Asianet Suvarna News Asianet Suvarna News

IPL ಹಲವರ ಜೀವನದ ದಾರಿ; ಟೀಕೆಗೆ ತಿರುಗೇಟು ನೀಡಿದ ಗವಾಸ್ಕರ್!

IPL ಟೂರ್ನಿ ಆರಂಭಕ್ಕೆ ಸರಿಸುಮಾರು ಇನ್ನೊಂದು ತಿಂಗಳು ಮಾತ್ರ ಬಾಕಿ ಇದೆ. ಇದರ ನಡುವೆ ಕೆಲವು ಟೀಕೆಗಳು ವ್ಯಕ್ತವಾಗುತ್ತಿದೆ. ಕೊರೋನಾ ನಡುವೆ ಐಪಿಲ್ ಅವಶ್ಯಕತೆ ಇತ್ತಾ ಅನ್ನೋ ಮಾತುಗಳು ಕೇಳಿಂಬಿದೆ. ಇದಕ್ಕೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸರಿಯಾಗಿ ತಿರುಗೇಟು ನೀಡಿದ್ದಾರೆ.

Team India legend Sunil gavaskar slams Those who critics IPL tourney
Author
Bengaluru, First Published Aug 23, 2020, 8:59 PM IST

ಮುಂಬೈ(ಆ.23):  ಐಪಿಎಲ್ ಟೂರ್ನಿ ತಯಾರಿ ಭರದಿಂದ ಸಾಗಿದೆ. ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದೆ. ಕೊರೋನಾ ವೈರಸ್ ಕಾರಣ ಭಾರತದಿಂದ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಲಾಗಿದ್ದು, ಹೊಸ ಮಾರ್ಗಸೂಚಿಗಳಂತೆ ಟೂರ್ನಿ ನಡೆಯಲಿದೆ. ಇದೀಗ ಕೆಲವರು ಐಪಿಎಲ್ ಟೂರ್ನಿ ಹಣಕ್ಕಾಗಿ ಬಿಸಿಸಿಐ ಆಯೋಜಿಸುತ್ತಿದೆ. ಕೊರೋನಾ ನಡುವೆ ಈ ಟೂರ್ನಿ ಅವಶ್ಯಕತೆ ಇತ್ತಾ ಅನ್ನೋ ಟೀಕೆ ಮಾಡಿದ್ದಾರೆ. ಈ ಟೀಕೆಗಳಿಗೆ ಸುನಿಲ್ ಗವಾಸ್ಕರ್ ತಕ್ಕ ಉತ್ತರ ನೀಡಿದ್ದಾರೆ.

ಧೋನಿ-ರೋಹಿತ್ ಅಭಿಮಾನಿಗಳ ನಡುವೆ ಹೊಡೆದಾಟ; ಓರ್ವನ ಸ್ಥಿತಿ ಗಂಭೀರ!

ಐಪಿಎಲ್ ಟೂರ್ನಿಯಲ್ಲಿ ಕೆಲವರು ಹಣ ಹೊಳೆ ಹರಿಯುತ್ತೆ. ಕ್ರಿಕಟಿಗರಿಗೆ ಕೋಟಿ ಕೋಟಿ ರೂಪಾಯಿ ಸಿಗುತ್ತೆ, ಬಿಸಿಸಿಐಗೆ ಸಾವಿರಾರು ಕೋಟಿ ರೂಪಾಯಿ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ. ಐಪಿಎಲ್ ಟೂರ್ನಿ ಹಲವರ ಜೀವನದ ದಾರಿಯಾಗಿದೆ. ಕೇವಲ 2 ತಿಂಗಳ ಆದಾಯದಿಂದ ಇಡೀ ವರ್ಷ ಕಳೆಯುವ ಹಲವು ಕುಟುಂಬಗಳಿವೆ ಎಂದು ಗವಾಸ್ಕರ್ ಹೇಳಿದ್ದಾರೆ.

IPL 2020; ಕ್ರೀಡಾಂಗಣ ಪ್ರವೇಶಿಸಲು ಫ್ಯಾನ್ಸ್‌ಗೆ ಇದೆಯಾ ಅವಕಾಶ? ECB ಪ್ರತಿಕ್ರಿಯೆ !.

ಟಿ ಶರ್ಟ್ ಮಾರಾಟ ಮಾಡುವವರು, ಅಭಿಮಾನಿಗಳ ಮುಖಕ್ಕೆ ಬಣ್ಣ ಬಳಿಯುವವರು, ಟೀ ಸ್ಟಾಲ್, ಹೊಟೆಲ್, ಗ್ರೌಂಡ್ಸ್ ಮನ್, ಕಾರ್ಪೆಂಟರ್, ಕೂಲಿ ಕಾರ್ಮಿಕರು ಸೇರಿದಂತೆ ಸಾವಿ ರ ಸಾವಿರ ಕುಟುಂಬಗಳ ಜೀವನ ಈ ಐಪಿಎಲ್ ಟೂರ್ನಿಯಿಂದ ನಡೆಯುತ್ತಿದೆ. ಇನ್ನು ಕ್ರಿಕೆಟ್ ವಿಚಾರದಲ್ಲೂ ಐಪಿಎಲ್ ಟೂರ್ನಿ ಪ್ರಮುಖವಾಗಿದೆ. ಐಪಿಎಲ್ ಟೂರ್ನಿಯಿಂದ ಭಾರತದ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಅನುಭವ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಮಟ್ಟದ ಕ್ರಿಕೆಟ್‌ ಹಳ್ಳಿ ಪ್ರತಿಭೆಗೂ ಸಿಗುವಂತಾಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

ಐಪಿಎಲ್ ಟೂರ್ನಿ ಯಶಸ್ಸು ಸಹಿಸಿದ ಕೆಲವರು ಟೀಕೆ ಮಾಡುತ್ತಿದ್ದಾರೆ. ಹೊರಗಡೆ ಕುಳಿತ ಭಾರತೀಯ ಕ್ರಿಕೆಟ್‌ನ ಒಳಿತು ಕೆಡುಕುಗಳ ತೀರ್ಪು ನೀಡುವವರು ಈ ರೀತಿ ಟೀಕೆ ಮಾಡಬಲ್ಲರು ಎಂದು ಗವಾಸ್ಕರ್ ಹೇಳಿದ್ದಾರೆ.

Follow Us:
Download App:
  • android
  • ios