ಕೋಲ್ಕತಾ[ಡಿ.19]: ಬಹುನಿರೀಕ್ಷಿತ 2020ರ ಐಪಿಎಲ್ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಕೋಲ್ಕತಾದಲ್ಲಿ ನಡೆಯಲಿರುವ ಹರಾಜಿಗೆ ಒಟ್ಟು 971 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದರಲ್ಲಿ ಫ್ರಾಂಚೈಸಿಗಳು 332 ಆಟಗಾರನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು.

ಇಂದು IPL ಆಟಗಾರರ ಹರಾಜು; ಯಾರಿಗೆ ಸಿಗುತ್ತೆ ಜಾಕ್‌ಪಾಟ್..?

ಮಿಲಿಯನ್ ಡಾಲರ್ ಟೂರ್ನಿ ಹರಾಜಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕರ್ನಾಟಕದ ಕ್ರಿಕೆಟಿಗ ಸೇರಿದಂತೆ ಆರು 6 ಆಟಗಾರರು ಹರಾಜಿನಲ್ಲಿ ಸ್ಥಾನ ಪಡೆದಿದ್ದಾರೆ. ಹೌದು, ಕನ್ನಡಿಗ ವಿನಯ್ ಕುಮಾರ್, ಅಶೋಕ್ ದಿಂಡಾ, ಮ್ಯಾಥ್ಯೂ ವೇಡ್, ರಾಬಿನ್ ಬಿಶ್ತ್, ಸಂಜಯ್ ಯಾದವ್ ಹಾಗೂ ಜೇಕ್ ವೆದರ್ಲ್ಡ್ ಹರಾಜಿಗೆ ಲಭ್ಯರಾಗಿದ್ದಾರೆ. ಹೀಗಾಗಿ ಇದೀಗ ಒಟ್ಟು 338 ಆಟಗಾರರು ಅಂತಿಮ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. 

ವಿನಯ್ ಕುಮಾರ್ ಕಳೆದ ಕೆಲ ವರ್ಷಗಳ ಕಾಲ ಕೋಲ್ಕತಾ ನೈಟ್’ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಕಳಪೆ ಪ್ರದರ್ಶನ ತೋರಿದ್ದರಿಂದ 2019ರ ಹರಾಜಿನಲ್ಲಿ ವಿನಯ್ ಖರೀದಿಸಲು ಯಾವ ಫ್ರಾಂಚೈಸಿಯೂ ಮುಂದಾಗಿರಲಿಲ್ಲ. ಆದರೆ ಇದೀಗ 8 ಫ್ರಾಂಚೈಸಿಗಳ ಪೈಕಿ ಒಂದು ಫ್ರಾಂಚೈಸಿ ವಿನಯ್ ಖರೀದಿಸಲು ಆಸಕ್ತಿ ತೋರಿದೆ ಎನ್ನಲಾಗುತ್ತಿದ್ದು, ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಧೋನಿ to ಉನಾದ್ಕಟ್: ಪ್ರತಿ IPL ಆವೃತ್ತಿಯ ದುಬಾರಿ ಆಟಗಾರರ ಲಿಸ್ಟ್!

ಇನ್ನುಳಿದಂತೆ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿರುವ ಮ್ಯಾಥ್ಯೂ ವೇಡ್ ಹಾಗೂ ಜೇಕ್ ವೆದರ್ಲ್ಡ್ ಕೂಡ ಹರಾಜಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ದುಬಾರಿ ಮೊತ್ತಕ್ಕೆ ಸೇಲಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಪದೇ ಪದೇ ಚುಟುಕು ಕ್ರಿಕೆಟ್’ನಲ್ಲಿ ದುಬಾರಿ ಬೌಲರ್ ಆಗಿ ಹೊರಹೊಮ್ಮಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಅಶೋಕ್ ದಿಂಡಾ ಹರಾಜಿನಲ್ಲಿ ಸ್ಥಾನ ಪಡೆದದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಐಪಿಎಲ್ ಆಟಗಾರರ ಹರಾಜಿಗೆ ಇದೇ ಮೊದಲ ಬಾರಿಗೆ ಕೋಲ್ಕತಾ ಆತಿಥ್ಯ ವಹಿಸಿದ್ದು, ಮಧ್ಯಾಹ್ನ 2.30ರಿಂದ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿನ ಪ್ರತಿಕ್ಷಣದ ಮಾಹಿತಿಗಾಗಿ ಸುವರ್ಣ ನ್ಯೂಸ್.ಕಾಂ ಅನ್ನು ತಪ್ಪದೇ ಫಾಲೋ ಮಾಡಿ...