ಕೋಲ್ಕತಾ(ಡಿ.19): ಐಪಿಎಲ್ ಹರಾಜಿನಲ್ಲಿ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ 15.5 ಕೋಟಿಗೆ ಹರಾಜಾಗೋ ಮೂಲಕ ಗರಿಷ್ಠ ದಾಖಲೆ ಬರೆದರೆ, ಮ್ಯಾಕ್ಸ್‌ವೆಲ್, ಕ್ರಿಸ್ ಮೊರಿಸ್, ಸ್ಯಾಮ್ ಕರನ್ ಸೇರಿದಂತೆ ವಿದೇಶಿ ಕ್ರಿಕೆಟಿಗರ ಕೋಟಿ ಕೋಟಿ ರೂಪಾಯಿಗೆ ಬಿಕರಿಯಾಗಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ, ಹನುಮಾ ವಿಹಾರಿ ಸೇರಿದಂತೆ ಹಲವು ಕ್ರಿಕೆಟಿಗರು ಅನ್‌ಸೋಲ್ಡ್ ಆಗಿದ್ದಾರೆ. ಇದರಲ್ಲಿ ಬಾಂಗ್ಲಾ ಕ್ರಿಕೆಟಿಗ ಮುಶ್ಫೀಕರ್ ರಹೀಮ್ ಕೂಡ  ಅನ್ ಸೋಲ್ಡ್ ಫುಲ್ ಟ್ರೋಲ್ ಆಗಿದೆ.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಮುಶ್ಫೀಕರ್ ರಹೀಮ್ 2ನೇ ಬಾರಿಗೆ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಆದರೆ ಎರಡು ಬಾರಿ ರಹೀಮ್ ಅನ್‌ಸೋಲ್ಡ್ ಆಗಿದ್ದಾರೆ. 2020ರ ಐಪಿಎಲ್ ಹರಾಜಿನ ಕಣದಿಂದ ಹಿಂದೆ ಸರಿದಿದ್ದ ರಹೀಮ್ ಅಂತಿಮ ಹಂತದಲ್ಲಿ 75 ಲಕ್ಷ ಮೂಲ ಬೆಲೆಯೊಂದಿಗೆ ಹೆಸರು ನೊಂದಾಯಿಸಿಕೊಂಡಿದ್ದರು. ಹೀಗಾಗಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.