ದುಬೈ(ಅ.22): 13ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 8 ತಂಡಗಳು ಜಿದ್ದಾ ಜಿದ್ದಿನ ಹೋರಾಟ ನಡೆಸುತ್ತಿದೆ. ಇದೀಗ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ರೇಸ್‌ ಆಸೆ ಜೀವಂತವಾಗಿರಿಸಲು ಹೋರಾಟ ನಡೆಸುತ್ತಿದೆ. ರಾಜಸ್ಥಾನ ವಿರುದ್ಧದ ಗೆಲ್ಲಲೇಬೇಕು ಎಂಬ ಹಠದಲ್ಲಿರುವ ಹೈದರಾಬಾದ್ ತಂಡಕ್ಕೆ ವೆಸ್ಟ್ ಇಂಡೀಸ್ ಬಿಗ್ ಮ್ಯಾನ್ ಜೇಸನ್ ಹೋಲ್ಡರ್ ಸೇರಿಸಿಕೊಳ್ಳಲಾಗಿದೆ.

ಐಪಿಎಲ್ ಲೀಗ್‌ನಿಂದ ಕಿಕೌಟ್‌ ಪಕ್ಕಾ: ಚೆನ್ನೈ ಇಂದಿನ ಸ್ಥಿತಿಗೆ ಕಾರಣ ಯಾರು ಗೊತ್ತಾ?.

ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಇಷ್ಟೇ ಅಲ್ಲ ತಂಡದಲ್ಲಿ ಮಹತ್ತರ 2 ಬದಲಾವಣೆ ಮಾಡಲಾಗಿದೆ. ಜೇಸನ್ ಹೋಲ್ಡರ್ ಹಾಗೂ ಶಹಭಾಜ್ ನದೀಮ್ ತಂಡ ಸೇರಿಕೊಂಡಿದ್ದಾರೆ.

 

ಆದರೆ ರಾಜಸ್ಥಾನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತ ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ಎಚ್ಚರಿಕೆಯ ಆರಂಭ ಪಡೆದಿದೆ.