ಕೊರೋನಾ ವಾರಿಯರ್ಸ್‌ಗೆ ಗೌರವ: MyCovidHeroes ಸಂದೇಶದ ಜರ್ಸಿ ತೊಡಲಿದೆ RCB!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊರೋನಾ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸುತ್ತಿದೆ. ಇದಕ್ಕಾಗಿ ಸಂಪೂರ್ಣ ಟೂರ್ನಿಯುದ್ದಕ್ಕೂ ಮೈ ಕೋವಿಡ್ ಹೀರೋಸ್ ಎಂಬ ಸಂದೇಶದ ಜರ್ಸಿ ತೊಟ್ಟು RCB ತಂಡ ಕಣಕ್ಕಿಳಿಯಲಿದೆ.

Royal Challengers Bangalore to pay tribute to Covid Heroes through IPL 2020

ದುಬೈ(ಸೆ.17): ಕೊರೋನಾ ವೈರಸ್ ಕಾರಣ ಟೂರ್ನಿ ಭಾರತದಿಂದ ದುಬೈಗೆ ಸ್ಥಳಾಂತರವಾಗಿದೆ. ಕೊರೋನಾ ಕಾರಣ ಐಪಿಎಲ್ ಟೂರ್ನಿಗೆ ಅಭಿಮಾನಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಕೊರೋನಾ ಕಾರಣ ಆಟಗಾರರಿಗೆ ಕಟ್ಟು ನಿಟ್ಟಿನ ಮಾರ್ಗಸೂಚಿ ಹೊರಡಿಸಲಾಗಿದೆ. ಹೀಗೆ ಕೊರೋನಾ ಕಾರಣ ಕೇವಲ ಐಪಿಎಲ್ ಮಾತ್ರವಲ್ಲ, ಇಡೀ ಜಗತ್ತೇ ಸಂಕಷ್ಟ ಎದುರಿಸಿದೆ. ಇದರ ನಡುವೆ ಕೊರೋನಾ ಹೊಡೆದೋಡಿಸಲು ವೈದ್ಯರು, ಆಸ್ಪತ್ರೆ ಸಿಬ್ಬಂಧಿಗಳು, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವು ಶ್ರಮಿಸುತ್ತಲೇ ಇದ್ದಾರೆ. ಇವರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೌರವ ಸಲ್ಲಿಸುತ್ತಿದೆ.

Royal Challengers Bangalore to pay tribute to Covid Heroes through IPL 2020

IPL 2020: RCB ಲುಕ್ ಬದಲಿಸಿದ ಪಂಚ ಪಾಂಡವರು..!.

IPL 2020 ಸಂಪೂರ್ಣ ಟೂರ್ನಿಯಲ್ಲಿ RCB ತಂಡ ಮೈ ಕೋವಿಡ್ ಹೀರೋಸ್ (MyCovidHeroes)ಎಂಬ ಸಂದೇಶದ ಜರ್ಸಿ ತೊಟ್ಟು ಆಡಲಿದೆ. ವಿಶೇಷ ಅಂದರೆ ಆರ್‌ಸಿಬಿ ತಂಡ ಜರ್ಸಿ ಹಿಂಭಾಗದಲ್ಲಿ ಈ ಸಂದೇಶ ಬರೆಯಲಾಗಿದೆ. ಇದನ್ನು ಎಲ್ಲಾ ಪಂದ್ಯದಲ್ಲಿ ಹಾಗೂ ಪ್ರಾಕ್ಟೀಸ್ ವೇಳೆಯೂ ಈ ಸಂದೇಶದ ಜರ್ಸಿ ತೊಡಲಿದೆ. ಈ ಮೂಲಕ ಕೊರೋನಾ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಲಿದೆ.

ಐಪಿಎಲ್‌ ಕಣದಲ್ಲಿ ‘ಧಾರವಾಡದ ಹುಡುಗ’: ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ

ರಾಯಲ್ ಚಾಲೆಂಜರ್ಸ್ ತನ್ನ ಮೊದಲ ಪಂದ್ಯದಲ್ಲಿ ತೊಡುವ MyCovidHeroes ಎಂಬ ಜರ್ಸಿಯನ್ನು ಹರಾಜು ಹಾಕಲಾಗುತ್ತದೆ. ಹರಾಜಿನಲ್ಲಿ ಸಂಗ್ರಹವಾಗುವ ಹಣವನ್ನು ಗೀವ್ ಇಂಡಿಯಾ ಫೌಂಡೇಶನ್(GiveIndia Foundation)ಸಂಸ್ಥೆಗೆ ನೀಡಲಿದೆ. ಈ ಮೂಲಕ ಕೊರೋನಾ ವಾರಿಯರ್ಸ್‌ಗೆ ನೆರವಾಗಲಿದೆ.

IPLನಲ್ಲಿ RCB ಪರ ಅಬ್ಬರಿಸಲು ದೇವದತ್ ಪಡಿಕ್ಕಲ್ ರೆಡಿ

ಈ ಆವೃತ್ತಿಯಲ್ಲಿ RCB ಆಟಗಾರರು ಎಲ್ಲಾ ಕೋವಿಡ್ ಹೀರೋಗಳಿಗೆ ಗೌರವ ಸಲ್ಲಿಸಲಿದ್ದಾರೆ. ಇದರ ಜೊತೆಗೆ ಸಾಮಾಜಿಕ ಮಾಧ್ಯಮದ ಮೂಲಕ ಕೊರೋನಾ ವಾರಿಯರ್ಸ್ ಕುರಿತ ಕೆಲವು ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲಿದ್ದಾರೆ. 

ವಿಶೇಷ ಕಾರ್ಯಕ್ರಮವನ್ನು ವರ್ಚುವಲ್ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಯೋಜಿಸಲಾಗಿತ್ತು. ನಾಯಕ ವಿರಾಟ್ ಕೊಹ್ಲಿ, ಕನ್ನಡಿಗ ಹಾಗೂ ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಹಾಗೂ ಪಾರ್ಥೀವ್ ಪಟೇಲ್ ಜರ್ಸಿ ಬಿಡುಗಡೆ ಮಾಡಿದರು. ಇನ್ನು ಕಾರ್ಯಕ್ರಮದಲ್ಲಿ ತಂಡದ ಚೇರ್ಮೆನ್ ಸಂಜೀವ್  ಚುರಿವಾಲ ಹಾಜರಿದ್ದರು.

Latest Videos
Follow Us:
Download App:
  • android
  • ios