ಕರಾಚಿ(ಮಾ.11): ಕ್ರೀಡಾಸ್ಫೂರ್ತಿ ಮತ್ತು ಕ್ರೀಡೆಯ ಮೇಲಿನ ಪ್ರೀತಿ ಕೇವಲ ಆಟಗಾರರಿಗೆ ಅಷ್ಟೇ ಸೀಮಿತವಲ್ಲ. ಅದು ಪ್ರೇಕ್ಷಕ, ಅಭಿಮಾನಿಗಳಲ್ಲೂ ಇದ್ದಾಗ ಸಹಜವಾಗಿ ಸೌಹಾರ್ದತೆಗೆ ನಾಂದಿಯಾಗುತ್ತದೆ ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಕ್ರೀಡೆಗೆ ಗಡಿಯ ಹಂಗಿಲ್ಲ ಎನ್ನುವುದನ್ನು ಪಾಕಿಸ್ತಾನದ ಅಭಿಮಾನಿ ತೋರಿಸಿಕೊಟ್ಟಿದ್ದಾರೆ. 

ಧೋನಿ ಕ್ರಿಕೆಟ್ ಭವಿಷ್ಯ ನುಡಿದ ಸುನಿಲ್ ಜೋಶಿ..!

ಭಾರತ ತನ್ನ ಬದ್ಧ ವೈರಿ ಎಂಬಂತೆ ನೋಡುವ ಪಾಕಿಸ್ತಾನದ ಪಿಎಸ್‌ಎಲ್‌ ಟಿ20 ಟೂರ್ನಿಯಲ್ಲಿ ಈಗ ಮಹೇಂದ್ರ ಸಿಂಗ್‌ ಧೋನಿಯೂ ಕಮಾಲ್‌ ನಡೆಸುತ್ತಿದ್ದಾರೆ. ಧೋನಿ ಅಭಿಮಾನಿಗಳು ಪಿಎಸ್‌ಎಲ್‌ ಪಂದ್ಯದ ವೇಳೆ ಧೋನಿ ಎಂದು ಬರೆಯಲಾದ ಪಾಕಿಸ್ತಾನ ಕ್ರಿಕೆಟ್‌ ತಂಡದ ಜೆರ್ಸಿಗಳನ್ನು ತೊಟ್ಟು ಕಾಣಿಸಿಕೊಂಡಿದ್ದಾರೆ. 

ಈ ಮೂಲಕ ವಿಶ್ವದೆಲ್ಲೆಡೆ ಇನ್ನೂ ಧೋನಿ ಅಭಿಮಾನಿಗಳಿದ್ದೇವೆ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಜಾಲತಾಣಗಳಲ್ಲಿ ಈ ಅಭಿಮಾನಿಗಳ ಫೋಟೋ ವೈರಲ್‌ ಆಗಿದೆ. 2019ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಧೋನಿ 2020ರ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಮಾರ್ಚ್ 29ರಂದ ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್‌ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.