ದುಬೈ(ಸೆ.10):  ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಿಯನ್ನು ದುಬೈಗೆ ಸ್ಳಳಾಂತರ ಮಾಡಲಾಗಿದೆ. ಈಗಾಗಲೇ 8 ತಂಡಗಳು ದುಬೈನಲ್ಲಿ ಅಭ್ಯಾಸ ಮಾಡುತ್ತಿದೆ. ಕೊರೋನಾ ಕಾರಣ ಆರಂಭಿಕ 1 ವಾರ ಕ್ವಾರಂಟೈನ್‌ನಲ್ಲಿದ್ದ ಆಟಗಾರರು, ಬಳಿಕ ಅಭ್ಯಾಸಕ್ಕೆ ಮರಳಿದ್ದಾರೆ. ಆದರೆ ಅದೆಷ್ಟೆ ಮುಂಜಾಗ್ರತೆ ವಹಿಸಿದರೂ, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ 3 ತಂಡದ ಕ್ರಿಕೆಟಿಗರು, ಸಹಾಯಕ ಸಿಬ್ಬಂಧಿಗೆ ಕೊರೋನಾ ವಕ್ಕರಿಸಿ ಆತಂಕ ಸೃಷ್ಟಿಸಿತ್ತು.

IPL 2020: ಈ ಸಲ ಈ ತಂಡ ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಬ್ರೆಟ್ ಲೀ..!

ಆಟಗಾರರು ಹೊಟೆಲ್ ಹಾಗೂ ಕ್ರೀಡಾಂಗಣ ಬಿಟ್ಟು ಬೇರೆಡೆ ತೆರಳುವಂತಿಲ್ಲ. ಪ್ರತಿ ತಂಡದಲ್ಲಿ ವೈದ್ಯರ ತಂಡವಿದೆ. ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಇದರ ನಡುವೆ ಟೂರ್ನಿ ಆರಂಭಗೊಂಡ ಬಳಿಕ ಬಿಸಿಸಿಐ ಮತ್ತಷ್ಟು ಸವಾಲು ಎದುರಾಗಲಿದೆ. ಕೊರೋನಾದಿಂದ ಟೂರ್ನಿಯನ್ನು ಮುಕ್ತವಾಗಿಡಲು ಬಿಸಿಸಿಐ ವಿಶೇಷ ಪ್ಲಾನ್ ಮಾಡಿದೆ. ಟೂರ್ನಿ ನಡುವೆ 20,000 ಕೊರೋನಾ ಟೆಸ್ಟ್ ಮಾಡಲು ನಿರ್ಧರಿಸಿದೆ.

RCB ತಂಡದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಾಯಕ ವಿರಾಟ್ ಕೊಹ್ಲಿ..!.

ಐಪಿಎಲ್ ಟೂರ್ನಿಯಿಂದ ಕೊರೋನಾ ಮಕ್ತವಾಗಿಸಲು ಟೂರ್ನಿಯ ಮೆಡಿಕಲ್ ಪಾರ್ಟ್ನರ್‌ಗೆ ಸೂಚಿಸಲಾಗಿದೆ. ಇದಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕಟ್ಟು ನಿಟ್ಟಾಗಿ ತೆಗೆದುಕೊಳ್ಳಲು ಬಿಸಿಸಿಐ ಸೂಚಿಸಿದೆ. ಹೀಗಾಗಿ ಟೂರ್ನಿ ನಡುವೆ 20,000 ಕೊರೋನಾ ಟೆಸ್ಟ್ ಮಾಡಲು ಟೂರ್ನಿ ಮೆಡಿಕಲ್ ಪಾರ್ಟ್ನರ್ ನಿರ್ಧರಿಸಿದೆ. ಇಷ್ಟೇ ಅಲ್ಲ ಆಟಗಾರರಿಗೆ ವಿಶೇಷ ಮಾರ್ಗಸೂಚಿಯನ್ನು ಜಾರಿ ಮಾಡಿದೆ.

ಟೂರ್ನಿ ಸಂಬಂಧಿಸಿ ಈಗಾಗಲೇ 3500 ಕೊರೋನಾ ಟೆಸ್ಟ್ ಮಾಡಲಾಗಿದೆ. ಪ್ರತಿ ಹಂತದಲ್ಲೂ ಕೊರೋನಾ ಟೆಸ್ಟ್ ಮಾಡಲಾಗುವುದು ಎಂದು ಮೆಡಿಕಲ್ ಪಾರ್ಟ್ನರ್ ಹೇಳಿದೆ.