ಚೀನಾ ಪ್ರಾಯೋಜಕತ್ವ ಹಿಂದೆ ಸರಿದ ಬಳಿಕ ಬಿಸಿಸಿಐ ಬಿಗ್‌ಬಾಸ್ ಸೌರವ್ ಗಂಗೂಲಿ ಪ್ರತಿಕ್ರಿಯೆ!
IPL 2020 ಟೂರ್ನಿ ಆಯೋಜನೆ ದಿನಾಂಕ ಖಚಿತಗೊಂಡ ಬೆನ್ನಲ್ಲೇ ಟೈಟಲ್ ಪ್ರಾಯೋಜಕತ್ವದಿಂದ ಚೀನಾದ ವಿವೋ ಮೊಬೈಲ್ ಹಿಂದೆ ಸರಿದಿತ್ತು. ಇದು ಬಿಸಿಸಿಐಗೆ ಆರ್ಥಿಕ ಹೊಡೆತ ನೀಡಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ವಿವೋ ಸ್ಪಾನ್ಸರ್ ಹಿಂದೆ ಸರಿದ ಬಳಿಕ ಇದೇ ಮೊದಲ ಬಾರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತಿಕ್ರಿಯೆ ನೀಡಿದ್ದಾರೆ.
ಮುಂಬೈ(ಆ.09): ಐಪಿಎಲ್ 2020 ಟೂರ್ನಿ ಹಲವು ಅಡೆ ತಡೆಯನ್ನು ನಿವಾರಿಸಿಕೊಂಡು ಇದೀಗ ಆಯೋಜನೆಗೆ ಸಜ್ಜಾಗಿದೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಬರದ ಕಾರಣ ದುಬೈನಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಸೆಪ್ಟೆಂಬರ್ 19 ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಬಿಸಿಸಿಐ ಅಂತಿಮ ಹಂತದ ಸಿದ್ಧತೆಯಲ್ಲಿದೆ. ಇದರ ನಡುವೆ ಚೀನಾ ವಿರುದ್ಧ ಆಕ್ರೋಷ ಹೆಚ್ಚಾದ ಕಾರಣ ಚೀನಿ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುವ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿ ಟೈಟಲ್ ಪ್ರಾಯೋಜಕತ್ವದ ವಿವೋ ಹಿಂದೆ ಸರಿದಿತ್ತು. ಈ ಬೆಳವಣಿಗೆಗಳ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ಐಪಿಎಲ್ ಪ್ರಾಯೋಜಕತ್ವ: ರೇಸ್‌ನಲ್ಲಿ ಅಮೆಜಾನ್ ಎಂಟ್ರಿ..!.
ಪ್ರತಿ ಐಪಿಎಲ್ ಆವೃತ್ತಿಗೆ ವಿವೋ ಮೊಬೈಲ್ ಬಿಸಿಸಿಐಗೆ 439 ಕೋಟಿ ರೂಪಾಯಿ ನೀಡುತ್ತಿತ್ತು. 2017ರಿಂದ 2021ರ ವರೆಗೆ ಒಪ್ಪಂದ ಮಾಡಿಕೊಂತ್ತು. ಆದರೆ ದಿಢೀರ್ ಬೆಳವಣಿಗೆ ಕಾರಣದಿಂದ ವಿವೋ ಹಿಂದೆ ಸರಿಯಿತು. ಇದು ಬಿಸಿಸಿಐಗೆ ಆರ್ಥಿಕ ನಷ್ಟ ತರಲಿದೆ ಎಂದು್ ಅಭಿಪ್ರಾಯಪಟ್ಟಿದ್ದರು. ಇದೀಗ ಈ ಕುರಿತು ಮಾತನಾಡಿರುವ ಸೌರವ್ ಗಂಗೂಲಿ, ಇದು ಸಣ್ಣ ಬೆಳವಣಿಗೆ. ಇದರಿಂದ ಬಿಸಿಸಿಐ ಆರ್ಥಿಕತೆಗೆ ಯಾವುದೇ ಸಮಸ್ಯೆ ಇಲ್ಲ. ವಿವೋ ಹಿಂದೆ ಸರಿದ ಕಾರಣ ಬಿಸಿಸಿಐಗೆ ಯಾವುದೇ ಸಂಕಷ್ಟವೂ ಎದುರಾಗಲ್ಲ ಎಂದಿದ್ದಾರೆ.
IPL 2020: ಈ ಐವರು ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲಬಲ್ಲರು..!ಇಂಡೋ-ಚೀನಾ ಗಡಿ ಸಮಸ್ಯೆಯಿಂದ ಚೀನಾ ವಸ್ತುಗಳು, ಚೀನಾ ಆ್ಯಪ್, ಚೀನಾ ಕಂಪನಿಗಳು ಸಂಕಷ್ಟಕ್ಕೆ ಬಿದ್ದಿದೆ. ವಿವೋ ಒಪ್ಪಂದ ರದ್ದು ಮಾಡಿರುವುದು ಅವರ ನಿರ್ಧಾರ. ಬಿಸಿಸಿಐ ವಿವೋ ನಿರ್ಧಾರವನ್ನು ಗೌರವಿಸುತ್ತದೆ. ಇದೀಗ ದಿಢೀರ್ ಬೆಳವಣಿಗೆಯಿಂದ ಹಿಂದೆ ಸರಿದಿದೆ. ಇದರಿಂದ ಬಿಸಿಸಿಐಗೆ ಯಾವುದೇ ಸಮಸ್ಯೆ ಇಲ್ಲ ಎಂದು ಗಂಗೂಲಿ ಹೇಳಿದ್ದಾರೆ.