ಮುಂಬೈ(ಮಾ.13): ಬಹುನಿರೀಕ್ಷಿತ ಐಪಿಎಲ್ 2020 ಟೂರ್ನಿಗೆ ಆರಂಭದಲ್ಲೇ ಕೊರೋನಾ ವೈರಸ್ ತಟ್ಟಿದೆ. ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಟೂರ್ನಿ ಇದೀಗ ಎಪ್ರಿಲ್ 15ರ ವರೆಗೆ ರದ್ದಾಗಿದೆ. ಆಟಗಾರರು, ಫ್ರಾಂಚೈಸಿ, ಅಭಿಮಾನಿಗಳ ಸುರಕ್ಷತೆಗಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. 

ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ

8 ತಂಡಗಳ ಅಭಿಮಾನಿಗಳು ಐಪಿಎಲ್ ಟೂರ್ನಿಗಾಗಿ ಕಾಯುತ್ತಿದ್ದರು. ಆದರೆ ಕೊರೋನಾ ವೈರಸ್ ಹರಡುತ್ತಿರುವ ಕಾರಣ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಇದೀಗ ಬಿಸಿಸಿಐ ನಿರ್ಧಾರ ಕುರಿತು ಐಪಿಎಲ್ ಫ್ರಾಂಚೈಸಿ, ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.