ನವದೆಹಲಿ(ಮಾ.17): 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆಯ ಅನಿಶ್ಚಿತತೆ ಮುಂದುವರೆದಿದ್ದು, ಕೊರೋನಾ ಭೀತಿಯಿಂದಾಗಿ ಮಿಲಿಯನ್ ಡಾಲರ್ ಟೂರ್ನಿ ನಡೆಯೋದು ಅನುಮಾನ ಎನಿಸಿದೆ. 

IPL 2020: ಚೆನ್ನೈ ತೊರೆದ CSK ನಾಯಕ MS ಧೋನಿ..!

ಹೌದು, ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಐಪಿಎಲ್‌ ಪಂದ್ಯಾವಳಿಯನ್ನೂ ಏಪ್ರಿಲ್ 15ಕ್ಕೆ ಮುಂದೂಡಿರುವ ಬೆನ್ನಲ್ಲೇ ಇದೀಗ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಎಲ್ಲಾ ತಂಡಗಳ ಆಡಳಿತ ಮಂಡಳಿ ತನ್ನೆಲ್ಲಾ ಆಟಗಾರರಿಗೂ ಸುತ್ತೋಲೆ ರವಾನಿಸಿದೆ. ಅಲ್ಲದೆ, ಈಗಾಗಲೇ ಅಭ್ಯಾಸ ನಿರತ ಆಟಗಾರರು ಕೂಡಲೇ ಮನೆಗೆ ಹಿಂದಿರುಗಬಹುದು ಎಂದು ತಿಳಿಸಿದ್ದು, ಹೊಸ ವೇಳಾಪಟ್ಟಿ ಪ್ರಕಟಿದ ಬಳಿಕ ಈ ಬಗ್ಗೆ ತಿಳಿಸಲಾಗುವುದು ಎಂದು ತಮ್ಮ ಆಟಗಾರರಿಗೆ ತಿಳಿಸಿದೆ. 

ಒಂದು ವರ್ಷ ಐಪಿಎಲ್‌ ರದ್ದಾದರೆ ಬಿಸಿಸಿಐಗೆ ಆಗೋ ನಷ್ಟ ಎಷ್ಟು..?

ಈ ಬಗ್ಗೆ ಆಟಗಾರರಿಗೆ ಮಾಹಿತಿ ನೀಡಿರುವುದಾಗಿ ಆರ್‌ಸಿಬಿ ಟ್ವೀಟ್‌ ಮಾಡಿದೆ. ಮಾರ್ಚ್ 29ರಿಂದ ಪಂದ್ಯಾವಳಿ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲಾ ತಂಡಗಳು ತರಬೇತಿ ಆರಂಭಿಸಿದ್ದವು. ಅನೇಕ ವಿದೇಶಿ ಆಟಗಾರರೂ ಅಭ್ಯಾಸದಲ್ಲಿ ತೊಡಗಿಕೊಂಡಿದ್ದರು.