ನವದೆಹಲಿ(ಫೆ.18): ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಮಾಲಿಕರು, ವಿಂಡೀಸ್‌ನ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ನ ಸೇಂಟ್‌ ಲೂಸಿಯಾ ಫ್ರಾಂಚೈಸಿಯನ್ನು ಖರೀದಿಸಲು ಮುಂದಾಗಿದ್ದಾರೆ. 

ಇದರೊಂದಿಗೆ ಸಿಪಿಎಲ್‌ನಲ್ಲಿ ತಂಡ ಹೊಂದರಲಿರುವ ಐಪಿಎಲ್‌ನ 2ನೇ ತಂಡ ಎನ್ನುವ ಹಿರಿಮೆಗೆ ಕಿಂಗ್ಸ್‌ ಇಲೆವೆನ್‌ ಪಾತ್ರವಾಗಲಿದೆ. ಈ ಹಿಂದೆ ಕೋಲ್ಕತಾ ನೈಟ್‌ರೈಡ​ರ್ಸ್ 2015ರಲ್ಲಿ ಟ್ರಿನಿಬ್ಯಾಗೋ ನೈಟ್‌ರೈಡರ್ಸ್ ತಂಡವನ್ನು ಖರೀದಿಸಿತ್ತು. ಟ್ರಿನಿಬ್ಯಾಗೋ ನೈಟ್‌ರೈಡರ್ಸ್ ಮೂರು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವೆಂದು ಗುರುತಿಸಿಕೊಂಡಿದೆ.

IPL 2020: ಹರಾಜಿನ ಬಳಿಕ KXIP ತಂಡದ ಫುಲ್ ಲಿಸ್ಟ್!

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳಲ್ಲಿ ಸೇಂಟ್‌ ಲೂಸಿಯಾ ಕೂಡಾ ಒಂದು ಎನಿಸಿದೆ. ಸೇಂಟ್‌ ಲೂಸಿಯಾ ತಂಡವನ್ನು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ ಮುನ್ನಡೆಸುತ್ತಿದ್ದಾರೆ. ಸೇಂಟ್‌ ಲೂಸಿಯಾ 2016ರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದೇ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ. 

2020ರ ಆವೃತ್ತಿಯ ಸಿಪಿಎಲ್‌ ಆಗಸ್ಟ್ 19ರಿಂದ ಸೆಪ್ಟೆಂಬರ್ 26ರ ವರೆಗೂ ನಡೆಯಲಿದೆ. ಆರ್‌ಸಿಬಿಯ ಮಾಜಿ ಮಾಲಿಕ ವಿಜಯ್‌ ಮಲ್ಯ ಬಾರ್ಬಡೊಸ್‌ ಟ್ರೈಡೆಂಟ್ಸ್‌ ತಂಡವನ್ನು ಖರೀದಿಸಿದ್ದರು, ಆದರೆ ಕಳೆದ ವರ್ಷ ತಂಡದ ಮಾಲಿಕತ್ವವನ್ನು ಅವರು ಕಳೆದುಕೊಂಡರು.