ಕೋಲ್ಕತಾ(ಡಿ.19):  ಐಪಿಎಲ್ ಆಟಗಾರರ ಹರಾಜು ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೋರಾಟ ನಡೆಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ 2.4 ಕೋಟಿ ರೂಪಾಯಿ ನೀಡಿ ಕ್ಯಾರಿ ಖರೀದಿಸುವಲ್ಲಿ ಯಶಸ್ವಿಯಾಯಿತು

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

RCB ತಂಡದಲ್ಲಿ ಸದ್ಯ ಪಾರ್ಥೀವ್ ಪಟೇಲ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಮತ್ತೊರ್ವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೇಲೆ ಕಣ್ಣಿಟ್ಟಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ 2.4 ಕೋಟಿ ರೂಪಾಯಿ ನೀಡಿ ಖರೀದಿಸಿತು. 

ಆಸ್ಟ್ರೇಲಿಯಾ ಪರ ಅಲೆಕ್ಸ್ ಕ್ಯಾರಿ 25 ಟಿ20 ಹಾಗೂ 29 ಏಕದಿನ ಪಂದ್ಯ ಆಡಿದ್ದಾರೆ.