ಕೋಲ್ಕತಾ(ಡಿ.19): 13ನೇ ಆವೃತ್ತಿ ಐಪಿಎಲ್ ಹರಾಜು ತೀವ್ರ ಕುತೂಹಲ ಕೆರಳಿಸಿದೆ. ಆರಂಭದಲ್ಲೇ ಗರಿಷ್ಠ ಮೊತ್ತದ ಬಿಡ್ಡಿಂಗ್ ನಡೆದಿದೆ. ಇದುವರೆಗಿನ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ  ಕ್ರಿಕೆಟಿಗರ ಪೈಕಿ ಗ್ಲೆನ್ ಮ್ಯಾಕ್ಸ್‌ವೆಲ್ 2ನೇ ಸ್ಥಾನ ಅಂಲಕರಿಸಿದ್ದಾರೆ. ಆಸ್ಟ್ರೇಲಿಯಾ ಆಲ್ರೌಂಡರ್   ಗ್ಲೆನ್ ಮ್ಯಾಕ್ಸ್ ವೆಲ್10.75 ಕೋಟಿ ರೂಪಾಯಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಲಾಗಿದ್ದಾರೆ.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

2 ಕೋಟಿ ಮೂಲ ಬೆಲೆ ಹೊಂದಿದ್ದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಖರೀದಿಸಲು ಡೆಲ್ಲಿ ಹಾಗೂ ಪಂಜಾಬ್ ನಡುವೆ ಪೈಪೋಟಿ ಎರ್ಪಟ್ಟಿತ್ತು. ಅಂತಿಮವಾಗಿ ಪಂಜಾಬ್ ತಂಡ ಗ್ಲೆನ್ ಮ್ಯಾಕ್ಸ್ ವೆಲ್ ಖರೀದಿಸಿತು. ಈ ಬಾರಿಯ ಹರಾಜಿನಲ್ಲಿ ಪಂಜಾಬ್ ತಂಡದ ಬಳಿ 42.70 ಕೋಟಿ ಹಣದೊಂದಿಗೆ ಪಾಲ್ಗೊಂಡಿದೆ. ಹೀಗಾಗಿ ದುಬಾರಿ ಆಟಗಾರರನ್ನು ಖರೀದಿಸಲು ಪಂಜಾಬ್ ಹಿಂದೇಟು ಹಾಕುತ್ತಿಲ್ಲ.