Asianet Suvarna News Asianet Suvarna News

ಕೊಹ್ಲಿಯನ್ನು ಅರೆಸ್ಟ್ ಮಾಡಿ ಎಂದು ಕೋರ್ಟಲ್ಲಿ ಅರ್ಜಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಭಾಟಿಯಾ ಅವರನ್ನು ಬಂಧಿಸಿ ಎಂದು ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಕೊಹ್ಲಿ-ತಮನ್ನಾ ಮಾಡಿದ ತಪ್ಪಾದರೂ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Petition filed in the Madras High Court seeking Team India Captain Virat Kohli arrest for promoting online gambling
Author
Chennai, First Published Aug 1, 2020, 11:39 AM IST
  • Facebook
  • Twitter
  • Whatsapp

ಚೆನ್ನೈ(ಆ.01): ಆನ್‌ಲೈನ್‌ ಗೇಮ್‌ಗಳ ಮೂಲಕ ಯುವ​ಕರು ಜೂಜಿನತ್ತ ಆಕರ್ಷಿತಗೊಳ್ಳಲು ಕಾರಣರಾಗಿ​ದ್ದಾರೆ ಎಂದು ಆರೋ​ಪಿಸಿ, ಇಲ್ಲಿನ ವಕೀ​ಲ​ರೊ​ಬ್ಬರು ಮದ್ರಾಸ್‌ ಹೈಕೋರ್ಟ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ​ಯನ್ನು ಬಂಧಿ​ಸ​ಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. 

ಆನ್‌ಲೈನ್‌ನಲ್ಲಿ ಜೂಜಾ​ಡಲು ಹಣ ಪಡೆದು, ಬಾಕಿ ನೀಡಲು ಸಾಧ್ಯ​ವಾ​ಗದ್ದಕ್ಕೆ ಯುವ​ಕ​ನೊಬ್ಬ ಆತ್ಮ​ಹತ್ಯೆ ಮಾಡಿ​ಕೊಂಡ ಪ್ರಸಂಗವನ್ನು ವಕೀ​ಲ​ರು ದೂರಿನಲ್ಲಿ ಉಲ್ಲೇಖಿ​ಸಿ​ದ್ದಾರೆ. ಈ ಪ್ರಕ​ರಣದ ವಿಚಾರಣೆ ಮಂಗ​ಳ​ವಾರಕ್ಕೆ ನಿಗ​ದಿ​ಯಾ​ಗಿದೆ.

ಆನ್‌ಲೈನ್ ಜೂಜಾಟ ಕಂಪನಿಗಳು ಸ್ಟಾರ್ ಐಕಾನ್‌ಗಳಾದ ವಿರಾಟ್ ಕೊಹ್ಲಿ, ತಮನ್ನಾ ಅಂತವರನ್ನು ಬಳಸಿಕೊಂಡು ಯುವಕರ ಬ್ರೈನ್‌ವಾಷ್ ಮಾಡಲಾಗುತ್ತಿದೆ. ಹೀಗಾಗಿ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಅವರನ್ನು ಬಂಧಿಸಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸಂಪೂರ್ಣ ಬಜೆಟ್ ಖಾಲಿ ಆದ್ರೂ ಪರ್ವಾಗಿಲ್ಲ, ಈ ಆಟಗಾರನನ್ನು ಖರೀದಿಸೋಣ ಎಂದಿದ್ದರಂತೆ ಗಂಭೀರ್..!

ಅರ್ಜಿದಾರ ವಕೀಲರು ಆನ್‌ಲೈನ್ ಜೂಜಾಟಕ್ಕೆ ಯುವಕರು ಹೇಗೆಲ್ಲಾ ಬಲಿಯಾಗುತ್ತಿದ್ದಾರೆ ಎನ್ನುವುದನ್ನು ಎಳೆ ಎಳೆಯಾಗಿ ಕೋರ್ಟ್‌ ಮುಂದೆ ಬಿಚ್ಚಿಟ್ಟಿದ್ದಾರೆ. ಆನ್‌ಲೈನ್ ಜೂಜಾಟವಾಡಲು ಯುವಕರು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳುತ್ತಾರೆ. ಅದರಿಂದ ನಷ್ಟ ಅನುಭವಿಸಿದಾಗ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಇದೊಂದು ರೀತಿಯಲ್ಲಿ ಬ್ಲೂ ವೇಲ್ ಗೇಮ್ ಇದ್ದಂತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಯುವಕರು ಬ್ಲೂ ವೇಲ್ ಗೇಮ್‌ಗೆ ದಾಸರಾಗಿ ಪ್ರಾಣ ಕಳೆದುಕೊಂಡ ಸಾಕಷ್ಟು ಉದಾಹರಣೆಯನ್ನು ಕೇಳಿದ್ದೇವೆ. 
 
 

Follow Us:
Download App:
  • android
  • ios