ಶಾರ್ಜಾ(ಸೆ.27): 13ನೇ ಆವೃತ್ತಿ ಐಪಿಎಲ್ ಟೂರ್ನಿ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸುತ್ತಿದೆ. ಆರ್‌ಸಿಬಿ ವಿರುದ್ಧ ಶತಕ ಸಿಡಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಇಂದು(ಸೆ.27) ಮಯಾಂಕ್ ಜೊತೆ ಸೇರಿ ಮತ್ತೊಂದು ದಾಖಲೆ ಬರೆದಿದ್ದಾರೆ.  ರಾಜಸ್ಥಾನ ರಾಯಲ್ಸ್ ವಿರುದ್ಧ ಅತ್ಯುತ್ತಮ ಆರಂಭ ನೀಡೋ ಮೂಲಕ ಈ ಆವೃತ್ತಿ ಗರಿಷ್ಠ ಪವರ್ ಪ್ಲೇ ಸ್ಕೋರ್ ದಾಖಲಿಸಿದ್ದಾರೆ.

IPL 2020: ಹೊಡಿಬಡಿಯಾಟದಲ್ಲಿ ಮಿಂಚುತ್ತಿದ್ದಾನೆ ಈ 20ರ ಯುವ ಸ್ಪಿನ್ನರ್..!

ಈ ಆವೃತ್ತಿಯಲ್ಲಿ ಪವರ್ ಪ್ಲೇ ಓವರ್‌ಗಳಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾತ್ರವಾಗಿದೆ. ಮುಂಬೈ ಇಂಡಿಯನ್ಸ್ ದಾಖಲೆ ಮುರಿದು ಹೊಸ ದಾಖಲೆ ನಿರ್ಮಾಣವಾಗಿದೆ. ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಪವರ್ ಪ್ಲೇ ಓವರ್‌ನಲ್ಲಿ 60 ರನ್ ಸಿಡಿಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 1 ವಿಕೆಟ್ ನಷ್ಟಕ್ಕೆ 59 ರನ್ ಸಿಡಿಸಿತ್ತು.

IPL 2020: ಗರಿಷ್ಠ ಪವರ್ ಪ್ಲೇ ಸ್ಕೋರ್
60/0 ಪಂಜಾಬ್ vs ರಾಜಸ್ಥಾನ, ಶಾರ್ಜಾ
59/1 ಮುಂಬೈ vs ಕೆಕೆಆರ್, ಅಬು ಧಾಬಿ
54/1 ರಾಜಸ್ಥಾನ vs ಚೆನ್ನೈ, ಶಾರ್ಜಾ
53/0 ಆರ್‌ಸಿಬಿ vs ಹೈದರಾಬಾದ್, ದುಬೈ
53/0 ಚೆನ್ನೈ vs ರಾಜಸ್ಥಾನ, ಶಾರ್ಜಾ

ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 8.4 ಓವರ್‌ಗಳಲ್ಲಿ ವಿಕೆಟ್ ನಷ್ಟ ವಿಲ್ಲದೆ 100 ರನ್ ಪೂರೈಸಿದೆ.