ಕೋಲ್ಕತಾ(ಡಿ.19): ಐಪಿಎಲ್ ಆಟಗಾರರ ಹರಾಜಿನಲ್ಲಿ ಅಚ್ಚರಿ ನಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಮಿಸ್ಟರ್ ನ್ಯಾಗ್ಸ್‌ನ್ನು ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇಲ್ ಮಾಡಲಾಗಿತ್ತು. ಆದರೆ ನ್ಯಾಗ್ಸ್ ಮನವಿ ಮೇರೆಗೆ  RCB ಮತ್ತೆ ಸೇರಿಸಿಕೊಂಡಿದೆ.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಹೌದು, ಮಿಸ್ಟರ್ ನ್ಯಾಗ್ಸ್  RCB  ತಂಡದ ಇನ್‌ಸೈಡರ್. ಹಾಸ್ಯಗಳ ಮೂಲಕ  RCB ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುವ ಮಿಸ್ಟರ್ ನ್ಯಾಗ್ಸ್ ಇದೀಗ ಐಪಿಎಲ್ ಹರಾಜಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಆರಂಭದಲ್ಲಿ ನ್ಯಾಗ್ಸ್ ನನ್ನನ್ನು ಈ ಬಾರಿ ತಂಡದಿಂದ ಕೈಬಿಟ್ಟಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡಕ್ಕೇ ಸೇಲ್ ಮಾಡಿದ್ದಾರೆ ಅನ್ನೋ ಹಾಸ್ಯದ ವಿಡಿಯೋ ಇದೀಗ ವೈರಲ್ ಆಗಿದೆ.

 

ಹರಾಜಿಗೆ ತಯಾರಿ ಮಾಡುತ್ತಿದ್ದ  RCB ರೂಂ ಪ್ರವೇಶಿಸಿದ ನ್ಯಾಗ್ಸ್, ತನ್ನನ್ನು ತಂಡಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ನ್ಯಾಗ್ಸ್ ಮನವಿ ಪುರಸ್ಕರಿಸಿದ  RCB ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ.