ದುಬೈ(ಸೆ.12): ಕೊರೋನಾ ಸೋಂಕು ತಡೆ​ಯಲು ಬಯೋ ಸೆಕ್ಯೂರ್‌ ವಾತಾ​ವ​ರಣ ಸೃಷ್ಟಿ​ಸಿ​ರುವ ಐಪಿ​ಎಲ್‌ ಅಯೋ​ಜ​ಕರು, ಆಟ​ಗಾ​ರರು ಹಾಗೂ ಸಹಾ​ಯಕ ಸಿಬ್ಬಂದಿಯನ್ನು ಹೊರ​ತು​ ಪಡಿಸಿ ಮತ್ತ್ಯಾ​ರಿಗೂ ಕ್ರೀಡಾಂಗಣ, ಹೋಟೆಲ್‌ಗೆ ಪ್ರವೇಶ ನೀಡು​ತ್ತಿಲ್ಲ. 

ಈ ಕಾರಣದಿಂದಾಗಿ ಆಟ​ಗಾ​ರರು ತಮ್ಮ ಕೆಲಸಗಳನ್ನು ತಾವೇ ಮಾಡಿ​ಕೊ​ಳ್ಳ​ಬೇ​ಕಿದೆ. ಬ್ಯಾಟ್‌ ತಯಾ​ರ​ಕ​ರಿ​ಗೂ ಪ್ರವೇಶವಿಲ್ಲದ ಕಾರಣ, ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ, ಹೋಟೆಲ್‌ ಕೊಠ​ಡಿ​ಯಲ್ಲಿ ಬ್ಯಾಟ್‌ಗಳನ್ನು ತಾವೇ ಅಗ​ತ್ಯಕ್ಕೆ ತಕ್ಕಂತೆ ಸಿದ್ಧ​ಪ​ಡಿ​ಸಿ​ಕೊ​ಳ್ಳು​ತ್ತಿದ್ದಾರೆ. ಕೊಹ್ಲಿ ಗರ​ಗಸದಲ್ಲಿ ಬ್ಯಾಟ್‌ ಹ್ಯಾಂಡಲ್‌ ಕಟ್‌ ಮಾಡು​ತ್ತಿ​ರುವ ವಿಡಿಯೋ ಸಾಮಾ​ಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

IPL 2020: ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ ಪ್ರಕಟ..!

‘ಸಣ್ಣ ವಿಚಾರವೂ ಮಹತ್ವದಾಗ​ಲಿದೆ. ಬ್ಯಾಟ್‌ ಸಮ​ತೋ​ಲನವನ್ನು ಕಾಪಾ​ಡಲು ಕೆಲ ಸೆಂಟಿ ಮೀಟರ್‌ಗಳು ಸಹ ಮುಖ್ಯ​ವೆ​ನಿ​ಸ​ಲಿದೆ’ ಎಂದು ಕೊಹ್ಲಿ ಟ್ವೀಟ್‌ ಮಾಡಿ​ದ್ದಾರೆ.

ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಪ್ಟೆಂಬರ್ 21ರಂದು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಮುಖಾಮುಖಿಯಾಗಲಿವೆ.