ಅಬು ಧಾಬಿ(ಸೆ.30): ಸತತ 2 ಸೋಲಿನಿಂದ ಕಂಗೆಟ್ಟಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಹೈದರಾಬಾದ್ ತಂಡದ ಗೆಲುವಿನಲ್ಲಿ ಸ್ಪಿನ್ನರ್ ರಶೀದ್ ಖಾನ್ ಪ್ರಮುಖ ಪಮುಖ ಪಾತ್ರ ನಿರ್ವಹಿಸಿದ್ದರು. 3 ವಿಕೆಟ್ ಕಬಳಿಸಿದ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.  ಪ್ರಶಸ್ತಿ ಸ್ವೀಕರಿಸುವಾಗ ರಶೀದ್ ಖಾನ್ ಇತ್ತೀಚೆಗೆ ನಿಧನರಾದ ತಮ್ಮ ತಾಯಿಯ ನೆನದು ಭಾವುಕರಾಗಿದ್ದಾರೆ.

IPL 2020: ಸೋಲಿಲ್ಲದ ಸರದಾರ ಡೆಲ್ಲಿಗೆ ಸೋಲುಣಿಸಿದ SRH!

4 ತಿಂಗಳ ಹಿಂದೆ ತಾಯಿ ನಿಧನರಾದರು. ನನ್ನ ತಾಯಿ ಐಪಿಎಲ್ ಟೂರ್ನಿಯ ಅಭಿಮಾನಿಯಾಗಿದ್ದರು. ನನ್ನ ಯಶಸ್ಸಿನ ಶಕ್ತಿಯಾಗಿದ್ದರು. ಪ್ರತಿ ಬಾರಿ ಐಪಿಎಲ್ ಟೂರ್ನಿಗೆ ತೆರಳುವಾಗಿ ತಾಯಿ ಆಶಿರ್ವಾದ ಪಡೆಯುತ್ತಿದ್ದೆ. ಆದರೆ ಈ ಬಾರಿ ತಾಯಿ ಇಲ್ಲ ಅನ್ನೋದು ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದಿದ್ದಾರೆ.

ಕಳೆದ ಒಂದೂವರೆ ವರ್ಷ ನನ್ನ ಪಾಲಿಗೆ ಅತ್ಯಂತ ಕಠಿಣವಾಗಿತ್ತು. ಮೊದಲು ತಂದೆ ನಿಧನರಾದರು. ತಂದೆಯ ಅಗಲಿಯಲ್ಲಿರುವಾಗಲೇ ತಾಯಿ ಕೂಡ ನಿಧನರಾದರು. ಈ ನೋವಿನಿಂದ ಕಮ್‌ಬ್ಯಾಕ್ ಮಾಡಲು ಹಲವು ದಿನಗಳೇ ಬೇಕು ಎಂದು ರಶೀದ್ ಖಾನ್ ಹೇಳಿದ್ದಾರೆ.

ಪ್ರತಿ ಪಂದ್ಯ ಕೂಡ ನಮಗೆ ಮುಖ್ಯವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರುವುದು ಸಂತಸ ತಂದಿದೆ. ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ರಶೀದ್ ಖಾನ್ ಹೇಳಿದ್ದಾರೆ.