ಕೋಲ್ಕತಾ(ಡಿ.19):  ಐಪಿಎಲ್ 2020ಕ್ಕೆ ಭಾರಿ ಸಿದ್ಧತೆ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸುತ್ತಿದೆ. ಈ ಹರಾಜಿನಲ್ಲಿ ಮೊದಲ ಆಟಗಾರನಾಗಿ  RCB , ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಆ್ಯರೋನ್ ಫಿಂಚ್ ಖರೀದಿಸಿತು. ಬರೋಬ್ಬರಿ 4.4 ಕೋಟಿ ರೂಪಾಯಿ  RCB ಖರೀದಿ ಮಾಡಿದೆ.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಆಸ್ಟ್ರೇಲಿಯಾ ತಂಡದ ಏಕದಿನ ನಾಯಕ ಫಿಂಚ್ 2010ರಿಂದ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯರಾಗಿದ್ದಾರೆ. ಆದರೆ 2019ರ ಹರಾಜಿನಲ್ಲಿ ಫಿಂಚ್ ಸೇಲಾಗದೇ ಉಳಿದಿದ್ದರು. ಇದೀಗ  RCB ಫಿಂಚ್ ಖರೀದಿಸೋ ಮೂಲಕ ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠ ಗೊಳಿಸಿದೆ.

ಐಪಿಎಲ್ ಟೂರ್ನಿಯಲ್ಲಿ  75 ಪಂದ್ಯ ಆಡಿರುವ ಫಿಂಚ್ 1737 ರನ್ ಸಿಡಿಸಿದ್ದಾರೆ. ಫಿಂಚ್ ಐಪಿಎಲ್ ಟೂರ್ನಿಯಲ್ಲಿ 13 ಅರ್ಧಶತಕ ಸಿಡಿಸಿದ್ದಾರೆ.