Asianet Suvarna News Asianet Suvarna News

ಆರ್‌ಸಿಬಿಗಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲು..!

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಸೆಣಸಾಡಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2020 Virat Kohli Led RCB take on Mumbai Indians in Dubai kvn
Author
Dubai - United Arab Emirates, First Published Sep 28, 2020, 8:36 AM IST

ದುಬೈ(ಸೆ.28): 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಿಶ್ರಫಲ ಅನುಭವಿಸಿದೆ. ಶುಭಾರಂಭದೊಂದಿಗೆ ಅಭಿಯಾನ ಆರಂಭಿಸಿದ ಆರ್‌ಸಿಬಿ, ಪಂಜಾಬ್‌ ವಿರುದ್ಧ 97 ರನ್‌ಗಳ ಸೋಲುಂಡಿತ್ತು. ಇದೀಗ ಕೊಹ್ಲಿ ಬಳಗ ಮತ್ತೆ ಗೆಲುವಿನ ಲಯಕ್ಕೆ ಮರಳಲು ಕಾತರಿಸುತ್ತಿದ್ದು, ಜಯದ ನಿರೀಕ್ಷೆಯಲ್ಲಿ ಕಣಕ್ಕಿಳಿಯುತ್ತಿದೆ. ಸೋಮವಾರ ಇಲ್ಲಿ ನಡೆ​ಯ​ಲಿ​ರುವ ಪಂದ್ಯ​ದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ​ವನ್ನು ಎದು​ರಿ​ಸಲು ಸಜ್ಜಾ​ಗಿದೆ.

ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಎದುರು ಸೋತಿದ್ದ ಮುಂಬೈ, 2ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ 49 ರನ್‌ಗಳ ಗೆಲುವು ಪಡೆದು ಆತ್ಮವಿಶ್ವಾಸ ಗಳಿ​ಸಿದೆ. ಆಡಿರುವ 2 ಪಂದ್ಯದಲ್ಲಿ ತಲಾ 1 ಸೋಲು, 1 ಜಯ ಕಂಡಿರುವ ಮುಂಬೈ ಗೆಲುವಿನ ಲಯವನ್ನು ಮುಂದುವರಿಸುವ ತವಕದಲ್ಲಿದೆ. ಈ ಪಂದ್ಯವನ್ನು ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ನಡುವಿನ ಫೈಟ್‌ ಎಂದೇ ಹೇಳಲಾಗುತ್ತಿದೆ.

ಆರ್‌ಸಿಬಿ ತಂಡ​ದಲ್ಲಿ ಬದ​ಲಾ​ವಣೆ?: ದೇವದತ್‌ ಪಡಿ​ಕ್ಕಲ್‌ ಸ್ಥಿರತೆ ಕಾಯ್ದು​ಕೊ​ಳ್ಳು​ತ್ತಿ​ಲ್ಲ​ವಾ​ದರೂ ಅವ​ರಿಗೆ ಹೆಚ್ಚಿನ ಅವ​ಕಾಶ ಸಿಗ​ಲಿದೆ. ಆದರೆ ಆ್ಯರೋನ್‌ ಫಿಂಚ್‌ ನಿರೀ​ಕ್ಷಿತ ಪ್ರದ​ರ್ಶನ ತೋರು​ತ್ತಿಲ್ಲ. ಜೋಶ್ವಾ ಫಿಲಿಪಿ, ಡೇಲ್‌ ಸ್ಟೇನ್‌ ಮೇಲೂ ಒತ್ತಡವಿದೆ. ಈ ಪಂದ್ಯ​ದಲ್ಲಿ ಮೋಯಿನ್‌ ಅಲಿ, ಇಸುರು ಉಡಾನ ಆಡುವ ಸಾಧ್ಯತೆ ಇದೆ. ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ ಲಭ್ಯತೆ ಬಗ್ಗೆ ಸ್ಪಷ್ಟತೆ ಇಲ್ಲ. ಆರ್‌ಸಿಬಿ ಪ್ಲೇ-ಆಫ್‌ನತ್ತ ಹೆಜ್ಜೆ ಹಾಕ​ಬೇ​ಕಿ​ದ್ದರೆ ಇರುವ ಆಯ್ಕೆಗಳನ್ನು ಸಮ​ರ್ಪಕವಾಗಿ ಬಳ​ಸಿ​ಕೊ​ಳ್ಳ​ಬೇ​ಕಿದೆ. ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿ​ಯ​ರ್ಸ್ ಮೇಲೆಯೇ ಹೆಚ್ಚು ಅವ​ಲಂಬಿತಗೊಂಡರೆ ಕಳೆದ 3 ವರ್ಷಗಳಂತೆಯೇ ಲೀಗ್‌ನಲ್ಲೇ ಹೊರ​ಬೀ​ಳ​ಬೇ​ಕಾ​ಗು​ತ್ತದೆ.

ಬೃಹತ್ ಟಾರ್ಗೆಟ್ ಚೇಸ್ ಮಾಡಿ ಗೆದ್ದ ರಾಜಸ್ಥಾನ, IPL ಇತಿಹಾಸದಲ್ಲೇ ದಾಖಲೆ!

ಬಲಿ​ಷ್ಠವಾ​ಗಿದೆ ಮುಂಬೈ: ಹಾಲಿ ಚಾಂಪಿ​ಯನ್‌ ಮುಂಬೈ, ಆರ್‌ಸಿಬಿ​ಗಿಂತ ಹೆಚ್ಚು ಸಮ​ತೋ​ಲನ ಹೊಂದಿದೆ. ರೋಹಿತ್‌ ಹಾಗೂ ಸೂರ್ಯ​ಕು​ಮಾರ್‌ ಯಾದವ್‌ ಅತ್ಯು​ತ್ತಮ ಲಯ​ದ​ಲ್ಲಿ​ದ್ದಾರೆ. ಡಿ ಕಾಕ್‌, ಪಾಂಡ್ಯ ಸಹೋ​ದ​ರರು, ಪೊಲ್ಲಾರ್ಡ್‌ ಹೀಗೆ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಮುಂಬೈ ಹೊಂದಿದೆ. ಜಸ್‌ಪ್ರೀತ್‌ ಬೂಮ್ರಾ, ಟ್ರೆಂಟ್‌ ಬೌಲ್ಟ್‌ರಂತಹ ಶ್ರೇಷ್ಠ ವೇಗಿ​ಗಳ ಬಲವಿದೆ. ಆದರೆ ತಂಡ ಅನು​ಭವಿ ಸ್ಪಿನ್ನರ್‌ನ ಕೊರತೆ ಎದು​ರಿ​ಸು​ತ್ತಿದೆ. ಯುವ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಹರ್‌ ಮೇಲೆ ದೊಡ್ಡ ಜವಾ​ಬ್ದಾರಿ ಇದೆ.

ಹಾಲಿ ಚಾಂಪಿ​ಯನ್‌ ಮುಂಬೈ ವಿರುದ್ಧ ಗೆಲುವು ಸಾಧಿ​ಸಿ​ ಆತ್ಮ​ವಿ​ಶ್ವಾಸ ಮರಳಿ ಪಡೆ​ಯಲು ಆರ್‌ಸಿಬಿ ಕಾತ​ರಿ​ಸು​ತ್ತಿದೆ. ಮತ್ತೊಂದೆಡೆ ಕೊಹ್ಲಿ ಮೇಲೆ ಮೇಲುಗೈ ಸಾಧಿಸಿ, ಟೀಂ ಇಂಡಿ​ಯಾದ ನಾಯಕ​ತ್ವದ ರೇಸ್‌ನಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಲು ಎದುರು ನೋಡು​ತ್ತಿ​ದ್ದಾರೆ.

ಒಟ್ಟು ಮುಖಾಮುಖಿ: 27

ಆರ್‌ಸಿಬಿ: 09

ಮುಂಬೈ: 18

ಸಂಭವನೀಯ ಆಟಗಾರರ ಪಟ್ಟಿ:

ಆರ್‌ಸಿಬಿ: ಆ್ಯರೋನ್‌ ಫಿಂಚ್‌, ದೇವದತ್‌ ಪಡಿಕ್ಕಲ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌, ಮೊಯಿನ್ ಅಲಿ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ನವದೀಪ್‌ ಸೈನಿ, ಉಮೇಶ್‌ ಯಾದವ್‌, ಡೇಲ್‌ ಸ್ಟೇನ್‌, ಯಜುವೇಂದ್ರ ಚಹಲ್‌.

ಮುಂಬೈ: ಕ್ವಿಂಟನ್‌ ಡಿಕಾಕ್‌, ರೋಹಿತ್‌ ಶರ್ಮಾ (ನಾಯಕ), ಸೂರ್ಯಕುಮಾರ್‌, ಸೌರಭ್‌ ತಿವಾರಿ, ಹಾರ್ದಿಕ್‌ ಪಾಂಡ್ಯ, ಪೊಲ್ಲಾರ್ಡ್‌, ಕೃನಾಲ್‌ ಪಾಂಡ್ಯ, ರಾಹುಲ್‌ ಚಹರ್‌, ಜೇಮ್ಸ್‌ ಪ್ಯಾಟಿನ್ಸನ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬುಮ್ರಾ.

ಪಿಚ್‌ ರಿಪೋರ್ಟ್‌

ದುಬೈ ಪಿಚ್‌ ಸ್ಪಿನ್‌ ಸ್ನೇಹಿಯಾಗಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚಿನ ಲಾಭ ದೊರಕಲಿದೆ. ಈ ಮೈದಾನದಲ್ಲಿ ಈಗಾಗಲೇ 4 ಪಂದ್ಯಗಳು ನಡೆದಿದ್ದು, ನಾಲ್ಕರಲ್ಲೂ ಬೌಲರ್‌ಗಳು ನಿರ್ಣಾಯಕ ಪಾತ್ರವಹಿಸಿದ್ದಾರೆ. ಮೊದಲು ಬ್ಯಾಟ್‌ ಮಾಡುವ ತಂಡಕ್ಕಿಂತ 2ನೇ ಬ್ಯಾಟಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಯಶಸ್ಸು ಸಿಗಲಿದೆ. ಹೀಗಾಗಿ ಈ ಪಂದ್ಯದಲ್ಲಿ ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಪಂದ್ಯ ಆರಂಭ: ರಾತ್ರಿ 7.30, 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
 

Follow Us:
Download App:
  • android
  • ios