ಕೋಲ್ಕತಾ(ಡಿ.19): ಕಳೆದ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿದ್ದಾಗ ಮಿಂಚಿನಂತೆ ಬಂದ ಸೌತ್ ಆಫ್ರಿಕಾ ವೇಗಿ ಡೇಲ್ ಸ್ಟೇನ್ ತಂಡದ ಲಕ್ ಬದಲಿಸಿದ್ದರು. ಸ್ಟೇನ್ 3 ಪಂದ್ಯ ಆಡಿ 3ರಲ್ಲೂ RCBಗೆ ಗೆಲುವು ತಂದುಕೊಟ್ಟಿದ್ದರು. ಇದೀಗ ಹರಾಜಿನ ಆರಂಭದಲ್ಲಿ ಅನ್‌ಸೋಲ್ಡ್ ಆಗಿದ್ದ ಡೇಲ್ ಸ್ಟೇನ್ ಅಂತಿಮ ಹಂತದಲ್ಲಿ RCB ಖರೀದಿಸಿದೆ.

IPL ಹರಾಜು: ಕೊನೆಗೂ ಕನ್ನಡಿಗನನ್ನು ಖರೀದಿಸಿದ RCB

ಡೇಲ್ ಸ್ಟೇನ್‌ಗೆ 2 ಕೋಟಿ ರೂಪಾಯಿ ನೀಡಿ RCB ಖರೀದಿಸಿತು. ಈ ಮೂಲಕ ಕಳೆಗುಂದಿದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಕಳೆದ ಆವೃತ್ತಿಯಲ್ಲಿ ಆರಂಭಿಕ 6 ಪಂದ್ಯದಲ್ಲಿ ಸತತ ಸೋಲು ಕಂಡಿದ್ದ RCB, ಡೇಲ್ ಸ್ಟೇನ್ ಆಗಮನದ ಬಳಿಕ ಸತತ 3 ಪಂದ್ಯ ಗೆದ್ದಿತ್ತು.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಭುಜದ ನೋವಿಗೆ ತುತ್ತಾದ ಡೇಲ್ ಸ್ಟೇನ್ RCB ತಂಡದಿಂದ ಹೊರಬಿದ್ದರು. ಬಳಿಕ ಇಂಜುರಿ ಗಂಭೀರವಾದ ಕಾರಣ 2019ರ ವಿಶ್ವಕಪ್ ಟೂರ್ನಿಯಿಂದಲೂ ಹೊರಬಿದ್ದಿದ್ದರು.  ಇದೀಗ ಸ್ಟೇನ್ ಖರೀದಿಸೋ ಮೂಲಕ ಮತ್ತೆ ಚಾಂಪಿಯನ್ ಬೌಲರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈ ಬಾರಿಯ ಹರಾಜಿನಲ್ಲಿ RCB ಒಟ್ಟು 8 ಆಟಗಾರರನ್ನು ಖರೀದಿಸಿತು