ಡೆಲ್ಲಿ ವಿರುದ್ಧ ಹೋರಾಟಕ್ಕೆ ಬದಲಾವಣೆ ಮಾಡ್ತಾರಾ ಕೊಹ್ಲಿ? ಇಲ್ಲಿದೆ ಸಂಭವನೀಯ ತಂಡ!
ಸೋಮವಾರದ ಹೋರಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗುತ್ತಿದೆ. ಗೆಲುವಿನ ಲಯದಲ್ಲಿರುವ ಉಭಯ ತಂಡಗಳು ರೋಚಕ ಹೋರಾಟ ನೀಡಲಿದೆ. ಇಂದಿನ ಪಂದ್ಯಕ್ಕೆ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ಸಂಭವನೀಯ ತಂಡ.
ದುಬೈ(ಅ.05): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸರಿಸಮಾನ ಹೋರಾಟ ನೀಡಿದೆ. ಉಭಯ ತಂಡಗಳು 3 ಗೆಲುವು ಹಾಗೂ 1 ಸೋಲು ಕಂಡಿದೆ. ಆದರೆ ನೆಟ್‌ರನ್ ರೇಟ್ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 3ನೇ ಸ್ಥಾನದಲ್ಲಿದೆ.
ಈ ಒಂದು ವೀಕ್ನೆಸ್ ಬಗೆಹರಿಸಿಕೊಳ್ಳದಿದ್ದರೆ RCB ತಂಡಕ್ಕೆ ಅಪಾಯ ಗ್ಯಾರಂಟಿ..!..
ಕಳೆದ ಪಂದ್ಯದಲ್ಲಿ ಬೆಂಗಳೂರು ತಂಡ, ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ ಗೆಲುವು ದಾಖಲಿಸಿತ್ತು. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ಇಂದಿನ(ಅ.05): ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭವನೀಯ ಪ್ಲೇಯಿಂಗ್ 11
ದೇವದತ್ ಪಡಿಕ್ಕಲ್, ಆ್ಯರೋನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಿವಂ ದುಬೆ, ಗುರುಕೀರತ್ ಸಿಂಗ್ ಮಾನ್, ವಾಶಿಂಗ್ಟನ್ ಸುಂದರ್, ಇಸ್ರು ಉದಾನ, ನವದೀಪ್ ಸೈನಿ, ಆ್ಯಡಂ ಜಂಪಾ, ಯಜುವೇಂದ್ರ ಚಹಾಲ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯ ಹೊರತು ಪಡಿಸಿದರೆ ಇನ್ನುಳಿದ 3 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ನೀಡಿದೆ. ರೈಸರ್ಸ್ ವಿರುದ್ಧ 163 ರನ್ ಟಾರ್ಗೆಟ್ ಚೇಸ್ ಮಾಡಲು ಡೆಲ್ಲಿ ವಿಫಲವಾಗಿದೆ. ಕಳೆದ ಪಂದ್ಯದಲ್ಲಿ ಇಂಜುರಿ ಕಾರಣದಿಂದ ಡೆಲ್ಲಿ ಕೆಲ ಬದಲಾವಣೆ ಮಾಡಿತ್ತು. ಈ ಬದಲಾವಣೆ ಡೆಲ್ಲಿ ತಂಡದ ಕೈ ಹಿಡಿದಿದೆ. ಇನ್ನು ಇಂಜುರಿಯಾಗಿರುವ ಅಮಿತ್ ಮಿಶ್ರಾ ಫಿಟ್ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಇತ್ತ ಅಕ್ಸರ್ ಪಟೇಲ್ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ಪ್ಲೇಯಿಂಗ್ 11
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಶಿಮ್ರೊನ್ ಹೆಟ್ಮೆಯರ್ ಮಾರ್ಕಸ್ ಸ್ಟೊಯ್ನಿಸ್, ಆರ್ ಅಶ್ವಿನ್, ಕಾಗಿಸೋ ರಬಡಾ, ಅನ್ರಿಚ್ ನೊರ್ಜೆ, ಹರ್ಶಲ್ ಪಟೇಲ್, ಅಕ್ಸರ್ ಪಟೆಲ್