ಅಬು ಧಾಬಿ(ಅ.30): 13ನೇ ಆವೃತ್ತಿ ಐಪಿಎಲ್ ಟೂರ್ನಿಯ 50ನೇ ಪಂದ್ಯ. ಈ ಮಹತ್ವದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ. ಉಭಯ ತಂಡಗಳಿಗೆ  ಮಾಡು ಇಲ್ಲವೇ ಮಡಿ ಪಂದ್ಯ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. 

ಸೋತ್ರೆ ಟೂರ್ನಿಯಿಂದ ಔಟ್, ಗೆದ್ರೆ ಫ್ಲೇ ಆಫ್ ಚಾನ್ಸ್; KXIP vs RR ನಿರ್ಣಾಯಕ ಫೈಟ್!.

ಪ್ಲೇ ಆಫ್ ಅವಕಾಶಕ್ಕಾಗಿ ಉಭಯ ತಂಡ ಕಠಿಣ ಹೋರಾಟ ನಡೆಸಲಿದೆ. ಸತತ 5 ಗೆಲುವು ದಾಖಲಿಸಿರುವ ಕಿಂಗ್ಸ್ ಇಲೆವೆನ್ ಪಂಜಾಬ್ 6ನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇತ್ತ ರಾಜಸ್ಥಾನ ರಾಯಲ್ಸ್ ಮತ್ತೊಂದು ಸ್ಫೋಟಕ ಪ್ರದರ್ಶನಕ್ಕೆ ತಯಾರಾಗಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಸಂಭವನೀಯ ತಂಡ:
ಕೆಎಲ್ ರಾಹುಲ್‌ (ನಾಯಕ), ಮಂದೀಪ್‌ ಸಿಂಗ್,  ಕ್ರಿಸ್ ಗೇಲ್‌, ನಿಕೊಲಸ್ ಪೂರನ್‌, ಗ್ಲೆನ್ ಮ್ಯಾಕ್ಸ್‌ವೆಲ್‌,  ದೀಪಕ್ ಹೂಡಾ,  ಕ್ರಿಸ್ ಜೋರ್ಡನ್‌, ಆರ್ ಅಶ್ವಿನ್‌, ರವಿ ಬಿಷ್ಣೋಯಿ,  ಮೊಹಮ್ಮದ್ ಶಮಿ,  ಆಶ್‌ರ್‍ದೀಪ್‌ ಸಿಂಗ್

ಮಯಾಂಕ್ ಅಗರ್ವಾಲ್ ಕಮ್‌ಬ್ಯಾಕ್ ಮಾಡುವ ಸಾಧ್ಯತೆ ಕಡಿಮೆ. ಇತ್ತ ಮನ್ದೀಪ್ ಸಿಂಗ್ ಕಳೆದ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದ ಅರ್ಧಶತಕ ಸಿಡಿಸಿದ್ದರು. ಇಷ್ಟೇ ಅಲ್ಲ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 

ರಾಜಸ್ಥಾನ ರಾಯಲ್ಸ್ ಸಂಭವನೀಯ ತಂಡ 
ರಾಬಿನ್ ಉತ್ತಪ್ಪ, ಬೆನ್ ಸ್ಟೋಕ್ಸ್‌, ಸ್ಟೀವ್ ಸ್ಮಿತ್‌ (ನಾಯಕ), ಸಂಜು ಸಮ್ಯಾನ್ಸನ್ , ಜೋಸ್ ಬಟ್ಲರ್‌, ರಿಯಾನ್‌ ಪರಾಗ್‌, ರಾಹುಲ್ ತೆವಾಟಿಯಾ, ಜೋಫ್ರಾ ಆರ್ಚರ್‌, ಶ್ರೇಯಸ್‌ ಗೋಪಾಲ್ , ಅಂಕಿತ್‌ ರಜಪೂತ್ , ಕಾರ್ತಿಕ್‌ ತ್ಯಾಗಿ.