ದುಬೈ(ಸೆ.13): ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಶೇನ್ ವಾರ್ನ್ ಬಳಿಕ ತಂಡದ  ಹಲವು ಜವಾಬ್ದಾರಿಗಳನ್ನು ಕಾರ್ಯನಿರ್ವಹಿಸಿದ್ದಾರೆ. ಇದೀಗ ದುಬೈನಲ್ಲಿ ನಡೆಯುತ್ತಿರುವ 2020ರ ಐಪಿಎಲ್ ಟೂರ್ನಿಗೆ ಮತ್ತೆ ಶೇನ್ ವಾರ್ನ್ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡಿದ್ದಾರೆ. ಈ ಬಾರಿ ಶೇನ್ ವಾರ್ನ್‌ಗೆ ಮೆಂಟರ್ ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಜವಾಬ್ದಾರಿ ನೀಡಲಾಗಿದೆ.

IPL 2020: ಕೊರೋನಾದಿಂದ ಮುಕ್ತವಾಗಿರಿಸಲು ವಿಶೇಷ ಪ್ಲಾನ್ ಮಾಡಿದ ಬಿಸಿಸಿಐ!.

ಬ್ಯಾಂಡ್ ಅಂಬಾಸಿಡರ್ ಆಗಿದ್ದ ಶೇನ್ ವಾರ್ನ್‌ಗೆ ಇದೀಗ ಮೆಂಟರ್ ಜವಾಬ್ದಾರಿ ನೀಡಲಾಗಿದೆ. ವಾರ್ನ್ ರಾಜಸ್ಥಾನ ರಾಯಲ್ಸ್ ಕೋಚ್ ಆಂಡ್ರ್ಯೂ ಮಕ್‌ಡೋನಾಲ್ಡ್ ಜೊತೆ ಕಾರ್ಯನಿರ್ವಹಸಲಿದ್ದಾರೆ. ಮೆಕ್‌ಡೋನಾಲ್ಡ್ ಹಾಗೂ ಶೇನ್ ವಾರ್ನ್ 2003-07ರ ವರೆಗಿ ಟೀಂ ಮೇಟ್ಸ್ ಆಗಿದ್ದರು.

IPL 2020: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!

ಮೆಂಟರ್ ಜವಾಬ್ದಾರಿ ನೀಡಿದ ಬಳಿಕ ಮಾತನಾಡಿದ ಶೇನ್ ವಾರ್ನ್, ರಾಜಸ್ಥಾನ ರಾಯಲ್ಸ್ ಜೊತೆ ನನ್ನ ಸಂಬಂಧ ಫ್ರಾಂಚೈಸಿ ಆರಂಭದಿಂದಲೂ ಇದೆ. ಎರಡು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದಿದ್ದೇನೆ. ನಾಯಕನಾಗಿ ಹಾಗೂ ಮೆಂಟರ್ ಆಗಿ ಎರಡೆರಡು ಜವಾಬ್ದಾರಿ ನಿರ್ವಹಿಸಿದ್ದೇನೆ. ಇದೀಗ ಮೆಂಟರ್ ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿ ಎರಡು ಜವಾಬ್ದಾರಿ ನಿರ್ವಹಿಸಲಿದ್ದೇನೆ ಎಂದು ವಾರ್ನ್ ಹೇಳಿದ್ದಾರೆ.