ಬೆಂಗಳೂರು(ಮಾ.08): ಐಪಿಎಲ್ 2020ಕ್ಕೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತರಬೇತಿ ಶಿಬಿರದಲ್ಲಿ ಯುವ ಕ್ರಿಕೆಟಿಗರು ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ನಾಯಕ ಕೊಹ್ಲಿ ಸೇರಿದಂತೆ ಇತರ ಅಂತಾರಾಷ್ಟ್ರೀಯ ಕ್ರಿಕೆಟಿಗರು ಮಾ.22ರಂದು ತಂಡ  ಸೇರಿಕೊಳ್ಳಲಿದ್ದಾರೆ. ತಯಾರಿ ನಡೆಸುತ್ತಿರುವ RCB ತಂಡಕ್ಕೆ ಮತ್ತೆ ಪ್ರಶಸ್ತಿ ಯಾವಾಗ ಅನ್ನೋ ಪ್ರಶ್ನೆ ಎದುರಾಗಿದೆ. 

ಇದನ್ನೂ ಓದಿ: RCB ಈಗ ಸಂಪೂರ್ಣ ಕನ್ನಡಮಯ; IPLನಲ್ಲಿ ಕೊಹ್ಲಿ ಸೈನ್ಯದ ಹೊಸ ಅಧ್ಯಾಯ!.

12 ವರ್ಷಗಳೇ ಉರುಳಿಸಿದ ಪ್ರಶಸ್ತಿ ಮಾತ್ರ ಬಂದಿಲ್ಲ ಅನ್ನೋ ಪ್ರಶ್ನೆಗೆ ಕೊಹ್ಲಿ ಖಡಕ್ ಆಗಿ ಉತ್ತರಿಸಿದ್ದಾರೆ. 12 ವರ್ಷ ಆಗಿದೆ. ಇದು 13ನೇ ವರ್ಷ, ನಿನ್ನೆ ಆಗಿಲ್ಲ ಎಂದರೆ ಇಂದೂ ಆಗಲ್ಲ ಎಂದರ್ಥವಲ್ಲ. 13ನೇ ಆವೃತ್ತಿ ನಮ್ಮ ನಿಮ್ಮೆಲ್ಲರ ಆವೃತ್ತಿ ಎಂದು ಕೊಹ್ಲಿ ಪರೋಕ್ಷವಾಗಿ 2020ರಲ್ಲಿ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲುತ್ತೆ ಎಂದಿದ್ದಾರೆ.

 

ಈ ಮಾತನನ್ನು ಐಪಿಎಲ್ ಜಾಹೀರಾತಿನಲ್ಲಿ ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಎದುರಿಸಿದ ಪ್ರಶ್ನೆಗಳನ್ನು ಆಧಾರವಾಗಿಟ್ಟುಕೊಂಡು ಜಾಹೀರಾತು ತಯಾರಿಸಲಾಗಿದೆ. ಇದರಲ್ಲಿ ಗ್ಯಾಂಗ್‌ಸ್ಟರ್ ಸ್ಟೈಲ್‌ನಲ್ಲಿ ಕೊಹ್ಲಿ 13ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುತ್ತೇವೆ ಎಂದಿದ್ದಾರೆ. ಇದೀಗ ಕೊಹ್ಲಿ ಜಾಹೀರಾತು ವೈರಲ್ ಆಗಿದೆ.

ಮಾರ್ಚ್ 29 ರಿಂದ 13ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಮೇ.24ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿನ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ.