವೇಂದ್ರ ಚಹಲ್ = 6 ಕೋಟಿ ರೂ
5. ಪಾರ್ಥಿವ್ ಪಟೇಲ್ = 1.7 ಕೋಟಿ ರೂ
6. ಮೊಹಮ್ಮದ್ ಸಿರಾಜ್ = 2.60 ಕೋಟಿ ರೂ
7. ಉಮೇಶ್ ಯಾದವ್ = 4.2 ಕೋಟಿ ರೂ
8. ಪವನ್ ನೇಗಿ = 1 ಕೋಟಿ ರೂ
9. ದೇವದತ್ ಪಡಿಕ್ಕಲ್ =
10. ಗುರುಕೀರತ್ ಸಿಂಗ್ ಮನ್ = 50 ಲಕ್ಷ ರೂ 
11. ವಾಷಿಂಗ್ಟನ್ ಸುಂದರ್ = 3.2 ಕೋಟಿ ರೂ 
12. ಶಿವಂ ದುಬೆ = 5 ಕೋಟಿ ರೂ
13. ನವದೀಪ್ ಸೈನಿ = 3 ಕೋಟಿ ರೂ
14 ಕ್ರಿಸ್ ಮೊರಿಸ್ = 10 ಕೋಟಿ ರೂ
15 ಆರೋನ್ ಫಿಂಚ್ = 4.4 ಕೋಟಿ ರೂ 
16 ಕೇನ್ ರಿಚರ್ಡ್ಸನ್ = 4 ಕೋಟಿ ರೂ
17ಡೇಲ್ ಸ್ಟೇನ್ = 2 ಕೋಟಿ ರೂ
18ಇಸ್ರು ಉದಾನ = 50 ಲಕ್ಷ ರೂ
19 ಶಹಬಾಝ್ ಅಹಮ್ಮದ್ = 20 ಲಕ್ಷ ರೂ
20 ಜೋಶುವಾ ಫಿಲಿಪ್ = 20 ಲಕ್ಷ ರೂ
21 ಪವನ್ ದೇಶಪಾಂಡೆ = 20 ಲಕ್ಷ ರೂ