ದುಬೈ(ಅ,20): ಶಿಖರ್ ಧವನ್ ಹೊರತು ಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅಬ್ಬರಿಸಲು ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಶಿಖರ್ ಧವನ್ ಪಂಜಾಬ್ ವಿರುದ್ಧವೂ ಅಬ್ಬರಿಸಿದ್ದಾರೆ. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿದೆ.

ಸತತ 2ನೇ ಸೆಂಚುರಿ, ಐಪಿಎಲ್ ಟೂರ್ನಿಯಲ್ಲಿ ಧವನ್ ದಾಖಲೆ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ ಪೃಥ್ವಿ ಶಾ 7 ರನ್ ಸಿಡಿಸಿ ಔಟಾದರು. ಆದರೆ ಶಿಖರ್ ಧವನ್ ಅಬ್ಬರ ಆರಂಭಗೊಂಡಿತು. ಇತ್ತ ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಸಾಥ್ ನೀಡಿದರು.

ಶ್ರೇಯಸ್ ಅಯ್ಯರ್ 14 ರನ್ ಸಿಡಿಸಿ ಔಟಾದರು. ಇತ್ತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ರಿಷಬ್ ಪಂತ್ 14 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ಕಸ್ ಸ್ಟೊಯ್ನಿಸ್ ಕೇವಲ 9 ರನ್ ಸಿಡಿಸಿ ಔಟಾದರು.

ಆದರೆ ಅಬ್ಬರಿಸಿದ ಶಿಖರ್ ಧವನ್  ಸತತ 2ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಸತತ 2 ಸೆಂಚುರಿ ಸಿಡಿಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

IPL 2020: ಮತ್ತೊಂದು ದಾಖಲೆ ಬರೆದ ಶಿಖರ್ ಧವನ್!.

ಧವನ್ ಅಜೇಯ 106 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್  164ತಂಡ ರನ್ ಸಿಡಿಸಿದೆ. ಶಿಖರ್ ಧವನ್ ಹೊರತು ಪಡಿಸಿದರೆ ಇನ್ಯಾರೂ ಕೂಡ ಅಬ್ಬರಿಸಿಲ್ಲ. ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿಯೂ ಕಡಿಮೆ ಮೊತ್ತ ದಾಖಲಿಸಿದ ತಂಡಗಳ ಪೈಕಿ ಡೆಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

164/5 ಧವನ್( 106*) DC v KXIP 2020
170/4 ಮನೀಶ್ ಪಾಂಜೆ(114* )RCB v Deccan 2009
177/4 ಡೇವಿಡ್ ವಾರ್ನರ್ (107*) DD v KKR 2010