ಕೋಲ್ಕತಾ(ಡಿ.19): ಐಪಿಎಲ್ ಹರಾಜಿನ ನಡುವೆ ಕಿಂಗ್ಸ್ ಇಲೆವೆನ್ ಪಂಜಾಬ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಅದರಲ್ಲೂ ಕನ್ನಡಿಗರಿಗೆ ಮತ್ತಷ್ಟು ಖುಷಿ ನೀಡಿದೆ. ಕಾರಣ ಹರಾಜು ನಡೆಯುತ್ತಿರುವಾಗಲೇ ಕಿಂಗ್ಸ್ ಇಲೆವೆನ್ ಪಂಜಾಬ್, ಕನ್ನಡಿಗ ಕೆ.ಎಲ್ ರಾಹುಲ್‌ಗೆ ನಾಯಕ ಪಟ್ಟ ನೀಡಿದೆ. ಈ ಮೂಲಕ ಪಂಜಾಬ್ ಈಗಲೇ 2020ರ ಐಪಿಲ್ ಟೂರ್ನಿಗೆ ಸಜ್ಜಾಗಿದೆ.

 

ಈ ಬಾರಿಯ ಐಪಿಲ್ ಹರಾಜಿನಲ್ಲಿ ಗರಿಷ್ಠ ಮೊತ್ತದೊಂದಿಗೆ ಅಖಾಡಕ್ಕಿಳಿದ ಪಂಜಾಬ್, ಗ್ಲೆನ್ ಮ್ಯಾಕ್ಸ್‌ವೆಲ್, ಶೆಲ್ಡಾನ್ ಕ್ರಾಟ್ರೆಲ್, ರವಿ ಬಿಶ್ನೋಯಿ, ದೀಪಕ್ ಹೂಡ, ಜೇಮ್ಸ್ ನೀಶಮ್, ಇಶಾನ್ ಪೊರೆಲ್ ಖರೀದಿಸಿದೆ. ಈ ಮೂಲಕ ಬಲಿಷ್ಠ ತಂಡವನ್ನು ಕಟ್ಟಿದ್ದಾರೆ.
Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?