ಧೋನಿ-ರೋಹಿತ್ ಅಭಿಮಾನಿಗಳ ನಡುವೆ ಹೊಡೆದಾಟ; ಓರ್ವನ ಸ್ಥಿತಿ ಗಂಭೀರ!

First Published 23, Aug 2020, 6:00 PM

ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೋನಾ ಕಾರಣ ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಗೆ ಆಟಗಾರರು ಇದೀಗ ದುಬೈಗೆ ತೆರಳಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಕ್ರಿಕೆಟಿಗರ ಸ್ಲೆಡ್ಜಿಂಗ್, ಮಾತಿನ ಚಕಮಕಿಗಳು ನಡೆಯುತ್ತದೆ. ಇದೀಗ ಐಪಿಎಲ್ ಆರಂಭಕ್ಕೂ ಮೊದಲೇ ಅಭಿಮಾನಿಗಳು ಕಿತ್ತಾಡಿಕೊಂಡ ಘಟನೆ ನಡೆದಿದೆ. ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳ ನಡುವಿನ ಮಾರಾಮಾರಿಗೆ ಓರ್ವ ಆಸ್ಪತ್ರೆ ದಾಖಲಾಗಿದ್ದಾನೆ. ಈ ಕುರಿತು ಅಭಿಮಾನಿಗಳಿಗೆ ವಿರೇಂದ್ರ ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ

13ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ ಕ್ರಿಕೆಟಿಗರು ದುಬೈನಲ್ಲಿ ಬೀಡು ಬಿಟ್ಟಿದ್ದಾರೆ. ಇತ್ತ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳ ನಡುವೆ ಮರಾಮಾರಿ ನಡೆದಿದೆ.

ಎರಡು ತಂಡಗಳ ಅಭಿಮಾನಿಗಳ ನಡುವೆ ಕಿತ್ತಾಟವಾಗುವುದು ಸಾಮಾನ್ಯವಾಗಿದೆ. ಆದರೆ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಎಂ.ಎಸ್.ಧೋನಿ ಹಾಗೂ   ರೋಹಿತ್ ಶರ್ಮಾ ಅಭಿಮಾನಿಗಳ ನಡುವೆ ಕಿತ್ತಾಟ ನಡೆದಿದೆ.

ಎಂ.ಎಸ್.ಧೋನಿ ವಿದಾಯ ಹಾಗೂ ರೋಹಿತ್ ಶರ್ಮಾಗೆ ಖೇಲ್ ರತ್ನ ಪ್ರಶಸ್ತಿ ಅಭಿಮಾನಿಗಳ ಜಗಳಕ್ಕೆ ಕಾರಣವಾಗಿದೆ. ಇದು ವಿಚಿತ್ರವಾದರೂ ಸತ್ಯವಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ನಡೆದಿದೆ.

ಧೋನಿ ವಿದಾಯದ ಕಾರಣ ಅಭಿಮಾನಿಗಳು ಧೋನಿ ಬ್ಯಾನರ್ ಹಾಕಿದ್ದಾರೆ. ಇನ್ನು ರೋಹಿತ್ ಶರ್ಮಾ ಅಭಿಮಾನಿಗಳು ಖೇಲ್ ರತ್ನ ಪ್ರಶಸ್ತಿ ಬಂದ ಕಾರಣ ರೋಹಿತ್‌ಗೆ ಬ್ಯಾನರ್ ಹಾಕಿದ್ದಾರೆ.

ಧೋನಿ ಬ್ಯಾನರ್ ಹಾಕಿದ ಸ್ಥಳದಲ್ಲೇ ರೋಹಿತ್ ಬ್ಯಾನರ್ ಹಾಕಲಾಗಿದೆ. ಇಷ್ಟೇ ಅಲ್ಲ ಧೋನಿ ಬ್ಯಾನರ್ ಕಿತ್ತು ಹಾಕಲಾಗಿದೆ. ಇದರಿಂದ ರೊಚ್ಚಿಗೆದ್ದ ಧೋನಿ ಅಭಿಮಾನಿಗಳು ರೋಹಿತ್ ಶರ್ಮಾ ಅಭಿಮಾನಿಗಳ ಜೊತೆ ಜಗಳ ಆರಂಭಿಸಿದ್ದಾರೆ.

ಕೈ ಕೈಮಿಲಾಯಿಸಿದ ಅಭಿಮಾನಿಗಳ ತಮ್ಮ ಆಕ್ರೋಶವನ್ನು ತಣ್ಣಗಾಗಿಸುವ ಯತ್ನ ಮಾಡಿಲ್ಲ. ಓರ್ವ ಧೋನಿ ಅಭಿಮಾನಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಸರಿಯಾಗಿ ಭಾರಿಸಿದ್ದಾರೆ.

ಕಬ್ಬಿನಿಂದಲೂ ಹಲ್ಲೆ ಮಾಡಿದ ಕಾರಣ ರೋಹಿತ್ ಶರ್ಮಾ ಅಭಿಮಾನಿಯೋರ್ವ ಆಸ್ಪತ್ರೆ ದಾಖಲಾಗಿದ್ದಾನೆ. ಅಭಿಮಾನಿಗಳ ಜಗಳ ತಿಳಿದ ಕೊಲ್ಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಎರಡು ಬದಿಯ ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಅಭಿಮಾನಿಗಳ ಮಾರಾಮಾರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕಿವಿ ಮಾತು ಹೇಳಿದ್ದಾರೆ. ಕ್ರಿಕೆಟಿಗರು ಜೊತೆಯಾಗಿ ಇರುತ್ತಾರೆ. ಪ್ರದರ್ಶನದ ಮೂಲಕ ಮಾತನಾಡುತ್ತಾರೆ. ಪರಸ್ವರ ಮಾತನಾಡುವುದು ಕಡಿಮೆ. ಆದರೆ ಹುಚ್ಚು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಾರೆ. ಟೀಂ ಇಂಡಿಯಾ ಒಂದಾಗಿದೆ. ನೀವು ಸುಖಾಸುಮ್ಮನೆ ಜಗಳವಾಡಿ ಇಬ್ಬಾಗವಾಗಬೇಡಿ ಎಂದು ಸಲಹೆ ನೀಡಿದ್ದಾರೆ.

loader