ಖಾಲಿ ಸ್ಟೇಡಿಯಂನಲ್ಲಿ IPL ನಡೆಯುತ್ತಾ..? UAE ನಿಂದ ಮಹತ್ವದ ತೀರ್ಮಾನ

ಈ ಬಾರಿಯ ಐಪಿಎಲ್ ಟೂರ್ನಿಗೆ ಆತಿಥ್ಯ ವಹಿಸಲು ಯುಎಇ ಸಜ್ಜಾಗಿದೆ. ಇದರ ಬೆನ್ನಲ್ಲೇ ಮೈದಾನದೊಳಗೆ ಪ್ರೇಕ್ಷಕರನ್ನು ಬಿಡಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

UAE Cricket board looking to fill 30 percent of the stadiums with spectators

ನವ​ದೆ​ಹ​ಲಿ(ಆ.01): ಸಾಕಷ್ಟು ಹಂಗಾಮಗಳ ಬಳಿಕ ಕೊನೆಗೂ ಐಪಿಎಲ್ ಆಯೋಜನೆ ಪಕ್ಕಾ ಆಗಿದೆ. ಆದರೆ ಕೊರೋನಾ ಆತಂಕದಿಂದ ಐಪಿಎಲ್‌ ಖಾಲಿ ಮೈದಾನದಲ್ಲಿ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವುದು ಅಷ್ಟೊಂದು ಜೋಶ್ ಇರುವುದಿಲ್ಲ ಎಂದು ಈ ಹಿಂದೆಯೇ ಕೆಲ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಶೇ.30ರಿಂದ 50ರಷ್ಟು ಪ್ರೇಕ್ಷ​ಕ​ರಿಗೆ ಕ್ರೀಡಾಂಗಣಗಳಿಗೆ ಪ್ರವೇಶ ನೀಡಲು ಚಿಂತನೆ ನಡೆ​ಸು​ತ್ತಿ​ರು​ವು​ದಾಗಿ ಯುಎಇ ಕ್ರಿಕೆಟ್‌ ಮಂಡಳಿ ತಿಳಿ​ಸಿದೆ. ಎಮಿರಾಟ್ಸ್ ಕ್ರಿಕೆಟ್ ಬೋರ್ಡ್ ಜನರಲ್ ಸೆಕ್ರೇಟರಿ ಮುಬಶೀರ್ ಉಸ್ಮಾನಿ, ಯುಎಇ ಸರ್ಕಾರ ಅನುಮತಿ ನೀಡಿದರೆ ಪ್ರೇಕ್ಷಕರು ಮೈದಾನ ಪ್ರವೇಶಿಸಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.

ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!

ಸದ್ಯ ಯುಎಇನಲ್ಲಿ ಕೇವಲ 6200 ಕೊರೋನಾ ಪ್ರಕರಣಗಳು ಇದ್ದು, ಐಪಿಎಲ್ ಆರಂಭದ ವೇಳೆಗೆ ಮತ್ತಷ್ಟು ಕಡಿಮೆಯಾಗುವ ವಿಶ್ವಾಸವನ್ನು ಉಸ್ಮಾನಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ 2014ರಲ್ಲಿ ಲೋಕಸಭಾ ಚುನಾವಣೆ ಇದ್ದಿದ್ದರಿಂದ ಐಪಿಎಲ್ ಟೂರ್ನಿಯ ಮೊದಲ 20 ಪಂದ್ಯಗಳಿಗೆ ಯುಎಇ ಆತಿಥ್ಯವನ್ನು ವಹಿಸಿತ್ತು. 

ಐಪಿಎಲ್‌ಗೂ ಮುನ್ನ ಆಟಗಾರರಿಗೆ 4 ಬಾರಿ ಕೋವಿಡ್ ಟೆಸ್ಟ್:

ಯುಎಇ​ನಲ್ಲಿ ಈ ವರ್ಷದ ಐಪಿ​ಎಲ್‌ ಟೂರ್ನಿ ನಡೆ​ಸಲು ಸಿದ್ಧತೆ ಆರಂಭಿ​ಸಿ​ರುವ ಬಿಸಿ​ಸಿಐ, ಭಾನು​ವಾರ ಸಭೆ ನಡೆ​ಸ​ಲಿದ್ದು ಫ್ರಾಂಚೈಸಿಗ​ಳಿಗೆ ಮಾರ್ಗ​ಸೂಚಿಯನ್ನು ನೀಡ​ಲಿದೆ. ಮಾರ್ಗ​ಸೂ​ಚಿ​ಯ​ಲ್ಲಿ​ರುವ ಕೆಲ ಪ್ರಮುಖ ಅಂಶಗಳ ಬಗ್ಗೆ ಬಿಸಿ​ಸಿಐ ಮೂಲ​ಗಳು, ಮಾಧ್ಯ​ಮ​ಗ​ಳಿ​ಗೆ ತಿಳಿ​ಸಿವೆ. 

ಆ ಪೈಕಿ, ಪ್ರತಿ ಆಟ​ಗಾ​ರ​ರಿಗೆ ಟೂರ್ನಿ ಆರಂಭಕ್ಕೂ ಮುನ್ನ 4 ಬಾರಿ ಕೋವಿಡ್‌ ಪರೀಕ್ಷೆ ನಡೆ​ಸು​ವುದು ಪ್ರಮುಖ ಅಂಶವಾಗಿದೆ. ಭಾರ​ತ​ದಿಂದ ಹೊರ​ಡುವ ಮುನ್ನ 2 ಬಾರಿ, ಯುಎ​ಇ​ನಲ್ಲಿ ಕ್ವಾರಂಟೈನ್‌ ಮುಕ್ತಾ​ಯ​ಗೊಂಡ ಬಳಿಕ 2 ಬಾರಿ ಪರೀಕ್ಷೆ ನಡೆ​ಸಲು ನಿರ್ಧ​ರಿ​ಸ​ಲಾ​ಗಿದೆ. ಇದೇ ವೇಳೆ ಆಟ​ಗಾ​ರರ ಪತ್ನಿ, ಪ್ರೇಯಸಿಯರನ್ನು ಯುಎ​ಇಗೆ ಕರೆ​ದೊ​ಯ್ಯುವ ನಿರ್ಧಾರವನ್ನು ಫ್ರಾಂಚೈ​ಸಿ​ಗ​ಳಿಗೆ ಬಿಡಲು ಬಿಸಿ​ಸಿಐ ತೀರ್ಮಾ​ನಿ​ಸಿದೆ. 

Latest Videos
Follow Us:
Download App:
  • android
  • ios