ದುಬೈ(ಅ.16): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕಳಪೆ ಪ್ರದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ಆವೃತ್ತಿಯಲ್ಲಿ ಚಾಂಪಿಯನ್ ಆಟ ಪ್ರದರ್ಶಿಸುತ್ತಿದ್ದ ಚೆನ್ನೈ ಈ ಬಾರಿ ಗೆಲುವಿಗೆ ಹರಸಾಹಸ ಪಡುತ್ತಿದೆ. ಹೀಗಾಗಿ ಅಭಿಮಾನಿಗಳು ತಂಡದಲ್ಲಿ ಬದಲಾವಣೆ ಮಾಡಲು ಆಗ್ರಹಿಸಿದ್ದಾರೆ. ಈ ವೇಳೆ ಕಳೆದ ಆವೃತ್ತಿಯಲ್ಲಿ ಪರ್ಪಲ್ ಕ್ಯಾಪ್ ಪಡೆದ ಸ್ಪಿನ್ನರ್ ಇಮ್ರಾನ್ ತಾಹೀರ್, ಸಹ ಆಟಗಾರರಿಗೆ ನೀರು ಕೊಡಲು ಸೀಮಿತವಾಗಿದ್ದಾರೆ. ತಾಹೀರ್‌ಗೆ ಅವಕಾಶ ನೀಡಿ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಐಪಿಎಲ್ 2020: CSK ಪಡೆಯನ್ನು RCB ಹೆಡೆಮುರಿ ಕಟ್ಟಿದ್ದು ಹೇಗೆ..?

ಈ ಕುರಿತು ಇಮ್ರಾನ್ ತಾಹೀರ್ ಉತ್ತರ ನೀಡಿದ್ದಾರೆ. ತಾಹೀರ್ ನೀಡಿದ ಉತ್ತರ ಇದೀಗ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಸಹ ಆಟಗಾರರಿಗೆ ನೀರು ತಂದುಕೊಡುವುದು ನನ್ನ ಕರ್ತವ್ಯ. ನನಗೆ ತಂಡದ ಗೆಲುವು ಮುಖ್ಯ ಎಂದಿದ್ದಾರೆ. ತಾಹೀರ್ ಮಾಡಿದ ಟ್ವೀಟ್‌ ಎಲ್ಲರಿಗೆ ಹಿತವೆನಿಸಿದೆ.

 

IPL 2020: ಗೆಲ್ಲುವ ಪಂದ್ಯ ಕೈಚೆಲ್ಲಿದ ಚೆನ್ನೈ: CSK ಮಾಡಿದ ಎಡವಟ್ಟೇನು?

ನಾನು ಮೈದಾನದಲ್ಲಿ ಆಡುತ್ತಿರುವಾಗ ಹಲವು ಕ್ರಿಕೆಟಿಗರು ನನಗೆ ನೀರು ತಂದುಕೊಟ್ಟಿದ್ದಾರೆ. ಇದೀಗ ಅರ್ಹ ಆಟಗಾರರು ಮೈದಾನದಲ್ಲಿರುವಾಗ ಅವರಿಗೆ ನೀರು ಕೊಡುವುದು ನನ್ನ ಕರ್ತವ್ಯವಾಗಿದೆ. ನಾನು ಆಡುತ್ತಿದ್ದೇನೆ ಅಥವಾ ಇಲ್ಲ ಅನ್ನೋ ಪ್ರಶ್ನೆ ಅಲ್ಲ, ತಂಡದ ಗೆಲುವು ಮುಖ್ಯ. ನನಗೆ ಅವಕಾಶ ಸಿಕ್ಕರೆ ಉತ್ತಮ ಪ್ರದರ್ಶನ ನೀಡಲು ಎಲ್ಲಾ ಪ್ರಯತ್ನ ಮಾಡುತ್ತೇನೆ. ನನಗೆ ತಂಡವೇ ಮುಖ್ಯ ಎಂದು ತಾಹೀರ್ ಟ್ವೀಟ್ ಮಾಡಿದ್ದಾರೆ.

2019ರ ಐಪಿಎಲ್ ಟೂರ್ನಿಯಲ್ಲಿ ಇಮ್ರಾನ್ ತಾಹೀರ್ 26 ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಗಿಟ್ಟಿಸಿಕೊಂಡಿದ್ದರು. ಸಿಎಸ್‌ಕೆ ಫೈನಲ್ ಪ್ರವೇಶಕ್ಕೆ ತಾಹೀರ್ ಪ್ರದರ್ಶನ ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ 3 ಗೆಲವು ಕಂಡಿದ್ದರೆ, 5 ಪಂದ್ಯದಲ್ಲಿ ಸೋಲು ಅನುಭವಿಸಿದೆ.